ADVERTISEMENT

LS Election Results Karnataka|ಮತ ಎಣಿಕೆ ಮುಕ್ತಾಯ– BJP 17, JDS 2, Cong 9

ಲೋಕಸಭಾ ಚುನಾವಣೆ 2024 ರ ಕರ್ನಾಟಕ ಕ್ಷೇತ್ರಗಳ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2024, 16:21 IST
Last Updated 4 ಜೂನ್ 2024, 16:21 IST
<div class="paragraphs"><p>ದಾವಣಗೆರೆ ಲೋಕಸಭಾ ವಿಜೇತ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಅವರ ಪತಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಸಿಹಿ ತಿನ್ನಿಸಿದರು</p></div>

ದಾವಣಗೆರೆ ಲೋಕಸಭಾ ವಿಜೇತ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಅವರ ಪತಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಸಿಹಿ ತಿನ್ನಿಸಿದರು

   

ಲೋಕಸಭೆಗೆ ದೇಶದಲ್ಲಿ ನಡೆದ ಏಳು ಹಂತಗಳ ಮತದಾನದಲ್ಲಿ ಏ. 26 ಹಾಗೂ ಮೇ 7ರಂದು ಎರಡು ಹಂತಗಳಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬಿಜೆಪಿ–ಜೆಡಿಎಸ್‌ ಮೈತ್ರಿ ಒಂದೆಡೆಯಾದರೆ, ಆಡಳಿತಾರೂಢ ಕಾಂಗ್ರೆಸ್ ಮತ್ತೊಂದೆಡೆ. ಯಾರ ಕೈ ಮೇಲಾಗಲಿದೆ ಎಂಬುದಕ್ಕೆ ಇಂದು ನಡೆಯಲಿರುವ ಮತ ಎಣಿಕೆ ತೆರೆ ಎಳೆಯಲಿದೆ. ಮತ ಎಣಿಕೆ ನಡೆಯುತ್ತಿದ್ದು, ನಿರೀಕ್ಷೆಗಳು ಗರಿಗೆದರಿವೆ...

ಬೀದರ್ ಲೋಕಸಭಾ ಕ್ಷೇತ್ರ; ಮತ ಎಣಿಕೆಗೆ ಕ್ಷಣಗಣನೆ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 14 ಟೇಬಲ್ ಗಳಲ್ಲಿ 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲು ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಆನಂತರ ವಿದ್ಯುನ್ಮಾನ ಮತಯಂತ್ರಗಳ ಮತಗಳನ್ನು ಎಣಿಸಲಾಗುತ್ತದೆ.

ADVERTISEMENT

ಬೀದರ್ ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಸಚಿವ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್ ಖಂಡ್ರೆ ನಡುವೆ ನೇರ ಹಣಾಹಣಿ ಇದೆ.

ಮತ ಎಣಿಕೆಗೆ ಕ್ಷಣಗಣನೆ: ಬಿಗಿ ಭದ್ರತೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಇಲ್ಲಿನ ಆರ್‌.ಡಿ ಕಾಲೇಜಿನಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಸಿಬ್ಬಂದಿ ಆಗಮಿಸುತ್ತಿದ್ದು, ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ. ಕೇಂದ್ರದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇಲ್ಲಿ 17,61,694 ಮತದಾರರಿದ್ದಾರೆ. ಈ ಪೈಕಿ 13,85,688(ಶೇ 78.66) ಮತಗಳ ಚಲಾವಣೆಯಾಗಿದೆ. 18 ಮಂದಿ ಕಣದಲ್ಲಿದ್ದಾರೆ.

ಕೊಪ್ಪಳ: ಮತ ಎಣಿಕೆ ಕೇಂದ್ರಕ್ಕೆ ಬಂದ ಅಧಿಕಾರಿಗಳು

ಕೊಪ್ಪಳ: ಕಳೆದ ತಿಂಗಳು ನಡೆದಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಯಾರು ಗೆಲುವು ಸಾಧಿಸುತ್ತಾರೆ ಎನ್ನುವ ಕುತೂಹಲ ಹಾಗೂ ಚರ್ಚೆ ಬಿರುಸು ಪಡೆದುಕೊಂಡಿದೆ. ಎಣಿಕೆ ಕಾರ್ಯ ಆರಂಭಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಣಿಕೆ ಕೇಂದ್ರವಾದ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯಕ್ಕೆ ಬಂದಿದ್ದಾರೆ.

