ADVERTISEMENT

ರಿಲಯನ್ಸ್‌: ₹10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಮುಟ್ಟಿದ ದೇಶದ ಮೊದಲ ಕಂಪನಿ

ಏಜೆನ್ಸೀಸ್
Published 28 ನವೆಂಬರ್ 2019, 6:20 IST
Last Updated 28 ನವೆಂಬರ್ 2019, 6:20 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌    

ಬೆಂಗಳೂರು: ಮಾರುಕಟ್ಟೆ ಮೌಲ್ಯ₹10 ಲಕ್ಷ ಕೋಟಿ ತಲುಪಿದ ದೇಶದ ಮೊದಲ ಕಂಪನಿಯಾಗಿಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌(ಆರ್‌ಐಎಲ್‌) ಹೊರಹೊಮ್ಮಿದೆ. ರಿಲಯನ್ಸ್‌ ಷೇರು ಗುರುವಾರ ಸಾರ್ವಕಾಲಿಕ ಗರಿಷ್ಠ ₹1,581 ತಲುಪುವ ಮೂಲಕ ಮಾರುಕಟ್ಟೆ ಮೌಲ್ಯ ದಾಖಲೆಯ ಮಟ್ಟಕ್ಕೆ ಹೆಚ್ಚಿದೆ.

2019ರಲ್ಲಿ ರಿಲಯನ್ಸ್‌ ಷೇರು ಶೇ 40ರಷ್ಟು ಏರಿಕೆ ಕಂಡಿದೆ.ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್‌ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಮುಖೇಶ್‌ ಅಂಬಾನಿ ಘೋಷಿಸಿದ್ದರು. ಜಿಯೊದ ಸೇವಾ ದರಗಳಲ್ಲೂ ಹೆಚ್ಚಳ ಮಾಡುವುದಾಗಿ ಇತ್ತೀಚಿಗೆರಿಲಯನ್ಸ್‌ ಘೋಷಿಸಿತ್ತು. ಈ ಎಲ್ಲ ಕಾರಣಗಳಿಂದ ಹೂಡಿಕೆದಾರರು ರಿಲಯನ್ಸ್‌ ಷೇರು ಖರೀದಿ ಮುಂದುವರಿಸಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಜಗತ್ತಿನ ಅತಿ ದೊಡ್ಡ ತೈಲ ಸಂಸ್ಕರಣ ಘಟಕವನ್ನು ಹೊಂದಿದೆ. ಡಿಜಿಟಲ್‌ ಕಂಪನಿ ಸ್ಥಾಪನೆಗೆ ₹1 ಲಕ್ಷ ಕೋಟಿ ಹೂಡಿಕೆ ಮಾಡುವ ಮೂಲಕ ಜಿಯೊ ಮೇಲಿರುವ ಸಾಲದ ಹೊರೆಯನ್ನು ಇಳಿಸಲು ಉದ್ದೇಶಿಸಿದೆ. ತನ್ನ ಹೊಸ ಡಿಜಿಟಲ್‌ ಕಂಪನಿಯ ಹೂಡಿಕೆಯನ್ನು ಈಕ್ವಿಟಿ ಆಗಿ ಪರಿವರ್ತಿಸಿಕೊಳ್ಳಲು ರಿಲಯನ್ಸ್‌ಗೆ ಅವಕಾಶವಿದೆ. ಹೊಸ ಕಂಪನಿಯ ಮೂಲಕ ಜಿಯೊದಲ್ಲಿ ಹೂಡಿಕೆ ಮಾಡಿ 2020ರ ಮಾರ್ಚ್‌ ವೇಳೆಗೆ ಸಾಲಮುಕ್ತಗೊಳಿಸುವ ಯೋಜನೆ ಹೊಂದಿದೆ.

ADVERTISEMENT

ವಹಿವಾಟ ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ ಶೇ 0.13 ಏರಿಕೆ ಮೂಲಕ 41,073 ತಲುಪಿದರೆ, ನಿಫ್ಟಿ ಸಹ ಶೇ 0.09 ಹೆಚ್ಚಳ ಕಂಡು 12,112 ಅಂಶ ತಲುಪಿತು. ಟಿಸಿಎಸ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌, ಎಲ್‌ಆ್ಯಂಡ್‌ಟಿ ಹಾಗೂ ಎಸ್‌ಬಿಐ ಷೇರುಗಳು ಶೇ 1ರ ವರೆಗೂ ಗಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.