ಕಾಪು ಲೈಟ್‌ಹೌಸ್ ಬಳಿ ಸಮುದ್ರದಲ್ಲಿ ಮಗುಚಿದ ದೋಣಿ: ಏಳು ಮಂದಿ ಮೀನುಗಾರರ ರಕ್ಷಣೆ
ಕಾಪು (ಉಡುಪಿ): ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸೋಮವಾರ ಕಾಪು ಲೈಟ್‌ಹೌಸ್ ಬಳಿ ಮಗುಚಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಆಂಧ್ರ ಪ್ರದೇಶದ ಏಳು ಮಂದಿ ಮೀನುಗಾರರಿದ್ದ ಟ್ರಾಲ್ ಬೋಟ್ ಮಲ್ಪೆಯಿಂದ ಹೊರಟಿತ್ತು. ಕಾಪು ಪಡು ಗ್ರಾಮದ ಲೈಟ್ ಹೌಸ್ ಬೀಚ್‌ನ ಬಳಿ ತಲುಪಿದಾಗ ರಭಸದಿಂದ ಗಾಳಿ ಬೀಸಿದ ಪರಿಣಾಮವಾಗಿ ದೋಣಿ ಮಗುಚಿದೆ.
ದೋಣಿಯಲ್ಲಿದ್ದ ಮೀನುಗಾರರೆಲ್ಲ ಆಂಧ್ರಪ್ರದೇಶದ ವಿಶಾಖಪಟ್ಟಣದವರಾಗಿದ್ದು, ಮಲ್ಪೆಯಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.