ADVERTISEMENT

ಸಕಾರಾತ್ಮಕ ವಹಿವಾಟು: ಸೂಚ್ಯಂಕ ಚೇತರಿಕೆ

ಪಿಟಿಐ
Published 9 ಸೆಪ್ಟೆಂಬರ್ 2019, 19:45 IST
Last Updated 9 ಸೆಪ್ಟೆಂಬರ್ 2019, 19:45 IST
   

ಮುಂಬೈ: ಹಣಕಾಸು ಮತ್ತು ವಾಹನ ವಲಯದ ಷೇರುಗಳ ಗಳಿಕೆಯಿಂದ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 164 ಅಂಶ ಹೆಚ್ಚಾಗಿ 37,145 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ (ಎನ್ಎಸ್‌ಇ) ಸೂಚ್ಯಂಕ ನಿಫ್ಟಿ 57 ಅಂಶ ಹೆಚ್ಚಾಗಿ 11,003 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಯೆಸ್‌ ಬ್ಯಾಂಕ್‌, ಮಾರುತಿ, ಎಲ್ಆ್ಯಂಡ್‌ಟಿ, ಕೋಟಕ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಬಜಾಜ್‌ ಫೈನಾನ್ಸ್‌, ಎಸ್‌ಬಿಐ, ಒಎನ್‌ಜಿಸಿ, ಎಚ್‌ಡಿಎಫ್‌ಸಿ ಮತ್ತು ಹೀರೊಮೋಟೊ ಕಾರ್ಪ್‌ ಕಂಪನಿಗಳ ಷೇರುಗಳು ಶೇ 4.47ರಷ್ಟು ಏರಿಕೆಯಾಗಿವೆ.

ಜಾಗತಿಕ ಮಾರುಕಟ್ಟೆಗಳಲ್ಲಿನಡೆದ ಸಕಾರಾತ್ಮಕ ವಹಿವಾಟು ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿತು ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.