ADVERTISEMENT

ಅಣುಶಕ್ತಿ ಸ್ಥಾವರದ ಬಳಕೆಗೆ ಯುರೇನಿಯಂ ಆಮದು: ಭಾರತ ನಿರ್ಧಾರ

ಐಎಎನ್ಎಸ್
Published 31 ಮಾರ್ಚ್ 2022, 8:05 IST
Last Updated 31 ಮಾರ್ಚ್ 2022, 8:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಭಾರತವು ಮುಂದಿನ ಹಣಕಾಸು ವರ್ಷದಲ್ಲಿ 100 ಟನ್ ನೈಸರ್ಗಿಕ ಯುರೇನಿಯಂ ಆಮದು ಮಾಡಿಕೊಳ್ಳಲಿದೆ ಎಂದು ಸರ್ಕಾರ ಹೇಳಿದೆ.

ಲೋಕಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್, 2022–23ನೇ ಸಾಲಿನಲ್ಲಿ ಭಾರತ 100 ಟನ್ ನೈಸರ್ಗಿಕ ಯುರೇನಿಯಂ ಅನ್ನು, ಯುರೇನಿಯಂ ಅದಿರಿನ ರೂಪದಲ್ಲಿ ಆಮದು ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ ಎಂದಿದ್ದಾರೆ.

ಭಾರತ ಸರ್ಕಾರ, ರಷ್ಯಾ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದು, ಕೂಡಕೂಳಂನಲ್ಲಿರುವ ರಷ್ಯಾದ ರಿಯಾಕ್ಟರ್‌ಗಳಿಗೆ ಇಂಧನ ಪೂರೈಕೆಗೆ ಸಮ್ಮತಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

ಅಲ್ಲದೆ, ಯುರೇನಿಯಂ ಖರೀದಿ ಕುರಿತು ಕೆನಡಾ, ಕಜಕಿಸ್ತಾನ, ರಷ್ಯಾ ಮತ್ತು ಉಜ್ಬೇಕಿಸ್ತಾನ ಜತೆಗೂ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.

2021–22ನೇ ಸಾಲಿನಲ್ಲಿ ಭಾರತಕ್ಕೆ ಯಾವುದೇ ಅಣು ಇಂಧನ ಆಮದಾಗಿಲ್ಲ.

21ನೇ ಹಣಕಾಸು ವರ್ಷದಲ್ಲಿ ಕಜಕಿಸ್ತಾನದಿಂದ 999.82 ಟನ್ ನೈಸರ್ಗಿಕ ಯುರೇನಿಯಂ ಅದಿರನ್ನು ₹572.44 ಕೋಟಿ ವೆಚ್ಚದಲ್ಲಿ ಮತ್ತು ಕೆನಡಾದಿಂದ 1000.479 ಟನ್ ಅದಿರನ್ನು ₹618.95 ಕೋಟಿಗೆ ಆಮದು ಮಾಡಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.