
ಪ್ರಜಾವಾಣಿ ವಾರ್ತೆ
ಮಂಡ್ಯ: ‘ಸಿಎಂ ಸ್ಥಾನ ಬದಲಾವಣೆ ಬಗ್ಗೆ ನೀವು ಏನೇ ಕೇಳಿದರೂ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ಈ ವಿಷಯದಲ್ಲಿ ನಾನೇ ಸ್ವಯಂ ನಿರ್ಬಂಧ ಹಾಕಿಕೊಂಡು ಒಂದು ತಿಂಗಳು ಮೌನ ವ್ರತದಲ್ಲಿರುತ್ತೇನೆ’ ಎಂದು ಶಾಸಕ ಪಿ.ರವಿಕುಮಾರ್ (ಗಣಿಗ) ಹೇಳಿದರು.
ಯತೀಂದ್ರ ಅವರ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಶಾಸಕರು ಈ ರೀತಿ ಉತ್ತರಿಸಿದರು. ಮುಂದುವರಿದು, ‘ಅಧಿಕಾರದಲ್ಲಿದ್ದವರು ಶಾಂತವಾಗಿ ಇರಬೇಕು. ಬೇರೆಯವರನ್ನು ರೊಚ್ಚಿಗೇಳಿಸಬಾರದು’ ಎಂದಷ್ಟೇ ಹೇಳಬಹುದು. ಅಂತಿಮವಾಗಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ನಾವು ಊಟಕ್ಕೆ ಸೇರಿರಲಿಲ್ಲ. ಸೌಹಾರ್ದವಾಗಿ ಸ್ನೇಹಿತರ ಆಹ್ವಾನದ ಮೇರೆಗೆ ಒಂದೆಡೆ ಸೇರಿ ಊಟ ಮಾಡಿದೆವು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.