ಪ್ರತಿ ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಿಕ್ಕಮಗಳೂರು ಜಿಲ್ಲೆ, ಈ ಬಾರಿಯೂ ಪ್ರವಾಸ ಪ್ರಿಯರನ್ನು ಆಕರ್ಷಿಸುತ್ತಿದೆ. ಸತತ ಮಳೆಯಿಂದ ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ಚಿಕ್ಕಮಗಳೂರಿನಿಂದ ಹೊರಟು, ಕೈಮರ ಬಳಿ ಎಡ ತಿರುವು ತೆಗೆದುಕೊಂಡರೆ ಚೆಕ್ ಪೋಸ್ಟ್ ಎದುರಾಗುತ್ತದೆ. ಅಲ್ಲಿ, ಚೆಕ್ಕಿಂಗ್ ಮುಗಿಸಿ, ಮುಂದೆ ಸಾಗಿದರೆ ಹಸಿರ ವನರಾಶಿ ನಿಮ್ಮ ಕಣ್ಮನ ಸೆಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.