ಕೊಪ್ಪಳದ ಮತ ಎಣಿಕೆ ಕೇಂದ್ರವಾದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯಕ್ಕೆ ಬಂದ ವಿವಿಧ ಪಕ್ಷಗಳ ಎಜೆಂಟರನ್ನು ಪೊಲೀಸರು ತಪಾಸಣೆ ಮಾಡಿದರು

ಮೈಸೂರು: ಮತ ಎಣಿಕೆಗೆ ಕ್ಷಣಗಣನೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಇಲ್ಲಿನ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್‌ನ ಎಂ.ಲಕ್ಷ್ಮಣ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡುವೆ ನೇರ ಪೈಪೋಟಿ ಇದೆ. ಇದಲ್ಲದೇ ಇನ್ನೂ 16 ಮಂದಿ ‌ಕಣದಲ್ಲಿದ್ದಾರೆ. ಮತದಾರರು ಯಾರಿಗೆ ಆಶೀರ್ವಾದ ಮಾಡಿದ್ದಾರೆ ಎನ್ನುವ ಚಿತ್ರಣ ಮಧ್ಯಾಹ್ನದ ವೇಳೆಗೆ ದೊರೆಯುವ ಸಾಧ್ಯತೆ ‌ಇದೆ.

ಮಂಡ್ಯ: ಭದ್ರತಾ ಕೊಠಡಿ ತೆರೆದ ಅಧಿಕಾರಿಗಳು

ಮಂಡ್ಯ: ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮಂಡ್ಯ ವಿವಿ ಆವರಣದ ವಾಣಿಜ್ಯ ಬ್ಲಾಕ್‌ನಲ್ಲಿ ಆರಂಭಗೊಂಡಿದೆ. ಎಣಿಕೆ ವೀಕ್ಷಕ ನೀರಜ್ ಕುಮಾರ್, ಜಿಲ್ಲಾ‌ ಚುನಾವಣಾಧಿಕಾರಿ ಕುಮಾರ ಅವರ ನೇತೃತ್ವದಲ್ಲಿ ಭದ್ರತಾ ಕೊಠಡಿ ತೆರೆಯಲಾಯಿತು.

ವಿಧಾನಸಭಾ ಕ್ಷೇತ್ರವಾರು ವಿದ್ಯುನ್ಮಾನ ಮತಯಂತ್ರಗಳನ್ನು ಎಣಿಕೆ ಟೇಬಲ್ ನತ್ತ‌ ಕೊಂಡೊಯ್ಯುವ ಪ್ರಕ್ರಿಯೆ ಆರಂಭಿಸಲಾಯಿತು. ಮತ ಎಣಿಕೆಗೆ ಒಟ್ಟು 123 ಟೇಬಲ್ ಸಿದ್ಧಗೊಳಿಸಲಾಗಿದೆ.

ಕಣದಲ್ಲಿ 14 ಅಭ್ಯರ್ಥಿಗಳಿದ್ದರೂ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ನಡುವೆ ನೇರ ಹಣಾಹಣಿ ಇದೆ.

ಬಳ್ಳಾರಿ: ಮತ ಎಣಿಕೆಗೆ ಕ್ಷಣಗಣನೆ

ಬಳ್ಳಾರಿ: ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

ಒಟ್ಟು 112 ಟೇಬಲ್‍ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಸೂಕ್ಷ್ಮ ವೀಕ್ಷಕರನ್ನಯ ನೇಮಕ ಮಾಡಲಾಗಿದೆ.

ಚಾಮರಾಜನಗರ: ಮತ ಎಣಿಕೆಗೆ ಕ್ಷಣ ಗಣನೆ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸಿ.ಟಿ.ಶಿಲ್ಪಾನಾಗ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಯಿತು.

ಬೇಡರಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಎಂಟು ಗಂಟೆಗೆ ಶುರುವಾಗಲಿದೆ. 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ: ಮತ ಎಣಿಕೆಗೆ ಕ್ಷಣಗಣನೆ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಶುರುವಾಗಲಿದೆ. ವಿದ್ಯುನ್ಮಾನ ಮತಯಂತ್ರಗಳಿರುವ (ಇವಿಎಂ) ಸೀಲಿಂಗ್ ಆಗಿರುವ ಸ್ಟ್ರಾಂಗ್ ರೂಂಗಳನ್ನು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ನೇತೃತ್ವದಲ್ಲಿ ಬೆಳಿಗ್ಗೆ ತೆರೆದು, ಎಣಿಕೆ ಕಾರ್ಯಕ್ಕೆ ಅಣಿಗೊಳಿಸಲಾಯಿತು.

ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಏಕಕಾಲಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದ್ದು, ಸಂಜೆಯೊಳಗೆ ಎಲ್ಲ ಕ್ಷೇತ್ರಗಳಲ್ಲೂ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಫಲಿತಾಂಶ ಯಾರಿಗೆಲ್ಲ ನಿರ್ಣಾಯಕ?

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಗಳಾಗಿದ್ದು, ಅವರಿಗೆಲ್ಲ ಗೆಲುವು ಪ್ರತಿಷ್ಠೆಯಾಗಿದೆ. ಬಿಜೆಪಿ ಹಿಂದಿಗಿಂತ ಹೆಚ್ಚು ಸ್ಥಾನ ಗಳಿಸುವುದು ಅಥವಾ ಹಿಂದೆ ಗೆದ್ದ ಕ್ಷೇತ್ರಗಳು ಕೈತಪ್ಪದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲಿದೆ.

ಬೀದರ್‌ ಲೋಕಸಭಾ ಕ್ಷೇತ್ರ: ಸ್ಟ್ರಾಂಗ್‌ ರೂಮ್‌ ಓಪನ್‌

ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಸೀಲ್‌ ಮಾಡಲಾಗಿದ್ದ ಸ್ಟ್ರಾಂಗ್‌ ರೂಮ್‌ಗಳನ್ನು ಬೆಳಿಗ್ಗೆ 7.15ಕ್ಕೆ ತೆರೆಯಲಾಯಿತು. ಮೊದಲು ಅಂಚೆ ಮತಪತ್ರಗಳು ಹಾಗೂ ಆನಂತರ ವಿದ್ಯುನ್ಮಾನ ಮತಯಂತ್ರಗಳ ಕೊಠಡಿಗಳನ್ನು ತೆಗೆಯಲಾಯಿತು.

ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ, ಚುನಾವಣಾ ವೀಕ್ಷಕ ದೀಪಾಂಕರ ಮೊಹಪಾತ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌., ವಿವಿಧ ರಾಜಕೀಯ ಪಕ್ಷಗಳ ಏಜೆಂಟರು ಹಾಜರಿದ್ದರು. ಬೆಳಿಗ್ಗೆ 8ಕ್ಕೆ ಅಂಚೆ ಮತಪತ್ರಗಳ ಎಣಿಕೆ, ಆನಂತರ ಇವಿಎಮ್‌ಗಳಲ್ಲಿನ ಮತಗಳ ಎಣಿಕೆ ಜರುಗಲಿದೆ.

ಉತ್ತರ ಕನ್ನಡ: ಅಂಚೆ ಮತ ಎಣಿಕೆ ಪ್ರಕ್ರಿಯೆ ಆರಂಭ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುವ ಕುಮಟಾ ಪಟ್ಟಣದ ಡಾ.ಎ.ವಿ.ಬಾಳಿಗಾ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ನಸುಕಿನ ಜಾವದಿಂದಲೇ ಸಿಬ್ಬಂದಿ ದೌಡಾಯಿಸಿದರು‌.

ಕೇಂದ್ರದ ಮುಖ್ಯ ಪ್ರವೇಶದ್ವಾರದಲ್ಲಿ ಬಿಗು ತಪಾಸಣೆ ನಡೆಸಿ ಸಿಬ್ಬಂದಿಯನ್ನು ಒಳಕ್ಕೆ ಬಿಡಲಾಯಿತು. ಮತ ಎಣಿಕೆ ಏಜೆಂಟರನ್ನೂ ತಪಾಸಣೆಗೊಳಪಡಿಸಿ ಬಿಡಲಾಯಿತು. ಕೇಂದ್ರದ ಒಳಕ್ಕೆ ಸಿಬ್ಬಂದಿ ಮೊಬೈಲ್ ತರದಂತೆ ಪೊಲೀಸರು ತಪಾಸಣೆ ನಡೆಸಿ ಒಳಗೆ ಬಿಟ್ಟರು.

