ADVERTISEMENT

ಗೋಕರ್ಣ: ಆತ್ಮಲಿಂಗಕ್ಕೆ ಪೂಜೆಗೈದ ಶಿವನ ಭಕ್ತರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 6:48 IST
Last Updated 26 ಫೆಬ್ರುವರಿ 2025, 6:48 IST
<div class="paragraphs"><p>ಗೋಕರ್ಣದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿರುವ ದೃಶ್ಯ</p></div>

ಗೋಕರ್ಣದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿರುವ ದೃಶ್ಯ

   

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಭಕ್ತರು ಬುಧವಾರ ಶಿವಯೋಗದ ಪರ್ವಕಾಲದಲ್ಲಿ, ಉತ್ಸಾಹದಲ್ಲಿ ಪೂಜೆಯಲ್ಲಿ ಭಾಗವಹಿಸಿದರು.

ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಮಧ್ಯರಾತ್ರಿಯಿಂದಲೇ ಮಹಾಗಣಪತಿ ಮತ್ತು ಮಹಾಬಲೇಶ್ವರನ ಪೂಜೆಗಾಗಿ ಸರತಿ ಸಾಲಿನಲ್ಲಿ ಭಕ್ತರು ನಿಂತು, ಬೆಳಗಿನ ಜಾವ ಪೂಜೆ ಅರ್ಪಿಸಿ ಧನ್ಯತಾಭಾವಕ್ಕೆ ಒಳಗಾದರು.

ADVERTISEMENT

ಸುತ್ತ-ಮುತ್ತಲಿನ ಹಳ್ಳಿಯ ಜನರು ಬೆಳಗಿನ ಸಮಯದಲ್ಲಿ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರ ಸಂಖ್ಯೆ ಪ್ರತಿ ವರ್ಷಕ್ಕಿಂತ ಕಡಿಮೆ ಇತ್ತು. ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಅವರು ಶಿವನ ಆತ್ಮಲಿಂಗಕ್ಕೆ ಬೆಳಗಿನ ಜಾವ 2 ಗಂಟೆಗೆ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.

ಮರಳಿನ ಲಿಂಗಕ್ಕೆ ಪೂಜೆ ಸಲ್ಲಿಕೆ: ಕೆಲವು ಭಕ್ತರು ಸಮುದ್ರದಲ್ಲಿ ಮರಳಿನ ಲಿಂಗ ಮಾಡಿ ತಾವೇ ಸ್ವತಃ ಪೂಜೆ ಮಾಡಿದರು. ಅರಿಶಿನ, ಕುಂಕುಮ ಹಚ್ಚಿ, ಹೂವು ಬಿಲ್ವಪತ್ರ ಹಾಕಿ, ಕರ್ಪೂರದ ಆರತಿ ಎತ್ತಿ ಭಕ್ತಿ ಪರವಶರಾದರು. ಮುಖ್ಯ ಕಡಲ ತೀರದಲ್ಲಿ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಸ್ಥಳೀಯ ಗ್ರಾಮ ಪಂಚಾಯಿತಿ ಜಾತ್ರೆ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಸಕಲ ಏರ್ಪಾಡು ಮಾಡಿದೆ. ಕೋಟಿತೀರ್ಥ ಮತ್ತು ಸಮುದ್ರದಲ್ಲಿ ಪ್ರವಾಸಿಗರು ಎಚ್ಛರಿಕೆ ವಹಿಸುವಂತೆ ಫಲಕ ಅಳವಡಿಸಲಾಗಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸಮುದ್ರ ತೀರದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಶಿವ ಭಕ್ತರಿಗೆ ಮಜ್ಜಿಗೆ, ವಿತರಣೆ: ಸ್ಥಳೀಯ ಲಯನ್ಸ್ ಕ್ಲಬ್ ಘಟಕ ಜಾತ್ರೆಗೆ ಬಂದ ಭಕ್ತರಿಗೆ ಗಣಪತಿ ದೇವಸ್ಥಾನದ ಹತ್ತಿರ ಮಜ್ಜಿಗೆ ವಿತರಣೆ ಮಾಡಿದರು. ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ಮಜ್ಜಿಗೆ ವಿತರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.