ADVERTISEMENT

LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ನಾಲ್ಕನೇ ಹಂತ: ಕುಬೇರದಿಂದ ಕುಚೇಲರವರೆಗೆ

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:14 IST
Last Updated 4 ಮೇ 2024, 23:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆಸ್ತಿಯ ಅಸಮಾನತೆಯ ಉದಾಹರಣೆಯನ್ನು ಲೋಕಸಭೆ ಚುನಾವಣೆಯ ನಾಲ್ಕನೇ ಹಂತವು ಒದಗಿಸುತ್ತದೆ. ಟಿಡಿಪಿಯ ಗುಂಟೂರು ಅಭ್ಯರ್ಥಿ ಡಾ.ಚಂದ್ರಶೇಖರ್ ಪೆಮ್ಮಸಾನಿ ಅವರು ₹5,705 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಬಾಪಟ್ಲಾದ ಪಕ್ಷೇತರ ಅಭ್ಯರ್ಥಿ ಕಟ್ಟಾ ಆನಂದಬಾಬು ತಮ್ಮ ಬಳಿ ₹7 ಮಾತ್ರ ಇದೆ ಎಂದು ಹೇಳಿಕೊಂಡಿದ್ದಾರೆ. 

ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಶನಿವಾರ ವರದಿ ಪ್ರಕಟಿಸಿದೆ. ಅಭ್ಯರ್ಥಿಗಳ ಪೈಕಿ ಶೇ 21 ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಶೇ 16 ಅಭ್ಯರ್ಥಿಗಳ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ 22 ಮಂದಿಗೆ ಕಾಂಗ್ರೆಸ್‌ ಹಾಗೂ 32 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿವೆ. ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅಪರಾಧ ಎಸಗಿದ 50 ಮಂದಿ ಕಣದಲ್ಲಿದ್ದಾರೆ.  

ADVERTISEMENT

ಶೇ 28ರಷ್ಟು ಹುರಿಯಾಳುಗಳು ಕೋಟ್ಯಧಿಪತಿಗಳು. ಅಂದರೆ ಪ್ರತಿ ಮೂವರು ಅಭ್ಯರ್ಥಿಗಳ ಪೈಕಿ ಒಬ್ಬರು ಕೋಟ್ಯಧಿಪತಿ. ಅಖಾಡದಲ್ಲಿರುವ ಹುರಿಯಾಳುಗಳ ಸರಾಸರಿ ಆಸ್ತಿ ₹11.72 ಕೋಟಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.