ADVERTISEMENT

Holi| ಕೆಮಿಕಲ್ ಬಣ್ಣಗಳಿಗೆ ಹೇಳಿ ಗುಡ್ ಬೈ; ಮನೆಯಲ್ಲೇ ತಯಾರಿಸಿ ನೈಸರ್ಗಿಕ ಬಣ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 6:37 IST
Last Updated 2 ಮಾರ್ಚ್ 2026, 6:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ; ಎಐ

ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ. ರಂಗು ರಂಗಿನ ಈ ಹಬ್ಬವನ್ನು ಬಣ್ಣಗಳಿಲ್ಲದೆ ಉಹಿಸಿಕೊಳ್ಳಲು ಅಸಾಧ್ಯ. ಹೋಳಿಹಬ್ಬ ಬಂತು ಅಂದರೆ, ಮಾರುಕಟ್ಟೆಗೆ ವಿವಿಧ ಬಗೆಯ ಬಣ್ಣಗಳು ಲಗ್ಗೆ ಇಡುತ್ತವೆ.

ADVERTISEMENT

ಆದರೆ, ಬಣ್ಣಗಳ ಆಯ್ಕೆಯ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳ ಬಳಕೆಯ ಬಗ್ಗೆ ಜಾಗರೂಕವಾಗಿರುವುದು ಮುಖ್ಯ. ಕೆಮಿಕಲ್‌ಯುಕ್ತ ಬಣ್ಣಗಳು ಚರ್ಮದ ಹಾಗೂ ಕಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. 

ಹಾಗಾಗಿ, ಈ ರೀತಿಯಾದ ಸಮಸ್ಯೆಗಳು ಎದುರಾಗದಂತೆ ತಡೆಯಲು ನೈಸರ್ಗಿಕವಾಗಿ ಮನೆಯಲ್ಲಿಯೇ ಕೆಲವು ಬಣ್ಣಗಳನ್ನು ತಯಾರು ಮಾಡಬಹುದು. ಅದರಲ್ಲಿಯೂ ತರಕಾರಿ ಹಾಗೂ ಹೂವುಗಳನ್ನು ಬಳಸಿಕೊಂಡು ಬಣ್ಣಗಳನ್ನು ತಯಾರು ಮಾಡಬಹುದು. ಹಾಗಾದರೆ ಯಾವೆಲ್ಲಾ ಬಣ್ಣಗಳನ್ನು ಮನೆಯಲ್ಲಿಯೇ ತಯಾರಿಸಬಹುದು ಎಂಬುದನ್ನು ನೋಡೋಣ.

ಗುಲಾಬಿ ಬಣ್ಣ 

ಗುಲಾಬಿ ಹೂವಿನ ದಳಗಳನ್ನು  ಬೇರ್ಪಡಿಸಿ, ಬಳಿಕ ದಳಗಳನ್ನು ಬಿಸಿಲಿನಲ್ಲಿ  ಚೆನ್ನಾಗಿ ಒಣಗಿಸಬೇಕು. ನಂತರ ಅದನ್ನು ಪುಡಿ ಮಾಡಿ ಡಬ್ಬಿಯಲ್ಲಿ ಸಂಗ್ರಹಿಸಿಟ್ಟುಕೊಂಡರೆ ನೈಸರ್ಗಿಕವಾದ ಗುಲಾಬಿ ಬಣ್ಣ ಮನೆಯಲ್ಲಿಯೇ ಸಿದ್ಧವಾಗುತ್ತದೆ. ವಿವಿಧ ಬಣ್ಣದ ಗುಲಾಬಿ ಹೂ ಬಳಸಿಕೊಂಡು ಬೇರೆ ಬೇರೆ ಬಣ್ಣಗಳನ್ನು ತಯಾರಿಸಿಕೊಳ್ಳಬಹುದು.

ಗುಲಾಬಿ ಬಣ್ಣವನ್ನು ಬೀಟ್‌ರೂಟ್‌ನಿಂದಲೂ ತಯಾರಿಸಬಹುದಾಗಿದೆ. ಮೊದಲಿಗೆ ಬೀಟ್‌ರೂಟ್‌ ಅನ್ನು ಕತ್ತರಿಸಿಕೊಂಡು ಅದನ್ನು ಬಿಸಿ ನೀರಿನಲ್ಲಿ ಕುದಿಸಿದರೆ ವಾಟರ್‌ ಕಲರ್‌ ಸಿಗುತ್ತದೆ. ಒಣ ಬಣ್ಣ ಬೇಕಾದರೆ ಅದೇ ಬೀಟರೂಟ್‌ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಬಿಸಿಲಿನಲ್ಲಿ  ಒಣಗಿಸಿ. ನಂತರ ಪುಡಿ ಮಾಡಿದರೆ ನೈಸರ್ಗಿಕ ಬಣ್ಣ ಸಿದ್ಧವಾಗುತ್ತದೆ.

