ADVERTISEMENT

ಮಾರುತಿ ಸುಜುಕಿ ಇಂಡಿಯಾದಿಂದ 3 ಸಾವಿರ ಉದ್ಯೋಗ ಕಡಿತ

ಏಜೆನ್ಸೀಸ್
Published 3 ಸೆಪ್ಟೆಂಬರ್ 2019, 9:07 IST
Last Updated 3 ಸೆಪ್ಟೆಂಬರ್ 2019, 9:07 IST
   

ನವದೆಹಲಿ: ಮಾರಾಟ ಕುಸಿತ ಸಮಸ್ಯೆ ಎದುರಿಸುತ್ತಿರುವವಾಹನ ತಯಾರಿಕಾ ಸಂಸ್ಥೆಗಳ ಸಾಲಿಗೆಮಾರುತಿ ಸುಜುಕಿ ಇಂಡಿಯಾ ಕಂಪನಿಯೂ ಸೇರಿದ್ದು,ಮೂರು ಸಾವಿರ ಗುತ್ತಿಗೆ ನೌಕರರನ್ನು ಮತ್ತೆ ಮುಂದುವರೆಸದಿರಲು ನಿರ್ಧರಿಸಿದೆ.

ಪರಿಣಾಮವಾಗಿ ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯ 3 ಸಾವಿರ ಗುತ್ತಿಗೆ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಈ ವಿಚಾರವಾಗಿಮಾರುತಿ ಸುಜುಕಿ ಇಂಡಿಯಾ ಕಂಪನಿಯಮುಖ್ಯಸ್ಥ ಆರ್.ಸಿ. ಭಾರ್ಗವ ಅವರುಮಂಗಳವಾರ ನೀಡಿದ್ದಾರೆ. ಕಂಪನಿಯ ವಾರ್ಷಿಕ ಸಭೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಚರ್ಚೆ ಮಾಡಿ ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ಕಂಪನಿಯು ಸಿಎನ್‌ಜಿ ವಾಹನಗಳ ತಯಾರಿಕೆಯನ್ನು ಶೇ 50 ಹೆಚ್ಚಿಸಲು ನಿರ್ಧರಿಸಿದೆ. ಹಾಗೆಯೇ ಹೈಬ್ರಿಡ್ ವಾಹನಗಳ ತಯಾರಿಕೆಗೂ ಹೆಚ್ಚಿನ ಒತ್ತು ನೀಡಲಿದೆ ಎಂದು ಭಾರ್ಗವ ಹೇಳಿದ್ದಾರೆ.

ಕಂಪನಿಗಳು ಬೇಡಿಕೆಗೆ ಅನುಗುಣವಾಗಿ ತಯಾರಿಕೆಯಲ್ಲಿ ಕಡಿತ ಮಾಡಲು ಮುಂದಾಗಿವೆ. ಕೆಲ ಸಂಸ್ಥೆಗಳು ಪ್ರತಿ ತಿಂಗಳ ತಯಾರಿಕೆಯನ್ನು ಕಡಿತಗೊಳಿಸಿದ್ದರೆ, ಇನ್ನೂ ಕೆಲ ಸಂಸ್ಥೆಗಳು ತಯಾರಿಕೆ ನಿಧಾನಗೊಳಿಸಿವೆ. ಒಟ್ಟಾರೆ ವಾಹನಗಳ ಮಾರಾಟದಲ್ಲಿ ಇಳಿಕೆ ಕಂಡುಬರುತ್ತಿದೆ. ಪ್ರಯಾಣಿಕ ವಾಹನಗಳ ಮಾರಾಟವು ಏಪ್ರಿಲ್‌ ತಿಂಗಳಲ್ಲಿ ಶೇ 17ರಷ್ಟು ಕುಸಿತಗೊಂಡು ಎಂಟು ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟಿನ ಕಾರಣಕ್ಕೆ ವಾಹನಗಳ ಖರೀದಿ ಕುಸಿದಿದೆ. ಮಾರಾಟವಾಗದ ವಾಹನಗಳ ಒಟ್ಟಾರೆ ಮೊತ್ತವು ₹ 35 ಸಾವಿರ ಕೋಟಿಗಳಷ್ಟು ಇರುವ ಅಂದಾಜಿದೆ. ವಾಹನಗಳ ಮಾರಾಟ ಚೇತರಿಸಿಕೊಳ್ಳುವವರೆಗೆ ತಯಾರಿಕೆಗೆ ಕಡಿವಾಣ ಹಾಕಲು ಸಂಸ್ಥೆಗಳು ನಿರ್ಧರಿಸಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.