ಮುಂಬೈ: 10 ವರ್ಷ ಮೀರಿದ ಅಪ್ರಾಪ್ತ ವಯಸ್ಕರಿಗೆ ಬ್ಯಾಂಕುಗಳಲ್ಲಿ ಉಳಿತಾಯ/ ಅವಧಿ ಠೇವಣಿ ಖಾತೆಗಳನ್ನು ಸ್ವತಂತ್ರವಾಗಿ ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಅನುಮತಿ ನೀಡಿದೆ.
ಈ ಸಂಬಂಧ ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಯಾವುದೇ ವಯಸ್ಸಿನ ಅಪ್ರಾಪ್ತ ವಯಸ್ಕರು ತಮ್ಮ ನೈಸರ್ಗಿಕ ಅಥವಾ ಕಾನೂನುಬದ್ಧ ಪೋಷಕರೊಂದಿಗೆ ಉಳಿತಾಯ ಮತ್ತು ಅವಧಿ ಠೇವಣಿ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಅನುಮತಿಸಬಹುದು ಎಂದೂ ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.