ADVERTISEMENT

ನರಸಿಂಹರಾಜಪುರ: ಕುಂಬ್ರಿ ಗ್ರಾಮ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:08 IST
Last Updated 9 ಅಕ್ಟೋಬರ್ 2025, 5:08 IST
ಸಿಂಸೆ ಗ್ರಾಮದ ಕುಂಬ್ರಿ ಬಳಿ ಬುಧವಾರ ಬೆಳಿಗ್ಗೆ ಪ್ರತ್ಯೇಕ್ಷವಾದ ಎರಡು ಕಾಡಾನೆಗಳು
ಸಿಂಸೆ ಗ್ರಾಮದ ಕುಂಬ್ರಿ ಬಳಿ ಬುಧವಾರ ಬೆಳಿಗ್ಗೆ ಪ್ರತ್ಯೇಕ್ಷವಾದ ಎರಡು ಕಾಡಾನೆಗಳು   

ನರಸಿಂಹರಾಜಪುರ: ಸಿಂಸೆ ವ್ಯಾಪ್ತಿಯ ಕುಂಬ್ರಿ ಗ್ರಾಮದ ವ್ಯಾಪ್ತಿಯಲ್ಲಿ ಬುಧವಾರ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸಿಂಸೆ ಗ್ರಾಮದ ಕಾಗಲದಿಬ್ಬದ ಏಲಿಯಾಸ್ ಎಂಬುವರಿಗೆ ಸೇರಿದ ಗದ್ದೆಗೆ ನುಗ್ಗಿದ ಆನೆಗಳು ಭತ್ತದ ಬೆಳೆಗೆ ಹಾನಿ ಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆ ಕೊಪ್ಪದಲ್ಲಿದ್ದ ಎರಡು ಕಾಡಾನೆಗಳು ತೀರ್ಥಹಳ್ಳಿ ಭಾಗಕ್ಕೆ ಹೋಗಿದ್ದವು. ಇವೇ ಆನೆಗಳು ತಾಲ್ಲೂಕಿನ ಮಲ್ಲಂದೂರು ಗುಡ್ಡವನ್ನು ದಾಟಿ ಸಿಂಸೆ ಗ್ರಾಮದ ಸಮೀಪ ಬಂದಿವೆ. ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯವರು ಸೇರಿಕೊಂಡು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯ ಕೈಗೊಂಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.