ADVERTISEMENT

ಭಾರತದ ವ್ಯಾಪಾರದ ಮೇಲೆ ಅಮೆರಿಕ–ವೆನೆಜುವೆಲಾ ಸಂಘರ್ಷದ ಪರಿಣಾಮ ಅತ್ಯಲ್ಪ: GTRI

ಪಿಟಿಐ
Published 4 ಜನವರಿ 2026, 13:26 IST
Last Updated 4 ಜನವರಿ 2026, 13:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತದೊಂದಿಗಿನ ವ್ಯಾಪಾರ–ವಹಿವಾಟಿನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು‌ ‘ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ (ಜಿಟಿಆರ್‌ಐ) ತಿಳಿಸಿದೆ.

‘2025ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ವೆನೆಜುವೆಲಾದೊಂದಿಗಿನ ವ್ಯಾಪಾರವು ಶೇಕಡ 81.3ರಷ್ಟು ಕಡಿಮೆಯಾಗಿದೆ. ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವು ಕಡಿಮೆ ಪ್ರಮಾಣದಲ್ಲಿರುವುದರಿಂದ ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತವು ಅತ್ಯಲ್ಪ ಪರಿಣಾಮವನ್ನು ಎದುರಿಸಲಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತಕ್ಕೆ ಯಾವುದೇ ರೀತಿಯ ಆರ್ಥಿಕ ಅಥವಾ ಇಂಧನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದೂ ಅವರು ತಿಳಿಸಿದ್ದಾರೆ.

‘2000–2010ರ ಅವಧಿಯಲ್ಲಿ ಭಾರತವು ವೆನೆಜುವೆಲಾದ ಕಚ್ಚಾ ತೈಲದ ಪ್ರಮುಖ ಖರೀದಿದಾರ ದೇಶವಾಗಿದ್ದರೂ, 2019ರಿಂದ ಅಮೆರಿಕದ ನಿರ್ಬಂಧಗಳಿಂದಾಗಿ ಭಾರತ–ವೆನೆಜುವೆಲಾ ದ್ವಿಪಕ್ಷೀಯ ವ್ಯಾಪಾರ ತೀವ್ರವಾಗಿ ದುರ್ಬಲಗೊಂಡಿದೆ. ಭಾರತವು ವೆನೆಜುವೆಲಾದಿಂದ ಆಮದು ಮಾಡಿಕೊಳ್ಳುತ್ತಿದ್ದ ತೈಲವನ್ನು ಗಣನೀಯವಾಗಿ ತಗ್ಗಿಸಲಾಗಿದೆ’ ಎಂದು ಶ್ರೀವಾಸ್ತವ ವಿವರಿಸಿದ್ದಾರೆ.

'ಕಡಿಮೆ ವ್ಯಾಪಾರ, ಅಸ್ತಿತ್ವದಲ್ಲಿರುವ ನಿರ್ಬಂಧಗಳು ಸೇರಿದಂತೆ ಭೌಗೋಳಿಕ ಅಂತರವನ್ನು ಗಮನಿಸಿದರೆ, ವೆನೆಜುವೆಲಾದಲ್ಲಿನ ಪ್ರಸ್ತುತ ಬೆಳವಣಿಗೆಗಳು ಭಾರತದ ಆರ್ಥಿಕತೆ ಅಥವಾ ಇಂಧನ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರುವ ನಿರೀಕ್ಷೆಯಿಲ್ಲ’ ಎಂದಿದ್ದಾರೆ.

2025ನೇ ಹಣಕಾಸು ವರ್ಷದಲ್ಲಿ ವೆನೆಜುವೆಲಾದಿಂದ ಭಾರತದ ಒಟ್ಟು ಆಮದು ₹3,276 ಕೋಟಿ ಆಗಿತ್ತು. ಅದರಲ್ಲಿ ಕಚ್ಚಾ ತೈಲವು ₹2,295 ಕೋಟಿಯಷ್ಟಿತ್ತು. ಇದು 2024ನೇ ಹಣಕಾಸು ವರ್ಷಕ್ಕೆ ಹೊಲಿಸಿದರೆ ಆಮದು ಮಾಡಿಕೊಂಡ ತೈಲ ಪ್ರಮಾಣ ಶೇ 81.3ರಷ್ಟು ಕುಸಿದಿತ್ತು.

ವೆನೆಜುವೆಲಾ ವಿಶ್ವದ ತೈಲ ನಿಕ್ಷೇಪಗಳಲ್ಲಿ ಶೇಕಡ 18ರಷ್ಟು ಪಾಲು ಹೊಂದಿದೆ. ಇದು ಸೌದಿ ಅರೇಬಿಯಾ, ರಷ್ಯಾ ಅಥವಾ ಅಮೆರಿಕಗಿಂತಲೂ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.