ADVERTISEMENT

ಮತ್ತೆ ಏರುಗತಿಯಲ್ಲಿ ಷೇರುಪೇಟೆ; ಮುಂದುವರಿದ ಬಜೆಟ್‌ ಪ್ರಭಾವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2022, 11:12 IST
Last Updated 2 ಫೆಬ್ರುವರಿ 2022, 11:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸತತ ಮೂರನೇ ದಿನವೂ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಮೂಲಸೌಕರ್ಯ ವಲಯದ ಮೇಲೆ ಹೆಚ್ಚಿನ ಹೂಡಿಕೆ ಇರುವ ಬಜೆಟ್ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡನೆ ಮಾಡಿದ ಬೆನ್ನಲ್ಲೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 848 ಅಂಶ ಏರಿಕೆ ಕಂಡಿತ್ತು. ಇಂದು 696 ಅಂಶ ಹೆಚ್ಚಳ ದಾಖಲಿಸಿದೆ.

ಬುಧವಾರ ವಾಹಿವಾಟು ಆರಂಭದಲ್ಲೇ ಸೆನ್ಸೆಕ್ಸ್‌ 500 ಅಂಶಗಳಷ್ಟು ಏರಿಕೆ ಕಂಡಿತು ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 17,700 ಅಂಶಗಳ ಗಡಿ ದಾಟಿತು. ಹಣಕಾಸು ಮತ್ತು ತಂತ್ರಜ್ಞಾನ ವಲಯದ ಷೇರುಗಳ ಗಳಿಕೆಯ ಕಾರಣ, ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ ಶೇ 1.18ರಷ್ಟು ಹೆಚ್ಚಳವಾಗಿ 59,558.33 ಅಂಶ ತಲುಪಿದರೆ, ನಿಫ್ಟಿ 203.15 ಅಂಶ ಏರಿಕೆಯಾಗಿ 17,780 ಮುಟ್ಟಿತು.

ಇಂಡಸ್‌ಇಂಡ್‌ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌ ಷೇರುಗಳು ಶೇಕಡ 5ರವರೆಗೂ ಗಳಿಕೆ ಕಂಡವು. ಐಟಿಸಿ, ಆ್ಯಕ್ಸಿಸ್‌ ಬ್ಯಾಂಕ್‌, ಕೊಟ್ಯಾಕ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಎಚ್‌ಸಿಎಲ್‌ ಟೆಕ್‌ ಷೇರುಗಳ ಬೆಲೆ ಸಹ ಏರಿಕೆಯಾಯಿತು.

ADVERTISEMENT

ಆದರೆ, ಟೆಕ್‌ ಮಹೀಂದ್ರಾ, ಅಲ್ಟ್ರಾಟೆಕ್‌ ಸೀಮೆಂಟ್‌, ಎಲ್‌ಆ್ಯಂಡ್‌ಟಿ, ಸನ್‌ ಫಾರ್ಮಾ, ಮಾರುತಿ ಸುಜುಕಿ, ನೆಸ್ಟ್ಲೆ ಇಂಡಿಯಾ ಹಾಗೂ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳ ಬೆಲೆ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.