
ಸಾಂದರ್ಭಿಕ ಚಿತ್ರ
ಚಿತ್ರ: ಗೆಟ್ಟಿ
2026ರ ಜನವರಿ 2ರಂದು ಸತ್ಯನಾರಾಯಣ ವ್ರತ ಅಥವಾ ಪೂಜೆಯನ್ನು ಕೈಗೊಳ್ಳುವ ದಿನವಾಗಿದೆ. ಸತ್ಯನಾರಾಯಣ ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ, ಸಂತೋಷ, ಶಾಂತಿ ಹಾಗೂ ಆರ್ಥಿಕ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಮಹತ್ವ:
ಸತ್ಯನಾರಾಯಣನ ಪೂಜೆಯನ್ನು ಶ್ರದ್ಧೆಯಿಂದ ಪ್ರತಿಯೊಬ್ಬರೂ ಮಾಡಬಹುದಾದ ವ್ರತವಾಗಿದೆ. ಇದಕ್ಕೆ ಯಾವುದೇ ಧರ್ಮ, ಜಾತಿಗಳ ಅಡೆತಡೆಗಳಿಲ್ಲ. ಸತ್ಯನಾರಾಯಣನ ಪೂಜೆ ಮಾಡಲು ನಿಶ್ಚಯಿಸುವ ಭಕ್ತರಿಗೆ ಯಾವ ದಿನದಲ್ಲಿ ಪೂಜೆ ಮಾಡಬೇಕು ಎಂದು ಅನಿಸುತ್ತದೆಯೋ ಆ ದಿನವೇ ಪೂಜೆ ಮಾಡಬಹುದಾಗಿದೆ.
ಶುಭದಿನ, ಶುಭತಿಥಿ, ಶುಭವಾರ, ಶುಭ ನಕ್ಷತ್ರ ಅಥವಾ ಶುಭಯೋಗ ಇದರ ಯಾವುದೇ ಪರಿಣಾಮ ಸತ್ಯನಾರಾಯಣನ ಪೂಜೆಗೆ ಅನ್ವಯಿಸುವುದಿಲ್ಲ. ಒಮ್ಮೆ ಈ ವ್ರತವನ್ನು ಪ್ರಾರಂಭಿಸಿದವರು ಸತತವಾಗಿ ನಾಲ್ಕು ವರ್ಷಗಳ ಕಾಲ ಮಾಡಬೇಕು. ಒಂದು ಅಥವಾ ಎರಡು ವರ್ಷ ಮಾಡಿ ಅರ್ಧಕ್ಕೆ ನಿಲ್ಲಿಸಬಾರದು.
ವ್ರತ ಆರಂಭಿಸುವುದು ಹೇಗೆ?
ತಿಂಗಳಲ್ಲಿ ಒಂದು ದಿನ ಸತ್ಯನಾರಾಯಣ ಪೂಜೆ ಮಾಡುವಂತೆ ಸಂಕಲ್ಪ ಮಾಡಿ. ಅದರಂತೆ ಉಪವಾಸ ಮಾಡಿ, ನಾರಾಯಣನನ್ನು ಭಕ್ತಿಯಿಂದ ಪೂಜಿಸಿ. ಸಂಜೆ ಅಥವಾ ಬೆಳಗ್ಗೆ ಎರಡೂ ಸಮಯದಲ್ಲೂ ಪೂಜಿಸಬಹುದು.
ಸತ್ಯನಾರಾಯಣ ವ್ರತ ಪ್ರಾರಂಭಿಸಿದ ನಂತರ, 4 ವರ್ಷಗಳ ಕಾಲ ಪ್ರತಿ ತಿಂಗಳು ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸುವುದು ಕಡ್ಡಾಯ.
ಸತ್ಯನಾರಾಯಣನ ವ್ರತವನ್ನು ಮಾಡುವವರು, ಅವರವರ ಆರ್ಥಿಕ ಪರಿಸ್ಥಿತಿಗೆ ಅನುಸಾರವಾಗಿ ಮಾಡಬೇಕು.
ಈ ವೃತ್ತದಲ್ಲಿ ಆಡಂಬರದ ಅವಶ್ಯಕತೆ ಇಲ್ಲ. ವ್ರತವನ್ನು ಆಚರಿಸಲು ಭಕ್ತಿ ಮತ್ತು ಶ್ರದ್ಧೆ ಅಗತ್ಯ.
ಒಂದು ವರ್ಷ ವ್ರತ ಆಚರಿಸಿ, ಎರಡನೇ ವರ್ಷ ವ್ರತವನ್ನು ಆಚರಿಸಲು ಕಷ್ಟವಾದರೆ ಅದರ ಮುಂದಿನ ವರ್ಷ ಮಾಡಬಹುದು. ಹೀಗೆ ಮುಂದುವರಿಸಿಕೊಂಡು ನಾಲ್ಕು ವರ್ಷ ಮಾಡುವುದು ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಸತ್ಯನಾರಾಯಣನ ವ್ರತ ಮಾಡಲು ಆಗದೆ ಇದ್ದವರು, ದೇವಸ್ಥಾನದಲ್ಲಿ ನಡೆಯುವ ಸಾಮೂಹಿಕ ಸತ್ಯನಾರಾಯಣನ ಪೂಜೆಯಲ್ಲಿ ಪಾಲ್ಗೊಂಡು, ಅಲ್ಲಿ ಪೂಜೆ ಮಾಡಬಹುದು.
ಪೂಜೆ ಮಾಡುವ ದಿನ ಉಪವಾಸವಿರಬೇಕು. ನಾರಾಯಣ ನಾಮ ಜಪಿಸುವುದು ಶುಭಫಲ ತಂದುಕೊಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.