ADVERTISEMENT

‌ರಿಲಯನ್ಸ್‌ ವತಿಯಿಂದ ಪೊಲೀಸರಿಗೆ 50 ಸಾವಿರ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 7:41 IST
Last Updated 28 ಆಗಸ್ಟ್ 2020, 7:41 IST
ರಿಲಯನ್ಸ್ ಜಿಯೊ ಕರ್ನಾಟಕದ ಸಿಇಒ ಅಮಿತಾಬ್‌ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಜಿಮ್ಮಿ ಅಮ್ರೋಲಿಯಾ ಅವರು ಬೆಂಗಳೂರು ನಗರ ಕಮಿಷನರ್ ಕಮಲ್‌ ಪಂತ್‌ ಅವರಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಹಸ್ತಾಂತರಿಸಿದರು.
ರಿಲಯನ್ಸ್ ಜಿಯೊ ಕರ್ನಾಟಕದ ಸಿಇಒ ಅಮಿತಾಬ್‌ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಜಿಮ್ಮಿ ಅಮ್ರೋಲಿಯಾ ಅವರು ಬೆಂಗಳೂರು ನಗರ ಕಮಿಷನರ್ ಕಮಲ್‌ ಪಂತ್‌ ಅವರಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಹಸ್ತಾಂತರಿಸಿದರು.   
""

ಬೆಂಗಳೂರು: ರಿಲಯನ್ಸ್‌ ಫೌಂಡೇಷನ್‌ ಹಾಗೂ ರಿಲಯನ್ಸ್‌ ಇನ್ಫೋಕಾಮ್‌ ವತಿಯಿಂದ ಬೆಂಗಳೂರು ಸಂಚಾರಿ ಪೊಲೀಸರಿಗೆ 50 ಸಾವಿರ ಎನ್‌-95 ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು.

ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಕಾರ್ಯಕ್ರಮ ಆಯೋಜಿಸಲಾಗಿತ್ತು.ರಿಲಿಯನ್ಸ್‌ ಜಿಯೊ ಕರ್ನಾಟಕದ ಸಿಇಒ ಅಮಿತಾಬ್‌ ಭಾಟಿಯಾ ಅವರು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಬೆಂಗಳೂರು ನಗರದ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಹಾಗೂ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ಅವರಿಗೆ ಹಸ್ತಾಂತರಿಸಿದರು.

ಇದೇ ವೇಳೆ ಮಾತನಾಡಿದ ಭಾಟಿಯಾ, ‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಜೊತೆಗೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕೂಡ ಶ್ರಮಿಸುತ್ತಿದ್ದು, ಈಗಾಗಲೇ ಹಲವು ಬಗೆಯ ನೆರವನ್ನು ನೀಡುತ್ತಿದೆ ಎಂದು ಹೇಳಿದರು.

ADVERTISEMENT
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.