ಬೆಳಗಾವಿ: ಮತ ಎಣಿಕೆ ಪ್ರಕ್ರಿಯೆ ಆರಂಭ

ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಪ್ರಕ್ರಿಯೆ ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಮಂಗಳವಾರ ಆರಂಭವಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್‌ಗಳನ್ನು ಚುನಾವಣಾ ಸಾಮಾನ್ಯ ವೀಕ್ಷಕರಾದ ಎಂ.ಕೆ.ಅರವಿಂದ ಕುಮಾರ್ ಹಾಗೂ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ನಗರ ಪೊಲೀಸ್ ಆಯುಕ್ತರಾದ ಯಡಾ‌ ಮಾರ್ಟಿನ್ ಮಾರ್ಬನ್ಯಾಂಗ್ ಉಪಸ್ಥಿತರಿದ್ದರು.

ಮೊದಲು ಅಂಚೆ ಮತಪತ್ರಗಳು ಹಾಗೂ ಆನಂತರ ವಿದ್ಯುನ್ಮಾನ ಮತಯಂತ್ರಗಳ ಕೊಠಡಿಗಳನ್ನು ತೆಗೆಯಲಾಯಿತು. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬೆಳಗಾವಿ ಲೋಕಸಭೆಗೆ ಈ ಬಾರಿ 13,75,283 ಮತದಾರರು ಹಕ್ಕು ಚಲಾಯಿಸಿದ್ದಾರೆ. ದಾಖಲೆಯ ಶೇ 71.49ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌– ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಬೆಳಗಾವಿಯ ಆರ್‌ಪಿಡಿ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ನಿತೇಶ್‌ ಪಾಟೀಲ ಸ್ಟ್ರಾಂಗ್‌ ರೂಮ್‌ ಪರಿಶೀಲಿಸಿದರು

ಹಾಸನ: ಮತ ಎಣಿಕೆ ಆರಂಭ

ಹಾಸನ: ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಹಾಗೂ ಕೇಂದ್ರ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಂನ ಬೀಗವನ್ನು ತೆರೆಯಲಾಯಿತು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ನೇತೃತ್ವದಲ್ಲಿ ಇವಿಎಂಗಳನ್ನು ಎಣಿಕೆಗಾಗಿ ಟೇಬಲ್‌ಗಳಿಗೆ ಸಾಗಿಸಲಾಯಿತು. ವಿಧಾನಸಭಾ ಕ್ಷೇತ್ರವಾರು ತಲಾ 14 ಟೇಬಲ್‌ಗಳನ್ನು ಮಾಡಲಾಗಿದೆ. ಪ್ರತಿ ಟೇಬಲ್‌ಗೂ ಪ್ರತ್ಯೇಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಜಿಲ್ಲಾಧಿಕಾರಿ ಹಾಗೂ ಕೇಂದ್ರ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಂನ ಬೀಗವನ್ನು ತೆರೆಯಲಾಯಿತು.

ವಿಜಯಪುರ ಲೋಕಸಭಾ ಕ್ಷೇತ್ರ: ಮತ ಎಣಿಕೆ ಆರಂಭ

ವಿಜಯಪುರ ಎಸ್. ಸಿ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಬೆಳಿಗ್ಗೆ 8ಕ್ಕೆ ಆರಂಭವಾಯಿತು. ನಗರದ ಸೈನಿಕ್ ಸ್ಕೂಲ್‌ನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಸಮ್ಮುಖದಲ್ಲಿ ಮತಯಂತ್ರಗಳನ್ನು ಇಡಲಾಗಿರುವ ಕೊಠಡಿಯ ಬೀಗ ತೆಗೆಯಲಾಯಿತು.

