ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಕ್ಯಾಡೆನ್ಸ್,ದ ಡೂನ್, ಫ್ಲಿಪ್‌ಕಾರ್ಟ್ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 0:30 IST
Last Updated 7 ಏಪ್ರಿಲ್ 2025, 0:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

ಕ್ಯಾಡೆನ್ಸ್ ಸ್ಕಾಲರ್‌ಷಿಪ್‌

ಕ್ಯಾಡೆನ್ಸ್ ಸ್ಕಾಲರ್‌ಷಿಪ್‌ ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯುತ್ತಿರುವವರಿಗೆ ಆರ್ಥಿಕ ನೆರವು ನೀಡುತ್ತದೆ. 

ADVERTISEMENT

ಅರ್ಹತೆ:   ಭಾರತೀಯ ಪ್ರಜೆಯಾಗಿರಬೇಕು. ಪದವಿಪೂರ್ವ ಕೋರ್ಸ್‌ಗಳಿಗೆ, ಅರ್ಜಿದಾರರು ಕನಿಷ್ಠ ಶೇ 60ರಷ್ಟು  ಅಂಕಗಳೊಂದಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಕಡಿಮೆ ಆದಾಯದ ಇರುವ ಕುಟುಂಬದಿಂದ ಬಂದಿರಬೇಕು. ಎಸ್‌ಟಿಯಿಎಂ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಅಂಗವಿಕಲರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 

ಆರ್ಥಿಕ ಸಹಾಯ: ಪ್ರಮುಖ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಆರ್ಥಿಕ ನೆರವು

ಅರ್ಜಿ ಸಲ್ಲಿಸಲು ಕೊನೆ ದಿನ: 31-05-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/pjvi/TCSP5

****

ದ ಡೂನ್ ಸ್ಕೂಲ್ ಪ್ರವೇಶಕ್ಕೆ...

ದ ಡೂನ್ ಸ್ಕೂಲ್ ಸ್ಕಾಲರ್‌ಷಿಪ್‌ ಎಕ್ಸಾಮಿನೇಷನ್ (ಡಿಎಸ್ಎಸ್‌ಇ), ಇದು ಡೂನ್ ಸ್ಕೂಲ್, ಡೆಹ್ರಾಡೂನ್, ಉತ್ತರಾಖಂಡ ನಡೆಸುವ ವಾರ್ಷಿಕ ಪ್ರವೇಶ ಪರೀಕ್ಷೆಯಾಗಿದೆ. ಶಾಲಾ ಶುಲ್ಕವನ್ನು ಪಾವತಿಸಲು ಅಸಮರ್ಥರಾದಂತಹ ಕುಟುಂಬಗಳ, 7 ಅಥವಾ 8ನೇ ತರಗತಿಗೆ ದಾಖಲಾಗುವಂಥ  ಬಾಲಕರಿಗೆ ಈ ವಿದ್ಯಾರ್ಥಿವೇತನ ಪರೀಕ್ಷೆಯು ಲಭ್ಯವಿರುತ್ತದೆ.

ಅರ್ಹತೆ:  ಭಾರತೀಯ ವಿದ್ಯಾರ್ಥಿಗಳಾಗಿರಬೇಕು. ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 30ಕ್ಕೆ 11ರಿಂದ 13 ವರ್ಷ ವಯಸ್ಸಿನವರಾಗಿರಬೇಕು. ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೆ 7 ಅಥವಾ 8ನೇ ತರಗತಿಗೆ ದಾಖಲಾತಿಯನ್ನು ಪಡೆದಿರಬೇಕು.

ಆರ್ಥಿಕ ಸಹಾಯ:  ವಿದ್ಯಾರ್ಥಿವೇತನದ ರೂಪದಲ್ಲಿ ಆರ್ಥಿಕ ಬೆಂಬಲದ ಸಹಿತ ಡೂನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುವ ಅವಕಾಶ.

ಅರ್ಜಿ ಸಲ್ಲಿಸಲು ಕೊನೆ ದಿನ:  15-04-2025

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನ್ ಮತ್ತು ಆಫ್‌ಲೈನ್ ಇ-ಮೇಲ್ ಮೂಲಕ: admissions@doonschool.com

ಹೆಚ್ಚಿನ ಮಾಹಿತಿಗೆ: www.b4s.in/pjvi/DSSE2

****

ಫ್ಲಿಪ್‌ಕಾರ್ಟ್ ಫೌಂಡೇಷನ್ ಸ್ಕಾಲರ್‌ಷಿಪ್‌

ಕಿರಾಣಿ ಅಂಗಡಿ ಮಾಲೀಕರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ಫೌಂಡೇಷನ್ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವೃತ್ತಿಪರ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ಕಿರಾಣಿ ಅಂಗಡಿ ಮಾಲೀಕರ ಮಕ್ಕಳ ಸಬಲೀಕರಣಕ್ಕಾಗಿ ಈ ವಿದ್ಯಾರ್ಥಿವೇತನವು ಮೀಸಲಾಗಿದೆ.

ಅರ್ಹತೆ:  ಅಭ್ಯರ್ಥಿಗಳು ಪ್ರಸ್ತುತ ಭಾರತದಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವೃತ್ತಿಪರ ಪದವಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಕೋರ್ಸ್‌ಗಳ 1ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರಬೇಕು. ಹೆತ್ತವರಲ್ಲಿ ಒಬ್ಬರು ಕಿರಾಣಿ ಅಂಗಡಿಯ ಮಾಲೀಕರಾಗಿರಬೇಕು (‍ಕೆಎಸ್ಒ). ಅಭ್ಯರ್ಥಿಗಳು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ
₹ 5 ಲಕ್ಷವನ್ನು ಮೀರಬಾರದು.

ಆರ್ಥಿಕ ಸಹಾಯ: ₹ 50,000 ನಿಗದಿತ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಕೊನೆ ದಿನ: 16-04-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/pjvi/FLIP1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.