ಹಳದಿ ಬಣ್ಣ

ಹಳದಿ ಬಣ್ವವನ್ನು ಅರಿಶಿನ ಕೊಂಬು ಬಳಸುವ ಮೂಲಕವು ತಯಾರು ಮಾಡಬಹುದು. ಅರಿಶಿನ ಕೊಂಬನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಅಕ್ಕಿ ಇಟ್ಟು ಬೆರೆಸಿಕೊಂಡರೆ ನೈಸರ್ಗಿಕ ಹಳದಿ ಬಣ್ಣ ಸಿದ್ಧವಾಗುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ, ವಾಟರ್‌ ಕಲರ್ ಆಗಿಯೂ ಬಳಕೆ ಮಾಡಬಹುದಾಗಿದೆ. 

ಹಸಿರು ಬಣ್ಣ

ಗೋರಂಟಿ ಸೊಪ್ಪಿನ ಮೂಲಕ ಹಸಿರು ಬಣ್ಣವನ್ನು ಮನೆಯಲ್ಲಿ ತಯಾರಿಕೊಳ್ಳಬಹುದು. ಸೊಪ್ಪನ್ನು ಒಣಗಿಸಿ ಪುಡಿ ಮಾಡಿಕೊಂಡರೆ ಹಸಿರು ಬಣ್ಣ ಲಭ್ಯವಾಗುತ್ತದೆ. ನೀರಿನಲ್ಲಿ ಕುದಿಸಿದರೆ ವಾಟರ್‌ ಕಲರ್ ಸಿಗುತ್ತದೆ. ಗೋರಂಟಿ ಸೊಪ್ಪಿನ ಜೊತೆಗೆ ಪಾಲಕ್ ಸೊಪ್ಪನ್ನು ಬಳಕೆ ಮಾಡಬಹುದಾಗಿದೆ.

ಕಿತ್ತಳೆ ಬಣ್ಣ

ಚೆಂಡು ಹೂಗಳನ್ನು ಒಣಗಿಸಿ ಪುಡಿಮಾಡಿಕೊಂಡು ಕಿತ್ತಳೆ ಬಣ್ಣ ತಯಾರಿಸಬಹುದು. ಅಲ್ಲದೇ ನೈಸರ್ಗಿಕವಾಗಿ ಸಿಗುವ ಮುತ್ತುಗದ ಹೂ (ಪಲಾಶ್) ಹೂವಿನಿಂದಲೂ ತಯಾರು ಮಾಡಬಹುದು. ಈ ಹೂಗಳನ್ನು ಒಣಗಿಸಿ ಪುಡಿ ಮಾಡಿದರೆ ಕಿತ್ತಳೆ ಬಣ್ಣ ಸಿದ್ಧವಾಗುತ್ತದೆ.

ನೇರಳೆ ಬಣ್ಣ

ನೈಸರ್ಗಿಕವಾಗಿ ನೇರಳೆ ಬಣ್ಣವನ್ನು ಶಂಖ ಪುಪ್ಪದಿಂದ ತಯಾರಿಸಬಹುದು. ಮೊದಲು ಹೂಗಳನ್ನು ಸಂಗ್ರಹಿಸಿ ಅವುಗಳನ್ನು ಕಡಿಮೆ ತಾಪಮಾನದಲ್ಲಿ ಒಣಗಿಸಬೇಕು. ಪುಡಿ ಮಾಡಿದರೆ ನೇರಳೆ ಬಣ್ಣ ಸಿದ್ಧವಾಗುತ್ತದೆ. ಇತರೆ  ತರಾಕಾರಿ ಮತ್ತು ಹೂಗಳನ್ನು ಬಳಸಿ ಮನೆಯಲ್ಲಿಯೇ ನಿಮಗೆ ಬೇಕಾದಂತಹ ಬಣ್ಣಗಳನ್ನು ತಯಾರು ಮಾಡಿಕೊಳ್ಳಬಹುದಾಗಿದೆ. 

ನೈಸರ್ಗಿಕ ಬರ್ಣಗಳ ಬಳಕೆಯಿಂದಾಗುವ ಅನುಕೂಲಗಳು 

  • ಚರ್ಮ ಮತ್ತು ಕೂದಲಿಗೆ ಆರೋಗ್ಯಕರ

  • ಮಕ್ಕಳಿಗೆ ಯಾವುದೇ ಹಾನಿಯಿಲ್ಲ.

  • ಹಾನಿಕಾರಕ ರಾಸಾಯನಿಕಗಳಿಲ್ಲ.

  • ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.