ಆರಂಭದಲ್ಲಿ ಸೇವಾ ಮತಗಳು, ಅಂಚೆ ಮತಗಳ ಎಣಿಕೆಗೆ ಚಾಲನೆ ನೀಡಲಾಯಿತು. ಮತ ಎಣಿಕೆ ಹಿನ್ನೆಲೆಯಲ್ಲಿ ಸೈನಿಕ್ ಸ್ಕೂಲ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಿಜೆಪಿಯ ರಮೇಶ ಜಿಗಜಿಣಗಿ, ಕಾಂಗ್ರೆಸ್ ನ ರಾಜು ಆಲಗೂರ ಸೇರಿದಂತೆ ವಿಜಯಪುರ ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು ಎಂಟು ಅಭ್ಯರ್ಥಿಗಳು ಇದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಸಮ್ಮುಖದಲ್ಲಿ ಮತಯಂತ್ರಗಳನ್ನು ಇಡಲಾಗಿರುವ ಕೊಠಡಿಯ ಬೀಗ ತೆಗೆಯಲಾಯಿತು.

ಕೊಪ್ಪಳ: ಮುಖಂಡರ ಸಮ್ಮುಖದಲ್ಲಿ ‌ಸ್ಟ್ರಾಂಗ್ ರೂಂ ತೆರೆದ ಜಿಲ್ಲಾಧಿಕಾರಿ

ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ‌ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಸ್ರ್ಟಾಂಗ್ ರೂಂ ತೆರೆದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕರು ಇದ್ದರು.

ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಚುನಾವಣಾ ಫಲಿತಾಂಶ ವೀಕ್ಷಣೆಗೆ ವ್ಯವಸ್ಥೆ

ಹಾವೇರಿ ಲೋಕಸಭಾ ಕ್ಷೇತ್ರ: ಮತ ಎಣಿಕೆ ಆರಂಭ

ಹಾವೇರಿ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ.

ಹಾವೇರಿಯ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದೆ.

ಕಣದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತ ಎಣಿಕೆ: ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್

ಯಾದಗಿರಿ: ಮತ ಎಣಿಕೆ ಹಾಗೂ ಫಲಿತಾಂಶದ ನಂತರ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ವಿವಿಧ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತುಮಕೂರು: ಮತ ಎಣಿಕೆ ಆರಂಭ

ತುಮಕೂರು: ಲೋಕಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಒಟ್ಟು 7,379 ಅಂಚೆ ಮತಗಳು ಚಲಾವಣೆಯಾಗಿವೆ.

ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಜ್ಞಾನ ಕಾಲೇಜು ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.

ಚಿಕ್ಕೋಡಿ: ಮತ ಎಣಿಕೆ ಆರಂಭ

ಚಿಕ್ಕೋಡಿ: ಇಲ್ಲಿನ ಆರ್‌.ಡಿ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು.

ಅಭ್ಯರ್ಥಿಗಳು, ಚುನಾವಣೆ ಏಜೆಂಟರು ಹಾಗೂ ಮೈಕ್ರೋ ಆಬ್ಜರ್ವರ್ಸ್‌ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್‌ ರೂಂಗಳನ್ನು ತೆರೆಯಲಾಯಿತು.

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ, ಕಾಂಗ್ರೆಸ್‌ನಿಂದ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ಒಟ್ಟು 18 ಮಂದಿ ಕಣದಲ್ಲಿದ್ದಾರೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ: ಅಂಚೆ ಮತಗಳಲ್ಲಿ ಯದುವೀರ್ ಮುನ್ನಡೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳಲ್ಲಿ ಬಿಜೆಪಿಯ ಯದುವೀರ್ ‌ಕೃಷ್ಣದತ್ತ ಚಾಮರಾಜ ಒಡೆಯರ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ.

ಹಾಸನ: ಅಂಚೆ ಮತಗಳ ಎಣಿಕೆ ಆರಂಭ

ಹಾಸನ: ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದು, ಎಣಿಕೆ ಸಿಬ್ಬಂದಿಗೆ ಚುನಾವಣಾಧಿಕಾರಿ ಪ್ರಮಾಣ ವಚನ ಬೋಧಿಸಿದರು. ನಂತರ ಅಂಚೆ ಮತಗಳ ವಿಂಗಡಣೆ ಮಾಡಲಾಗುತ್ತಿದ್ದು, ಬಂಡಲ್‌ಗಳಾಗಿ ವಿಂಗಡಿಸಲಾಗುತ್ತಿದೆ. ನಂತರ ಎಣಿಕೆ ಕಾರ್ಯ ಶುರುವಾಗಲಿದೆ.

