ನವದೆಹಲಿ:ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರು ಮತ್ತು ವಾಯಿದಾ ವಹಿವಾಟಿನಲ್ಲಿನ (ಡೆರಿವೇಟಿವ್ಸ್) ಹೂಡಿಕೆಮಾಡುವುದರಿಂದ ಬರುವ ಲಾಭಕ್ಕೆ ಹೆಚ್ಚುವರಿ ಸರ್ಚಾರ್ಜ್ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದೇಶಿ ಹೂಡಿಕೆದಾರರ ವಿಷಯದಲ್ಲಿ ವಾಯಿದಾ ವಹಿವಾಟನ್ನು ಬಂಡವಾಳ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಅದನ್ನು ವರ್ಗಾಯಿಸುವುದರಿಂದ ಬರುವ ವರಮಾನವನ್ನು ವಹಿವಾಟಿನ ವರಮಾನ ಎಂದು ಪರಿಗಣಿಸಲಾಗುತ್ತದೆ. ಇದರ ಮೇಲೆ ಸಾಮಾನ್ಯ ತೆರಿಗೆ ದರ ವಿಧಿಸಲಾಗುತ್ತದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವಿಷಯದಲ್ಲಿ, ಷೇರುಗಳಂತಹ ಹಣ ಕಾಸು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇಬ್ಬರಿಗಿಂತ ಹೆಚ್ಚಿನ ಜನರ ನಡುವಣ ಗುತ್ತಿಗೆ ಮತ್ತು ವಾಯಿದಾ ವಹಿವಾಟನ್ನು ಬಂಡವಾಳ ಸಂಪತ್ತು ಎಂದು ಪರಿಗಣಿಸಲಾಗುತ್ತದೆ. ಈ ಸಂಪತ್ತನ್ನು ವರ್ಗಾಯಿಸುವುದರಿಂದ ಬರುವ ಮೊತ್ತವನ್ನು ಬಂಡವಾಳ ಗಳಿಕೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ‘115 ಎಡಿ’ ಪ್ರಕಾರ ವಿಶೇಷ ತೆರಿಗೆ ದರ ವಿಧಿಸಲಾಗುತ್ತದೆ. ಇದರಡಿ ಹೆಚ್ಚುವರಿ ಸರ್ಚಾರ್ಜ್‌ನಿಂದಲೂ ವಿನಾಯ್ತಿ ದೊರೆಯಲಿದೆ. ‘ಎಫ್‌ಪಿಐ’ಗಳನ್ನು ಹೊರತುಪಡಿಸಿ ಇತರರಿಗೆ ಡೆರಿವೇಟಿವ್ಸ್‌ಗಳನ್ನುವರ್ಗಾಯಿಸುವವರಿಗೆ ಸರ್ಚಾರ್ಜ್‌ಅನ್ವಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.