ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಗುರುವಾರ, ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಗೌಡ ಅವರ ಮನೆಯ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದರು.
ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ, ಬೆಳಿಗ್ಗೆ 9ರ ವೇಳೆಗೆ ಬಂದ ಅಧಿಕಾರಿಗಳು ಸಂಜೆಯವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಕೆಲ ದಾಖಲೆಗಳ ಸಂಬಂಧ ಅವರ ತಾಯಿ ಮತ್ತು ಸಹೋದರನ ವಿಚಾರಣೆ ನಡೆಸಿದರು.
ಐಶ್ವರ್ಯ ಗೌಡ ವಿರುದ್ಧ ಬೆಂಗಳೂರಿನಲ್ಲಿ ಸುಮಾರು ₹9 ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿದ ಆರೋಪವಿದೆ. ಮಂಡ್ಯದ ಪೊಲೀಸ್ ಠಾಣೆಯಲ್ಲೂ ವಂಚನೆ ಪ್ರಕರಣಗಳ ಸಂಬಂಧ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.