ADVERTISEMENT

ಜಾಗತಿಕ ನವೋದ್ಯಮ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ– ಪ್ಯಾರಿಸ್‌ಗೆ ಸರಿಸಾಟಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:05 IST
Last Updated 13 ಜೂನ್ 2025, 16:05 IST
<div class="paragraphs"><p>ಸಿಲಿಕಾನ್‌ ಸಿಟಿ ಬೆಂಗಳೂರು</p></div>

ಸಿಲಿಕಾನ್‌ ಸಿಟಿ ಬೆಂಗಳೂರು

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ (ಜಿಎಸ್‌ಇಆರ್‌) ಬೆಂಗಳೂರು ನಗರ 21 ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ.

ADVERTISEMENT

ಫ್ರಾನ್ಸ್‌ನ ಪ್ಯಾರಿಸ್‌ ನಗರದಲ್ಲಿ ನಡೆಯುತ್ತಿರುವ ವಿವಾ ಟೆಕ್ನಾಲಜಿ (ವಿವಾಟೆಕ್) ಸಮಾವೇಶದಲ್ಲಿ ಬಿಡುಗಡೆಗೊಳಿಸಿದ ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆ ಸೂಚ್ಯಂಕ ವರದಿಯಲ್ಲಿ ಬೆಂಗಳೂರಿನ ನವೋದ್ಯಮ ಕ್ಷೇತ್ರದ ಸಾಧನೆ ಉತ್ತಮಗೊಂಡಿದೆ ಎಂಬ ಮಾಹಿತಿಯನ್ನು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹಂಚಿಕೊಂಡಿದ್ದಾರೆ. ಪ್ರಿಯಾಂಕ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ನವೋದ್ಯಮ ಕ್ಷೇತ್ರದಲ್ಲಿನ ನಿರ್ವಹಣೆ, ಹೂಡಿಕೆ, ಮಾರುಕಟ್ಟೆ ತಲುಪುವಿಕೆ, ಪ್ರತಿಭೆ ಮತ್ತು ಅನುಭವ, ಜ್ಞಾನ ಮತ್ತು ಉದಯೋನ್ಮುಖ ಸ್ಥಳೀಯ ಕೃತಕ ಬುದ್ಧಿಮತ್ತೆ (ಎಐ) ಶಕ್ತಿಯನ್ನು ಆಧರಿಸಿ ರ್‍ಯಾಂಕಿಂಗ್ ಅನ್ನು ನಿರ್ಧರಿಸಲಾಗುತ್ತದೆ.

ಜಾಗತಿಕ ನಾವೀನ್ಯತೆಯಲ್ಲಿ ದೊಡ್ಡಮಟ್ಟದ ಬದಲಾವಣೆ ಆಗುತ್ತಿದೆ. ಉನ್ನತ ಮಟ್ಟದ ನವೋದ್ಯಮ ಕೇಂದ್ರದ ‘ಉದಯೋನ್ಮುಖ ತಾರೆ’ಯಾಗಿ ಬೆಂಗಳೂರು ಹೊರಹೊಮ್ಮುತ್ತಿದೆ. ಪ್ಯಾರಿಸ್‌ 12, ಫಿಲಿಡಲ್ಫಿಯಾ 13 ಮತ್ತು ಸಿಯಾಟೆಲ್‌ 15ನೇ ರ್‍ಯಾಂಕಿಂಗ್‌ನಲ್ಲಿವೆ. ಬೆಂಗಳೂರು ಈ ನಗರಕ್ಕೆ ಸರಿಸಮಾನವಾಗಿ ಮುನ್ನಡೆಯುತ್ತಿದೆ ಎಂದು ಪ್ರಿಯಾಂಕ್‌ ಹೇಳಿದ್ದಾರೆ.

ಡೀಪ್‌ ಟೆಕ್‌ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಮುನ್ನಡೆಯಲ್ಲೂ ಬೆಂಗಳೂರು ಉತ್ತಮ ಸ್ಥಾನ ಗಳಿಸಿದೆ. ಎಐ ಮತ್ತು ಬಿಗ್‌ ಡೆಟಾ ವ್ಯವಸ್ಥೆಯಲ್ಲಿ ಬೆಂಗಳೂರು 5 ನೇ ರ್‍ಯಾಂಕಿಂಗ್‌ ಪಡೆದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.