ಎಐ ಚಿತ್ರ
ಮಾಂಸಾಹಾರವನ್ನು ಬಹುತೇಕರು ಇಷ್ಟ ಪಡುತ್ತಾರೆ. ಹಿಂದೂ ಧರ್ಮದಲ್ಲಿ ವಾರದ ಕೆಲವು ದಿನಗಳಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಯಾವ ವಾರ? ಏಕೆ ? ಮಾಂಸಾಹಾರವನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿಯೋಣ.
ಜ್ಯೋತಿಷದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ, ಏಕಾದಶಿ, ಸಂಕಷ್ಟ ಚತುರ್ಥಿ, ಅಂಗಾರಕ ಚತುರ್ಥಿ ಹಾಗೂ ದೀಪಾವಳಿಯಲ್ಲಿ ಮಾಂಸಾಹಾರವನ್ನು ಸೇವನೆ ಮಾಡಬಾರದು.
ಹಿಂದೂ ಪದ್ಧತಿಯ ಪ್ರಕಾರ ಸೋಮವಾರ ಶಿವನ ವಾರವೆಂದು, ಮಂಗಳವಾರ ಆಂಜನೇಯ ವಾರವೆಂದು, ಗುರುವಾರ ದತ್ತಾತ್ರೇಯ ಹಾಗೂ ಸಾಯಿ ಬಾಬಾರ ವಾರವೆಂದು ಮತ್ತು ಶನಿವಾರ ಆಂಜನೇಯ ಮತ್ತು ವೆಂಕಟೇಶ್ವರನ ವಾರವೆಂದು ಹೇಳಲಾಗುತ್ತದೆ.
ಅವರವರ ನಂಬಿಕೆಯಂತೆ ದೇವರನ್ನು ಪೂಜಿಸುವ ಭಕ್ತರು ಈ ದಿನಗಳಲ್ಲಿ ಆತಂರಿಕ ಹಾಗೂ ಶರೀರ ಶುದ್ಧತೆಗಾಗಿ ಮಾಂಸಾಹಾರವನ್ನು ಸೇವಿಸಬಾರದು. ಅಲ್ಲದೇ ಬುಧವಾರ ಹಾಗೂ ಶುಕ್ರವಾರದಂದು ಕೆಲವರು ಮಾಂಸ ಸೇವನೆ ಮಾಡುವುದಿಲ್ಲ. ಅವರವರು ಯಾವ ದೇವರನ್ನು ಪೂಜಿಸುತ್ತಾರೋ ಅದಕ್ಕೆ ಅನುಗುಣವಾಗಿ ವಾರವನ್ನು ಪಾಲಿಸಬೇಕು ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
ವೈಜ್ಞಾನಿಕ ದೃಷ್ಟಿಯಿಂದ ವಾರಗಳಲ್ಲಿ ಕನಿಷ್ಠ 4 ದಿನ ಮಾಂಸಾಹಾರ ಸೇವಿಸದೆ ಇರುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.