ಇಂಡಿಗೊ ವಿಮಾನ
–ಪಿಟಿಐ ಚಿತ್ರ
ಸಿಡ್ನಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಅವರು ₹11,594 ಕೋಟಿ ಮೌಲ್ಯದ ಷೇರುಗಳನ್ನು (ಶೇ 5.7ರಷ್ಟು ಪಾಲು) ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಷೇರುಗಳನ್ನು ತಲಾ ₹5,230ರಂತೆ ಮಾರಾಟ ಮಾಡಲಾಗಿದೆ. ಒಟ್ಟು 2.21 ಕೋಟಿ ಷೇರುಗಳು ಮಾರಾಟವಾದವು ಎಂದು ದಾಖಲೆಗಳು ಹೇಳುತ್ತವೆ.
ಇಂಡಿಗೊ ಕಂಪನಿಯ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಅವರು ಶೇ 13.5ರಷ್ಟು ಪಾಲನ್ನು ಹೊಂದಿದ್ದಾರೆ. ಗೋಲ್ಡ್‌ಮನ್ ಸ್ಯಾಚ್ಸ್, ಮಾರ್ಗನ್ ಸ್ಟಾನ್ಲಿ ಮತ್ತು ಜೆಪಿ ಮಾರ್ಗನ್ ಷೇರು ಮಾರಾಟದ ನೇತೃತ್ವ ವಹಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಇಂಡಿಗೊ ಕಂಪನಿಯ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.