₹ 2000 ಮುಖಬೆಲೆಯ ನೋಟುಗಳು (ಸಂಗ್ರಹ ಚಿತ್ರ)
ಮುಂಬೈ: ‘ಬ್ಯಾಂಕಿಂಗ್ ವ್ಯವಸ್ಥೆಗೆ ₹2000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಮರಳಿ ಬಂದಿವೆ. ಸಾರ್ವಜನಿಕ ವಲಯದಲ್ಲಿ ₹6,471 ಕೋಟಿ ಮೌಲ್ಯದ ನೋಟುಗಳು ಮಾತ್ರ ಉಳಿದಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.
₹2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುತ್ತಿರುವುದಾಗಿ 2023ರ ಮೇ 19ರಂದು ಆರ್‌ಬಿಐ ಹೇಳಿತ್ತು. ಈ ಹಂತದಲ್ಲಿ ₹3.56 ಲಕ್ಷ ಕೋಟಿ ಮೌಲ್ಯದ ₹2 ಸಾವಿರ ಮುಖಬೆಲೆಯ ನೋಟುಗಳು ಇದ್ದವು. ಇವುಗಳನ್ನು ಹಂತಹಂತವಾಗಿ ಬ್ಯಾಂಕ್‌ಗಳ ಮೂಲಕ ಆರ್‌ಬಿಐ ಹಿಂಪಡೆದಿದೆ . ಫೆ. 28ರ ಹೊತ್ತಿಗೆ ₹6,471 ಕೋಟಿ ಮೌಲ್ಯದ ನೋಟುಗಳು ಇನ್ನಷ್ಟೇ ಬರಬೇಕಿವೆ.
2023ರ ಅ. 7ರಲ್ಲಿ ನೋಟು ಹಿಂಪಡೆಯುವ ಆರ್‌ಬಿಐ ನಿರ್ಧಾರದ ನಂತರ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಮರಳಿ ಪಡೆಯುವ ಸೌಲಭ್ಯ ಕಲ್ಪಿಸಲಾಗಿತ್ತು. ಬ್ಯಾಂಕ್‌ಗೆ ಜಮೆ ಮಾಡಲು ಅಥವಾ ಇತರ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಈಗಲೂ ಈ ಸೌಲಭ್ಯ ಮುಂದುವರಿದಿದ್ದು, ರಿಸರ್ವ್ ಬ್ಯಾಂಕ್‌ನ 19 ಸೂಚಿತ ಕಚೇರಿಗಳಲ್ಲಿ ಈ ನೋಟುಗಳನ್ನು ಮರಳಿ ಪಡೆಯಲಾಗುತ್ತಿದೆ.
ಬ್ಯಾಂಕ್‌ಗಳೊಂದಿಗೆ ಇಂಡಿಯಾ ಪೋಸ್ಟ್ ಕಚೇರಿಗಳಲ್ಲೂ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಅವಕಾಶ ನೀಡಿತ್ತು. ಈ ಹೊತ್ತಿನಲ್ಲೂ ₹2 ಸಾವಿರ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಬಳಕೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.