ADVERTISEMENT

ಟಾಟಾ ಮೋಟರ್ಸ್‌ನ ಎಲ್ಲ ಘಟಕಗಳ ಪುನರಾರಂಭ

ಪಿಟಿಐ
Published 2 ಜೂನ್ 2020, 19:45 IST
Last Updated 2 ಜೂನ್ 2020, 19:45 IST
ಟಾಟಾ ಮೋಟರ್ಸ್‌
ಟಾಟಾ ಮೋಟರ್ಸ್‌   

ನವದೆಹಲಿ: ದೇಶದಲ್ಲಿರುವ ಎಲ್ಲಾ ತಯಾರಿಕಾ ಘಟಕಗಳೂ ಪುನರರಾಂಭ ಮಾಡಿವೆ ಎಂದುಟಾಟಾ ಮೋಟರ್ಸ್‌ ಕಂಪನಿ ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ಘಟಕಗಳನ್ನು ಮುಚ್ಚಲಾಗಿತ್ತು. ಇದೀಗ ಆರ್ಥಿಕತೆಯು ಅನ್‌ಲಾಕ್‌ ಆಗುತ್ತಿರುವುದರಿಂದ ಮತ್ತೆ ತಯಾರಿಕಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದೆ.

ಶೇ 59ರಷ್ಟು ಪ್ರಯಾಣಿಕ ವಾಹನಗಳ ಷೋರೂಂಗಳಲ್ಲಿ ಮತ್ತೆ ಕೆಲಸ ಆರಂಭವಾಗಿದೆ. ವಾಣಿಜ್ಯ ವಾಹನಗಳ ವಿಭಾಗದಲ್ಲಿ ಶೇ 90ರಷ್ಟು ಪೂರೈಕೆದಾರರು ಕಾರ್ಯಾಚರಣೆ ನಡೆಸಲು ಅನುಮತಿ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.