ADVERTISEMENT

IndiGo Crisis: ಇಂಡಿಗೊಗೆ ಪೆಟ್ಟು; ಶೇ 5ರಷ್ಟು ವಿಮಾನಯಾನ ಕಡಿತಗೊಳಿಸಿದ DGCA

ಪಿಟಿಐ
Published 9 ಡಿಸೆಂಬರ್ 2025, 7:13 IST
Last Updated 9 ಡಿಸೆಂಬರ್ 2025, 7:13 IST
<div class="paragraphs"><p>ಇಂಡಿಗೊ&nbsp;</p></div>

ಇಂಡಿಗೊ 

   

(ಪಿಟಿಐ ಚಿತ್ರ)

ನವದೆಹಲಿ: ಇಂಡಿಗೊ ವಿಮಾನಯಾನದ ವೇಳಾಪಟ್ಟಿಯಲ್ಲಿ ಶೇ 5ರಷ್ಟು ಕಡಿತಗೊಳಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು (ಮಂಗಳವಾರ) ಆದೇಶ ಹೊರಡಿಸಿದೆ.

ADVERTISEMENT

ಡಿಸೆಂಬರ್ 1ರಿಂದ ಇಂಡಿಗೊ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಹಲವಾರು ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದ್ದರು.

ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಡಿಜಿಸಿಎ, ಇಂಡಿಯಾ ವಿಮಾನಗಳ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ವರದಿಯ ಪ್ರಕಾರ, ಹೆಚ್ಚು ಬೇಡಿಕೆ ಇರುವ ಹಾಗೂ ಹೆಚ್ಚು ದಟ್ಟಣೆಯ ಮಾರ್ಗಗಳಲ್ಲಿ ಇಂಡಿಗೊ ವಿಮಾನಗಳ ಸಂಚಾರವನ್ನು ಕಡಿತಗೊಳಿಸಿದೆ.

ಅಲ್ಲದೆ, ಬುಧವಾರ ಸಂಜೆ 5 ಗಂಟೆಯೊಳಗೆ ಪರಿಷ್ಕೃತ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಇಂಡಿಗೊ ಸಂಸ್ಥೆಗೆ ಡಿಜಿಸಿಎ ನಿರ್ದೇಶನ ನೀಡಿದೆ.

ಮುಂದಿನ ಚಳಿಗಾಲದ ವೇಳಾಪಟ್ಟಿಯಲ್ಲಿ ಇಂಡಿಗೊ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಕ್ರಮ ಉಂಟಾಗಿದೆ. ಕಡಿತ ಮಾಡಿದ ವಿಮಾನ ಹಾರಾಟಗಳನ್ನು ಬೇರೆ ಸಂಸ್ಥೆಗಳಿಗೆ ಹಂಚಲಾಗುವುದು ಎಂದು ರಾಮಮೋಹನ್ ಹೇಳಿದ್ದರು.

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 65ಕ್ಕೂ ಹೆಚ್ಚು ಪಾಲನ್ನು ಹೊಂದಿರುವ ಇಂಡಿಗೊ, ದೈನಂದಿನ 2,200ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸುತ್ತದೆ. ಈ ಪೈಕಿ 90ರಷ್ಟು ದೇಶೀಯ ಹಾಗೂ 40ಕ್ಕೂ ಹೆಚ್ಚು ವಿದೇಶಿ ಗಮ್ಯಸ್ಥಾನಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.