
ಬೆಂಗಳೂರು: ಒಂದು ವರ್ಷದ ಹಿಂದಷ್ಟೇ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ದರ ಪರಿಷ್ಕರಣೆ ಮಾಡಿ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ಇದೇ 9ರ ಸೋಮವಾರ ದಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದರವು ಕನಿಷ್ಠ ₹1 ಹಾಗೂ ಗರಿಷ್ಠ ₹5ರಷ್ಟು ಹೆಚ್ಚಳವಾಗಿದೆ. ಕನಿಷ್ಠ ₹10 ಇರುವ ದರ ₹11ಕ್ಕೆ, ಗರಿಷ್ಠ ₹90 ಇರುವ ದರ ₹95ಕ್ಕೆ ಏರಲಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
| ವಲಯ | ಅಂತರ (ಕಿ.ಮೀ) | ಪ್ರಸ್ತುತ ದರ (₹) | ಪರಿಷ್ಕೃತ ದರ (₹) |
|---|---|---|---|
| F1 | 0–2 | 10 | 11 |
| F2 | 2–4 | 20 | 21 |
| F3 | 4–6 | 30 | 32 |
| F4 | 6–8 | 40 | 42 |
| F5 | 8–10 | 50 | 53 |
| F6 | 10–15 | 60 | 63 |
| F7 | 15–20 | 70 | 74 |
| F8 | 20–25 | 80 | 84 |
| F9 | 25–30 | 90 | 95 |
| F10 | 30 ಕ್ಕೂ ಹೆಚ್ಚು | 90 | 95 |
| ಪ್ರಸ್ತುತ ದರ (₹) | ಪರಿಷ್ಕೃತ ದರ (₹) | |
|---|---|---|
| ಒಂದು ದಿನದ ಪಾಸ್ | 300 (ಸ್ಮಾರ್ಟ್ ಕಾರ್ಡ್), 250 (ಮೊ. ಕ್ಯೂ ಕೋಡ್) | 313 (ಸ್ಮಾರ್ಟ್ ಕಾರ್ಡ್), 263 (ಮೊ. ಕ್ಯೂ ಕೋಡ್) |
| ಮೂರು ದಿನಗಳ ಪಾಸ್ | 600 (ಸ್ಮಾರ್ಟ್ ಕಾರ್ಡ್), 250 (ಮೊ. ಕ್ಯೂ ಕೋಡ್) | 628 (ಸ್ಮಾರ್ಟ್ ಕಾರ್ಡ್), 578 (ಮೊ. ಕ್ಯೂ ಕೋಡ್) |
| ಐದು ದಿನಗಳ ಪಾಸ್ | 900 (ಸ್ಮಾರ್ಟ್ ಕಾರ್ಡ್,) 250 (ಮೊ. ಕ್ಯೂ ಕೋಡ್) | 943 (ಸ್ಮಾರ್ಟ್ ಕಾರ್ಡ್), 893 (ಮೊ. ಕ್ಯೂ ಕೋಡ್) |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.