ADVERTISEMENT

ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 22:11 IST
Last Updated 13 ಅಕ್ಟೋಬರ್ 2025, 22:11 IST
ದಾವಣಗೆರೆಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಅಮಲು ಬರುವ ಸಿರಪ್‌ ಬಾಟಲಿಗಳು
ದಾವಣಗೆರೆಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಅಮಲು ಬರುವ ಸಿರಪ್‌ ಬಾಟಲಿಗಳು   

ದಾವಣಗೆರೆ: ಅಮಲು ಬರುವ ಸಿರಪ್‌ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದ್ವಿಚಕ್ರ ವಾಹನ ಸೇರಿ ₹1.25 ಲಕ್ಷ ಮೌಲ್ಯದ ವಿವಿಧ ಕಂಪನಿಗಳ ಸಿರಪ್‌ ಬಾಟಲಿ ಮತ್ತು ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. 

ಸ್ಥಳೀಯ ನಿವಾಸಿಗಳಾದ ಶಿವಕುಮಾರ, ಅಜಿಮುದ್ದೀನ್, ಮಹಮದ್ ಶಾರೀಕ್, ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿಬ ಸೈಯದ್ ಬಾಬು ಹಾಗೂ ಚನ್ನಗಿರಿ ಅಬ್ದುಲ್ ಗಫರ್ ಬಂಧಿತರು. 

ಮಾದಕ ದ್ರವ್ಯ ನಿಗ್ರಹ ಪಡೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಅಕ್ರಮವಾಗಿ ಅಮಲು ಬರುವ ಸಿರಪ್‌ ಬಾಟಲಿಗಳನ್ನು ಮಾರುತ್ತಿರುವುದು ಕಂಡುಬಂದಿತ್ತು. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.