
ಬೆಂಗಳೂರು: ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯು (ಐಎಲ್‌ವೈಎಫ್) ಇದೇ 29ರಿಂದ ಫೆ.1ರವರೆಗೆ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ವೀರಶೈವ-ಲಿಂಗಾಯತ ಜಾಗತಿಕ ವ್ಯಾಪಾರ ಸಮಾವೇಶ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಲ್‌ವೈಎಫ್ ಟ್ರಸ್ಟ್ ಅಧ್ಯಕ್ಷ ಸಂತೋಷ್ ಕಂಚಂಬಾ, ‘ಸಮುದಾಯದ ಉದ್ಯಮಿಗಳನ್ನು ಒಟ್ಟುಗೂಡಿಸುವ ಜತೆಗೆ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಈ ಸಮಾವೇಶ ಉದ್ಘಾಟಿಸುತ್ತಾರೆ. 230ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, 75 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
‘ಉದ್ಯಮಿಗಳು, ನೀತಿ ನಿರೂಪಕರು, ಜಾಗತಿಕ ವ್ಯಾಪಾರ ಪ್ರತಿನಿಧಿಗಳು ಒಂದೇ ಸೂರಿನಡಿ ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಯುವಕರಿಗೆ ಆರ್ಥಿಕ ಸಬಲೀಕರಣದ ಮಹತ್ವ ತಿಳಿಸುವುದು, ಉದ್ಯಮಶೀಲತೆ ಉತ್ತೇಜಿಸುವುದು, ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ವೇಗ ಕಲ್ಪಿಸುವುದು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಮುದಾಯದ ಪಾತ್ರ ಬಲಪಡಿಸುವ ಕುರಿತು ಯೋಜನೆ ರೂಪಿಸುವುದು ಈ ಸಮಾವೇಶದ ಉದ್ದೇಶ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.