
ಪ್ರಜಾವಾಣಿ ವಾರ್ತೆ
ಬಸವಕಲ್ಯಾಣ: ನಗರದ ಅಕ್ಕಮಹಾದೇವಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1985-1988ನೇ ಸಾಲಿನ ಸಹಪಾಠಿಗಳಿಂದ ಶಿವಪುರ ರಸ್ತೆಯಲ್ಲಿನ ಕೇತಕಿ ಸಂಗಮೇಶ್ವರ ಸಭಾಂಗಣದಲ್ಲಿ ಗುರುವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 24 ಶಿಕ್ಷಕರನ್ನು ಪುಷ್ಪವೃಷ್ಟಿಗೈದು ಸ್ವಾಗತಿಸಿ ಬಳಿಕ ಮೈಸೂರು ಪೇಟ, ಶಾಲು, ಪುಷ್ಪಮಾಲೆ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಹಪಾಠಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದರು. ಹಾಸ್ಯ ಚಟಾಕಿಗಳನ್ನು ಹೇಳಿ ಸಂಭ್ರಮಿಸಿದರು. ಬಗೆಬಗೆಯ ತಿನಿಸುಗಳ ಊಟ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.