ADVERTISEMENT

600 ಚದರ ಅಡಿ ತಾರಸಿಯಲ್ಲಿ 100ಕ್ಕೂ ಹೆಚ್ಚು ಗಿಡಗಳು: ವೆಂಕಟ್‌ ಅವರ ಹಸಿರು ಸಾಹಸ

ಪ್ರಜಾವಾಣಿ ವಿಶೇಷ
Published 2 ಫೆಬ್ರುವರಿ 2026, 15:41 IST
Last Updated 2 ಫೆಬ್ರುವರಿ 2026, 15:41 IST

ಕಾಂಕ್ರಿಟ್‌ ಕಾಡು ಎಂದೇ ಹೆಸರು ಪಡೆದಿರುವ ಬೆಂಗಳೂರಿನ ಹೃದಯಭಾಗದಲ್ಲಿ, ತಾರಸಿಯ ಮೇಲೆ ಮಲೆನಾಡಿನ ಸಸ್ಯವೈವಿಧ್ಯವನ್ನು ಜೀವಂತಗೊಳಿಸಿದ ಸಾಹಸ ಇದು. ಎಂಜಿನಿಯರ್‌ ವೃತ್ತಿಯ ವೆಂಕಟರಾಮನ್ ಅವರು 600 ಚದರ ಅಡಿ ತಾರಸಿಯಲ್ಲಿ ಹೂ, ಹಣ್ಣು, ತರಕಾರಿ, ಕಾಫಿ, ಕಬ್ಬು ಸೇರಿದಂತೆ ನೂರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ತಾಯಿಯ ನೆನಪಿಗೆ ನಿರ್ಮಿಸಿದ ಈ ತೋಟದಲ್ಲಿ ವಿಜ್ಞಾನ, ಸುಸ್ಥಿರತೆ, ಆಧ್ಯಾತ್ಮ ಮತ್ತು ಮಾನಸಿಕ ನೆಮ್ಮದಿ ಒಂದಾಗಿ ಬೆಸೆದುಕೊಂಡಿವೆ. ನಗರ ಜೀವನದ ಒತ್ತಡಕ್ಕೆ ಹಸಿರು ಪರಿಹಾರ ನೀಡುವ ಅಪರೂಪದ ಪ್ರಯೋಗ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.