ADVERTISEMENT

ಬೆಳಾಲು: ಮೂರು ತಿಂಗಳ ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 11:15 IST
Last Updated 22 ಮಾರ್ಚ್ 2025, 11:15 IST
<div class="paragraphs"><p>ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ</p></div>

ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

   

ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮೂರು ತಿಂಗಳ ಹೆಣ್ಣು ಶಿಶು ಕಾಡಿನ ಮಧ್ಯೆ ಶನಿವಾರ ಪತ್ತೆಯಾಗಿದೆ. 

ದಾರಿಹೋಕರೊಬ್ಬರಿಗೆ ಶಿಶು ಅಳುವ ಶಬ್ದ ಕೇಳಿಸಿತ್ತು. ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಅಲ್ಲಿ ಶಿಶು ಇರುವುದು ಕಾಣಿಸಿತು. ಅವರು ನೀಡಿದ ಮಾಹಿತಿ ಆಧಾರದ ಮೇಲೆ, ಧರ್ಮಸ್ಥಳ ಪೊಲೀಸರು, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಹಾಗೂ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ಶಿಶುವನ್ನು ಪುತ್ತೂರಿನ ಶ್ರೀರಾಮ ಸೇವಾ ಸಮಿತಿಯ ವಾತ್ಸಲ್ಯಧಾಮ ದತ್ತು ಕೇಂದ್ರದ ಸುಪರ್ದಿಗೆ ವಹಿಸಿದ್ದೇವೆ. ಅವರು ಶಿಶುವಿನ ಆರೈಕೆ ಮಾಡಲಿದ್ದಾರೆ. ಸೋಮವಾರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಶಿಶುವಿನ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷೆ ಅಕ್ಷತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಶು ಆರೋಗ್ಯವಾಗಿದೆ. ಅಗತ್ಯ ವೈದ್ಯಕೀಯ ತಪಾಸಣೆಗೂ ವ್ಯವಸ್ಥೆ ಮಾಡಿದ್ದೇವೆ’ ಎಂದರು. ಶಿಶು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

‘ಶಿಶುವಿನ ತಂದೆ ತಾಯಿ ಯಾರು ಎಂದು ಪತ್ತೆಯಾಗಿಲ್ಲ. ಪೋಷಕರೇ ಅದನ್ನು ಕಾಡಿನಲ್ಲಿ ಬಿಟ್ಟುಹೋಗಿರುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.