
ಹೊಸದುರ್ಗ (ಚಿತ್ರದುರ್ಗ): ‘ಯುಗದ ಉತ್ಸಾಹವ ನೋಡಿರೇ’ ಧ್ಯೇಯ ವಾಕ್ಯದೊಂದಿಗೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಶಿವಕುಮಾರ ಬಯಲು ರಂಗಮಂದಿರದಲ್ಲಿ ನ.2ರಿಂದ 6 ದಿನ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.
‘ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ, ಚಿಂತನ, ಉಪನ್ಯಾಸ, ವಿಚಾರ ಸಂಕಿರಣವು ನಡೆಯಲಿವೆ. ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ನಾಟಕೋತ್ಸವ ಉದ್ಘಾಟಿಸುವರು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಬಾರಿ ಶಿವಸಂಚಾರ– 25 ತಂಡದಿಂದ ನಮ್ಮದೇ ರಚನೆಯ ‘ಜಂಗಮದೆಡೆಗೆ’, ‘ಶಿವಯೋಗಿ ಸಿದ್ಧರಾಮೇಶ್ವರ’, ಕೃಷ್ಣಮೂರ್ತಿ ಮೂಡಬಾಗಿಲು ರಚನೆಯ ‘ಕಳ್ಳರ ಸಂತೆ’, ರವಿಕಿರಣ್ ಆರ್. ಬಳ್ಳಗೆರೆ ಅವರ ‘ಆಳಿದ ಮಾಸ್ವಾಮಿಗಳು’, ಹಂಪಾನಾ ಅವರ ದೇಶೀ ಕಾವ್ಯ ‘ಚಾರು ವಸಂತ’, ವಿಜಯ ಭಾಸ್ಕರ ರಚನೆಯ ‘ಗಾಂಧಿ ಜಯಂತಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ನ. 7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ನಟಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರಿಗೆ ‘ಶ್ರೀ ಶಿವಕುಮಾರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.