ADVERTISEMENT

ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ವಿಮಾನ ಸಂಚಾರ ರದ್ದತಿಯಿಂದ 1,30,000 ಪ್ರಯಾಣಿಕರಿಗೆ ಸಮಸ್ಯೆ

ಐಎಎನ್ಎಸ್
Published 2 ಸೆಪ್ಟೆಂಬರ್ 2022, 10:20 IST
Last Updated 2 ಸೆಪ್ಟೆಂಬರ್ 2022, 10:20 IST
   

ನವದೆಹಲಿ: ಜರ್ಮನಿ ಮೂಲದ ವಿಮಾನಯಾನ ಸಂಸ್ಥೆ ಲುಫ್ತಾನ್ಸಾದ ಪೈಲಟ್‌ಗಳ ಒಕ್ಕೂಟ ಮುಷ್ಕರ ಕೈಗೊಂಡಿದ್ದು, 800ಕ್ಕೂ ಅಧಿಕ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳ ಸಂಚಾರಕ್ಕೆ ತೊಡಕಾಗಿದೆ.

ಜರ್ಮನಿ ವಿಮಾನ ನಿಲ್ದಾಣದಿಂದ ಹೊರಡುವ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನಗಳು ಪಾರ್ಕಿಂಗ್‌ನಲ್ಲಿಯೇ ಇದ್ದು, ಸಂಚಾರ ನಡೆಸುತ್ತಿಲ್ಲ.

ಇದರಿಂದಾಗಿ 800 ವಿಮಾನಗಳ ಸಂಚಾರ ರದ್ದುಪಡಿಸಿರುವುದನ್ನು ಸಂಸ್ಥೆಯ ವಕ್ತಾರರು ಖಚಿತಪಡಿಸಿದ್ದಾರೆ.

ADVERTISEMENT

ವಿಮಾನಗಳ ಸಂಚಾರ ರದ್ದಾಗಿರುವುದರಿಂದ 1,30,000 ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲೂ ಲುಫ್ತಾನ್ಸಾ ವಿಮಾನಕ್ಕಾಗಿ ಪ್ರಯಾಣಿಕರು ಕಾಯುವಂತಾಗಿದೆ.

ಯುರೋಪ್‌ನಲ್ಲಿ ವಾರಾಂತ್ಯ ಮತ್ತು ರಜಾದಿನ ಮುಕ್ತಾಯದಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಕ್ಕೆ ಸಿದ್ಧವಾಗಿರುವಾಗಲೇ ಪೈಲಟ್‌ಗಳು ಮುಷ್ಕರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.