ADVERTISEMENT

ಪ್ರವಾಹ ಮಧ್ಯೆ ಅಣೆಕಟ್ಟು ಗೇಟ್ ತೆರೆಯುವ ಯತ್ನ: ವಿಡಿಯೋ‌ ವೈರಲ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 11:28 IST
Last Updated 15 ಜುಲೈ 2022, 11:28 IST
   

ಶಕ್ತಿನಗರ (ರಾಯಚೂರು): ತಾಲ್ಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಕೆಪಿಸಿಎಲ್ ನಿಂದ ನಿರ್ಮಿಸಿದ ಅಣೆಕಟ್ಟು ಗೇಟ್ ಗಳನ್ನು ವ್ಯಕ್ತಿಯೊಬ್ಬ ಕ್ರೇನ್ ಗೆ ನೇತಾಡಿಕೊಂಡು ಶುಕ್ರವಾರ ತೆರೆಯಲು ಯತ್ನಿಸಿದ್ದ ವಿಡಿಯೋ‌ ವೈರಲ್ ಆಗಿದೆ.

ಪ್ರವಾಹದ ಮುನ್ನಚ್ಚರಿಕೆ ಇದ್ದರೂ ಅಣೆಕಟ್ಟಿನ‌ ಎಲ್ಲ ಗೇಟ್ ಗಳನ್ನು ತೆರೆದಿಲ್ಲ. 194 ಗೇಟ್ ಗಳ ಪೈಕಿ 94 ಗೇಟ್ ಮಾತ್ರ ತೆರೆದಿದ್ದು, ಇದರಿಂದ ಹಿನ್ನೀರು ಸಂಗ್ರಹವಾಗಿ ಗುರ್ಜಾಪುರ ಮತ್ತು ಅರಿಷಿಣಗಿ ಗ್ರಾಮಗಳ ಜಮೀನುಗಳು ಮುಳುಗಡೆಯಾಗಿವೆ.

'ಕೃಷ್ಣಾನದಿಯಲ್ಲಿ ಸದ್ಯ 1.33 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ. ಪ್ರತಿವರ್ಷ 3 ಲಕ್ಷ ಕ್ಯುಸೆಕ್ ತಲುಪುವವರೆಗೂ ಜಮೀನುಗಳಿಗೆ ನೀರು‌ ನುಗ್ಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಸಮಯಕ್ಕೆ ಗೇಟ್ ತೆಗೆದಿಲ್ಲ' ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ADVERTISEMENT

ಜೆಸಿಬಿ ಮೂಲಕ ಗೇಟ್ ತೆರೆಸಲು ಆರ್ ಟಿಪಿಎಸ್ ಸಿಬ್ಬಂದಿಯೊಬ್ಬರನ್ನು ಕರೆತರಲಾಗಿತ್ತು. ಆದರೆ, ಪ್ರವಾಹದ ಸೆಳೆತಕ್ಕೆ ಯುವಕ ಹೆದರಿದ್ದರಿಂದ ಗೇಟ್ ತೆರೆಯಲು ಸಾಧ್ಯವಾಗಿಲ್ಲ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.