ಒಟ್ಟು 9323 ಅಂಚೆ ಮತಗಳು ಚಲಾವಣೆ ಆಗಿವೆ. ಕೆಲವೇ ಕ್ಷಣಗಳಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ.

ಚಿಕ್ಕೋಡಿ: ಉಪಾಹಾರ ಸಿಗದೆ ಚಾಲಕರ ಪರದಾಟ

ಚಿಕ್ಕೋಡಿ ನಗರದ ಆರ್.ಡಿ‌. ಕಾಲೇಜು ಆವರಣದಲ್ಲಿ ನಿಂತಿರುವ ಸರ್ಕಾರಿ ವಾಹನಗಳ ಚಾಲಕರು ಉಪಾಹಾರ ಸಿಗದೆ ಪರದಾಡುವಂತಾಗಿದೆ.

ಈ ಆವರಣದಲ್ಲಿ ನೂರಾರು ವಾಹನಗಳು ನಿಂತಿವೆ. ಆದರೆ, ಚಾಲಕರಿಗೆ ಉಪಾಹಾರ ವ್ಯವಸ್ಥೆ ಮಾಡಿಲ್ಲ.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ ಎಣಿಕೆ ಕೇಂದ್ರದೊಳಗೆ ಹೋಗಿದ್ದಾರೆ. ಅವರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಹಾಗಾಗಿ ಅಧಿಕಾರಿಗಳು ಯಾವಾಗ ಹೊರಬರುತ್ತಾರೆ ಎಂಬ ಗೊಂದಲದಿಂದ ಚಾಲಕರು ಉಪಾಹಾರ ಸೇವನೆಗೆ ಹೊರಗೆ ಹೋಗಲಾಗದೆ ಇಲ್ಲಿಯೇ ನಿಂತಿದ್ದಾರೆ.

ದಾವಣಗೆರೆ: ಅಂಚೆ ಮತದಾನ ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಅಂಚೆ ಮತದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನಗೆ 28 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್ 742 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು 714 ಮತಗಳನ್ನು ಪಡೆದಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ದಾವಣಗೆರೆ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ದ ಹೊಸ ಕಟ್ಟಡದಲ್ಲಿ ಆರಂಭಗೊಂಡಿದೆ. ಜಿಲ್ಲಾ‌ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಭದ್ರತಾ ಕೊಠಡಿ ತೆರೆಯಲಾಯಿತು.

ಉಡುಪಿ: ಅಂಚೆ ಮತಗಳ ಎಣಿಕೆ ಆರಂಭ

ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಮತಗಳ ಎಣಿಕೆ ಇಲ್ಲಿನ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ನಡೆಯುತ್ತಿದ್ದು ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಒಟ್ಟು 7853 ಅಂಚೆ ಮತಗಳ ಚಲಾವಣೆಯಾಗಿದೆ.

ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ 12,22,888 ಮತಗಳ ಚಲಾವಣೆಯಾಗಿದ್ದು, ಶೇ 77.15 ಮತದಾನವಾಗಿತ್ತು. ಉಭಯ ಜಿಲ್ಲೆಗಳ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 112 ಟೇಬಲ್‌ಗಳಲ್ಲಿ 135 ಸುತ್ತುಗಳಲ್ಲಿ ನಡೆಯುತ್ತಿದೆ.

ದಾವಣಗೆರೆ: ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಎರಡು ವಿಧಾನಸಭಾ ಕ್ಷೇತ್ರಗಳ‌‌ ಮೊದಲ ಸುತ್ತು ಮುಕ್ತಾಯಗೊಂಡಿದ್ದು, 1759 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದಾರೆ.

ಬಾಗಲಕೋಟೆಯಲ್ಲಿ ಅಂಚೆ‌ ಮತಗಳ ಎಣಿಕೆ ಆರಂಭ

ಬಾಗಲಕೋಟೆ: ಲೋಕಸಭಾ ಕ್ಷೇತ್ರದಲ್ಲಿ 7,253 ಅಂಚೆ ಮತಗಳು ಚಲಾವಣೆಯಾಗಿದ್ದು, ಅವುಗಳ ಮತ ಎಣಿಕೆ ಆರಂಭಿಸಲಾಗಿದೆ.ಅಂಚೆ ಮತಗಳನ್ನು ಎರಡು ಕೊಠಡಿಗಳಲ್ಲಿ ಮಾಡಲಾಗುತ್ತಿದ್ದು, 25ರ ಕಟ್ಟಾಗಿ ವಿಂಗಡಣೆ ಕಾರ್ಯ ನಡೆದಿದೆ

ಚಿತ್ರದುರ್ಗ: ಮತ ಎಣಿಕೆ ಆರಂಭ

ಚಿತ್ರದುರ್ಗ: ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ನಗರದ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಮಂಗಳವಾರ ಆರಂಭವಾಗಿದೆ. ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ.

ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿ ತೆರೆಯಲಾಯಿತು. 8 ವಿಧಾನಸಭಾ ಕ್ಷೇತ್ರ ಹಾಗೂ ಅಂಚೆ ಮತಪತ್ರಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿದ ಕೊಠಡಿಯಲ್ಲಿ ನಿಗದಿಯಂತೆ ಬೆಳಿಗ್ಗೆ 8 ಗಂಟೆಮತ ಎಣಿಕೆ ಆರಂಭವಾಯಿತು.

ಕಾಂಗ್ರೆಸ್ ನ ಬಿ.ಎನ್.ಚಂದ್ರಪ್ಪ ಹಾಗೂ ಬಿಜೆಪಿಯ ಗೋವಿಂದ ಕಾರಜೋಳ ಸೇರಿ 20 ಅಭ್ಯರ್ಥಿಗಳ ಕಣದಲ್ಲಿದ್ದಾರೆ.

ಚಿತ್ರದುರ್ಗದಲ್ಲಿ ಮತ ಎಣಿಕೆ ಆರಂಭ


ದಕ್ಷಿಣ ಕನ್ನಡ: ಮತ ಎಣಿಕೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಸುರತ್ಕಲ್ ನ ಎನ್ಐಟಿಕೆ ಪ್ರಾಂಗಣದ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಆರಂಭವಾಯಿತು.

ದಕ್ಷಿಣ ಕನ್ನಡ‌ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬೆಳಿಗ್ಗೆ 7.30 ಕ್ಕೆ ಅಭ್ಯರ್ಥಿಗಳ ಏಜೆಂಟರ ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಇಟ್ಟಿದ್ದ ಭದ್ರತಾ ಕೊಠಡಿಯ ಬಾಗಿಲು ತೆರೆದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಇದ್ದರು.

ದಕ್ಷಿಣ ಕನ್ನಡ‌ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು  ಭದ್ರತಾ ಕೊಠಡಿಯ ಬಾಗಿಲು ತೆರೆದರು.

ಕೊಪ್ಪಳ: ದೇವರ ಮೊರೆ ಹೋದ ಅಭ್ಯರ್ಥಿಗಳು

ಕೊಪ್ಪಳ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮಂಗಳವಾರ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದರ್ಶನ ಪಡೆದರು.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹುಲಿಗಿಯಲ್ಲಿ ದರ್ಶನ ಪಡೆಯುವುದರ ಜೊತೆಗೆ ಕುಷ್ಟಗಿ ತಾಲ್ಲೂಕಿನ ಎಂ. ಗುಡದೂರು ಗ್ರಾಮದಲ್ಲಿರುವ ಮನೆ ದೇವರು ದೊಡ್ಡಬಸವ ಶಿವಾಚಾರ್ಯ ಸ್ವಾಮೀಜಿ ಮಠಕ್ಕೆ ತೆರಳಿದರು. ಬಳಿಕ ಗವಿಸಿದ್ದೇಶ್ವರ ಮಠದಲ್ಲಿ ದರ್ಶನ ಪಡೆದುಕೊಂಡರು.

ರಾಜಶೇಖರ ಹಿಟ್ನಾಳ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹುಲಿಗೆಮ್ಮ ದೇವಿಯ ದರ್ಶನ ಪಡೆದು ತಮ್ಮ ಗೆಲುವಿಗಾಗಿ ಪ್ರಾರ್ಥಿಸಿದರು.

