ADVERTISEMENT

2024ರ ಫ್ಯೂಚರ್‌ಬ್ರ್ಯಾಂಡ್ ಸೂಚ್ಯಂಕ: ರಿಲಯನ್ಸ್‌ 2ನೇ ಅತಿದೊಡ್ಡ ಬ್ರ್ಯಾಂಡ್

ಪಿಟಿಐ
Published 17 ಫೆಬ್ರುವರಿ 2025, 13:44 IST
Last Updated 17 ಫೆಬ್ರುವರಿ 2025, 13:44 IST
ರಿಲಯನ್ಸ್‌
ರಿಲಯನ್ಸ್‌   

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌, 2024ರ ಫ್ಯೂಚರ್‌ಬ್ರ್ಯಾಂಡ್ ಸೂಚ್ಯಂಕದಲ್ಲಿ ಜಾಗತಿಕವಾಗಿ ಎರಡನೇ ಅತ್ಯುತ್ತಮ ಬ್ರ್ಯಾಂಡ್ ಸ್ಥಾನ ಪಡೆದಿದೆ.

ಕೊರಿಯಾದ ಕಂಪನಿ ಸ್ಯಾಮ್‌ಸಂಗ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ.

ರಿಲಯನ್ಸ್‌ 2023ರಲ್ಲಿ 13ನೇ ಸ್ಥಾನದಲ್ಲಿತ್ತು. ಆದರೆ, ಈಗ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಆ್ಯಪಲ್, ನೈಕ್, ವಾಲ್ಟ್ ಡಿಸ್ನಿ, ನೆಟ್‌ಫ್ಲಿಕ್ಸ್, ಮೈಕ್ರೊಸಾಫ್ಟ್, ಇಂಟೆಲ್ ಮತ್ತು ಟೊಯೊಟದಂತಹ ಜಾಗತಿಕ ಕಂಪನಿಗಳಿಗಿಂತ ರಿಲಯನ್ಸ್ ಮುಂದಿದೆ. ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕಂಪನಿ ರಿಲಯನ್ಸ್ ಆಗಿದೆ.

ADVERTISEMENT

ಈ ಸೂಚ್ಯಂಕವು ಪ್ರತಿ ವರ್ಷ ನಡೆಯುತ್ತದೆ. ಅಗ್ರ 100 ಜಾಗತಿಕ ಕಂಪನಿಗಳನ್ನು ಅವುಗಳ ಬ್ರ್ಯಾಂಡ್ ಆಧಾರದ ಮೇಲೆ ಮಾರುಕಟ್ಟೆ ಬಂಡವಾಳದ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಫ್ಯೂಚರ್‌ಬ್ರ್ಯಾಂಡ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.