ADVERTISEMENT

ಲೋಕಸಭೆ ಚುನಾವಣೆ: ಕಾಂಗ್ರೆಸ್ ‘ಸ್ಟಾರ್’ ಪ್ರಚಾರಕರ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:38 IST
Last Updated 31 ಮಾರ್ಚ್ 2024, 15:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರ ಮನಗೆಲ್ಲುವ ಕಸರತ್ತಿನಲ್ಲಿ ತೊಡಗಿರುವ ಕಾಂಗ್ರೆಸ್, ‘ಸ್ಟಾರ್’ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ರಾಜ್ಯದ ನಾಯಕರು ಸೇರಿ ಒಟ್ಟು 40 ಮಂದಿಯ ಹೆಸರಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ. ವೇಣುಗೋಪಾಲ್, ವೀರಪ್ಪ ಮೊಯಿಲಿ, ಬಿ.ವಿ. ಶ್ರೀನಿವಾಸ್, ಲಕ್ಷ್ಮಣ ಸವದಿ, ಈಶ್ವರ್ ಖಂಡ್ರೆ, ವಿನಯಕುಮಾರ್ ಸೊರಕೆ, ಬಿ.ಕೆ. ಹರಿಪ್ರಸಾದ್, ಆರ್ ವಿ. ದೇಶಪಾಂಡೆ, ಡಾ.ಜಿ. ಪರಮೇಶ್ವರ, ಎಚ್. ಕೆ. ಪಾಟೀಲ, ಎಂ.ಬಿ. ಪಾಟೀಲ ಹೆಸರು ಪಟ್ಟಿಯಲ್ಲಿದೆ.

ADVERTISEMENT

ಇನ್ನು, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಚ್. ಎಂ. ರೇವಣ್ಣ, ಪಿ.ಜಿ. ಆರ್. ಸಿಂಧ್ಯಾ, ಬಿ. ಸೋಮಶೇಖರ್, ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್, ಅಭಿಷೇಕ್ ದತ್, ಜಮೀರ್ ಅಹಮದ್ ಖಾನ್, ಮಧು ಬಂಗಾರಪ್ಪ, ಪಿ.ಟಿ. ಪರಮೇಶ್ವರ್ ನಾಯಕ್, ವಿ.ಎಸ್. ಉಗ್ರಪ್ಪ, ಸತೀಶ ಜಾರಕಿಹೊಳಿ, ತನ್ವೀರ್ ಸೇಠ್, ಪುಷ್ಪಾ ಅಮರನಾಥ್, ಉಮಾಶ್ರೀ ಕೂಡಾ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.