ಎಐ ಚಿತ್ರ
ಮನುಷ್ಯರ ಹುಟ್ಟಿಗೂ ಹಾಗೂ ಗೋತ್ರಕ್ಕೂ ಸಂಬಂಧವಿದೆ ಎಂದು ಜ್ಯೋತಿಷ ಹೇಳುತ್ತದೆ. ವಿವಾಹಕ್ಕೆ ಮುನ್ನ ವಧುವರರ ಗೋತ್ರವನ್ನು ನೋಡಲಾಗುತ್ತದೆ. ಹಾಗಾದರೆ ಮನುಷ್ಯನ ಜೀವನದಲ್ಲಿ ಗೋತ್ರದ ಮಹತ್ವವೇನು? ಒಂದೇ ಗೋತ್ರದವರೊಂದಿಗೆ ವಿವಾಹ ಆಗುವುದರಿಂದ ಉಂಟಾಗುವ ಸಮಸ್ಯೆಗಳೇನು? ಎಂಬೆಲ್ಲಾ ಮಾಹಿತಿಯನ್ನು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ಹೆಣ್ಣು ಮದುವೆಯಾದ ನಂತರ ಅವಳ ಗೋತ್ರ ಗಂಡನ ಮನೆಯ ಗೋತ್ರಕ್ಕೆ ಬದಲಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.
ಜೈವಿಕವಾಗಿ ಮಾನವನ ದೇಹವು 23 ಜೋಡಿ ವರ್ಣತಂತುಗಳನ್ನು ಹೊಂದಿರುತ್ತದೆ. ಲೈಂಗಿಕ ವರ್ಣತಂತುಗಳು ವ್ಯಕ್ತಿಯ ಲಿಂಗವನ್ನು ನಿರ್ಧರಿಸುತ್ತವೆ. ಇದರಿಂದಾಗಿ ಹೆಣ್ಣು ಅಥವಾ ಗಂಡು ಮಗುವಿನ ಜನನವಾಗುತ್ತದೆ. ಪುರುಷ ವಂಶಾವಳಿಯ ನಡುವೆ ಮಾತ್ರ ಹಾದು ಹೋಗುವ ಏಕೈಕ ವರ್ಣತಂತು ತಂದೆ, ಮಗ ಹಾಗೂ ಮೊಮ್ಮೊಗ ಹೀಗೆ ಮುಂದುವರಿಯುತ್ತದೆ ಎಂದು ವಿವೇಕಾನಂದ ಅವರು ಹೇಳುತ್ತಾರೆ.
ಒಂದೇ ಗೋತ್ರದವರು ವಿವಾಹವಾದ ಸಂದರ್ಭದಲ್ಲಿ ಅಸ್ವಸ್ಥ ಮಕ್ಕಳು ಜನಿಸಬಹುದು ಎಂದು ಹೇಳಲಾಗುತ್ತದೆ.
ಹೀಗೆ ಜನಿಸುವ ಮಕ್ಕಳಲ್ಲಿ ಅಂಗವೈಕಲ್ಯ, ಮಾನಸಿಕ ಸಮಸ್ಯೆಗಳು ಉಂಟಾಗಬಹುದು ಎಂದು ಜ್ಯೋತಿಷ ಹೇಳುತ್ತದೆ.
ಒಂದೇ ವರ್ಗದ ಕೂಡುವಿಕೆಯಿಂದ ಹುಟ್ಟುವ ಸಂತಾನ ಯೋಗ್ಯ ಸಂತಾನವಾಗದೇ ಹಲವು ದೋಷಗಳಿಂದ ಕೂಡಿರುತ್ತದೆ ಎಂದು ಪೂರ್ವಜರು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಗೋತ್ರಗಳನ್ನು ವಿಂಗಡಿಸಿ, ಯಾರೂ ಕೂಡ ಒಂದೇ ಗೋತ್ರದವರನ್ನು ವಿವಾಹ ಆಗಬಾರದು ಎಂಬ ನಿಯಮವಿದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.