
ಬೆಂಗಳೂರು: ಕೇಂದ್ರ ವಿಭಾಗದ ಡಿಸಿಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರ ಫೋಟೊ ಬಳಸಿ ವಂಚನೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಕೆ ಅಕ್ಷಯ್ ಮಚ್ಚಿಂದ್ರ ಅವರು ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಠಾಣೆ ಪೊಲೀಸರು ಹೇಳಿದರು.
‘ಮಚ್ಚಿಂದ್ರ ಅವರ ಫೋಟೊ ಹಾಗೂ ಹೆಸರು ವಾಟ್ಸ್‌ಆ್ಯಪ್‌ನಲ್ಲಿ ಬಳಸಿಕೊಂಡು ವಂಚಕರು ಹಣ ಕೇಳುತ್ತಿದ್ದರು. ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ಈ ರೀತಿಯ ಸಂದೇಶವನ್ನು ಡಿಸಿಪಿ ಅವರ ಸ್ನೇಹಿತರು ಹಾಗೂ ಪೊಲೀಸ್ ಸಿಬ್ಬಂದಿಗೆ ಕಳುಹಿಸಲಾಗಿತ್ತು. ಅದನ್ನು ಗಮನಿಸಿದ್ದ ಸಿಬ್ಬಂದಿ, ಅಕ್ಷಯ್ ಅವರ ಗಮನಕ್ಕೆ ತಂದಿದ್ದರು’ ಎಂದು ಮೂಲಗಳು ಹೇಳಿವೆ.
‘ನನ್ನ ಬ್ಯಾಂಕ್ ಖಾತೆಯ ಆನ್‌ಲೈನ್ ವರ್ಗಾವಣೆಯಲ್ಲಿ ಸಮಸ್ಯೆಯಾಗಿದೆ. ತುರ್ತಾಗಿ ಹಣ ಬೇಕಾಗಿದೆ. ನಾನು ಸಭೆಯೊಂದರಲ್ಲಿ ಭಾಗವಹಿಸಬೇಕಿರುವ ಕಾರಣ ನೀವು ಹಣ ವರ್ಗಾಯಿಸಲು ಸಾಧ್ಯವೇ? ಹಾಗಿದ್ದರೆ ನಾನು ಮುಂದಿನ ವಿವರಗಳನ್ನು ನೀಡುತ್ತೇನೆ. ಒಂದು ದಿನದ ಒಳಗಾಗಿ ಹಣವನ್ನು ಮರುಪಾವತಿ ಮಾಡುತ್ತೇನೆ ಎಂಬುದಾಗಿ ವಂಚಕರು ಸಂದೇಶ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.