ಹುಲಿಗಿಯಲ್ಲಿ ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್

ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಶ್ರೀನಿವಾಸ ಪೂಜಾರಿಗೆ ಮುನ್ನಡೆ

ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಆರಂಭವಾಗಿದ್ದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ ಕೋಟ 1825 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಹ್ಮಾವರ ತಾಲ್ಲೂಕಿನ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಪತ್ನಿ ಶಾಂತ ಅವರೊಂದಿಗೆ ಭೇಟಿನೀಡಿ ಪೂಜೆ ಸಲ್ಲಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿಗೆ ಮುನ್ನಡೆ

ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ); 15,961

ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್); 6,230

ಬಿಜೆಪಿ ಅಭ್ಯರ್ಥಿಗೆ 9,730 ಮತಗಳ ಮುನ್ನಡೆ

ಹಾವೇರಿ ಲೋಕಸಭಾ ಕ್ಷೇತ್ರ: ಅರ್ಧ ಗಂಟೆ ತಡವಾಗಿ ಆರಂಭವಾದ ಮತ ಎಣಿಕೆ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ಸಮಯಕ್ಕೆ ಸರಿಯಾಗಿ ತೆರೆದು, ಅಂಚೆ ಮತ ಎಣಿಕೆ ಆರಂಭಗೊಂಡಿತು.

ಅಂಚೆ ಮತಗಳ ಎಣಿಕೆ ಕಾರ್ಯ ವಿಳಂಬವಾದ ಕಾರಣ, ಇವಿಎಂ ಮತಗಳ ಎಣಿಕೆ ಕಾರ್ಯ ಅರ್ಧ ತಾಸು ವಿಳಂಬವಾಯಿತು. ಬೆಳಿಗ್ಗೆ 8ಕ್ಕೆ ಆರಂಭವಾಗಬೇಕಿದ್ದ ಇವಿಎಂ ಮತ ಎಣಿಕೆ ಕಾರ್ಯ ಬೆಳಿಗ್ಗೆ 8.30ಕ್ಕೆ ಆರಂಭಗೊಂಡಿತು.

ಕೋಲಾರ: ಜೆಡಿಎಸ್‌ಗೆ 4,189 ಮತಗಳ ಮುನ್ನಡೆ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು 4,189 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಮಲ್ಲೇಶ್‌ ಬಾಬು 10,680 ಮತ ಪಡೆದರೆ, ಕಾಂಗ್ರೆಸ್‌ನ ಕೆ.ವಿ.ಗೌತಮ್‌ 6,491 ಮತ ಪಡೆದಿದ್ದಾರೆ. ನೋಟಾಗೆ 49 ಮತಗಳ ಬಿದ್ದಿವೆ.

ಈ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದು, 13.51 ಲಕ್ಷ ಮತದಾನವಾಗಿತ್ತು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 6,454 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 3,135 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು ಸುರೇಶ್ ಅವರಿಗಿಂತ 3,319 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: 2ನೇ ಸುತ್ತಿನಲ್ಲೂ ಮಂಜುನಾಥ್‌ಗೆ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 13,241 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 7,002 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು ಸುರೇಶ್ ಅವರಿಗಿಂತ 6,239 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ: ಶ್ರೇಯಸ್‌ಗೆ ಆರಂಭಿಕ ಮುನ್ನಡೆ

ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಆರಂಭವಾಗುತ್ತಿದೆ. ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆಗಾಗಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಶ್ರವಣಬೆಳಗೊಳ 19 ಸುತ್ತು, ಅರಸೀಕೆರೆ ಕ್ಷೇತ್ರ 20 ಸುತ್ತು, ಬೇಲೂರು 20 ಸುತ್ತು, ಹಾಸನ 20 ಸುತ್ತು, ಹೊಳೆನರಸೀಪುರ 24 ಸುತ್ತು, ಅರಕಲಗೂಡು 21, ಸಕಲೇಶಪುರ 21, ಕಡೂರು 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕೋಲಾರ: ಜೆಡಿಎಸ್‌ಗೆ 9 ಸಾವಿರ ಮತಗಳ ಮುನ್ನಡೆ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು 9 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಮಲ್ಲೇಶ್‌ ಬಾಬು 26,280 ಮತ ಪಡೆದರೆ ಕಾಂಗ್ರೆಸ್‌ನ ಕೆ.ವಿ.ಗೌತಮ್‌ 17,280 ಮತ ಪಡೆದಿದ್ದಾರೆ. ನೋಟಾಗೆ 166 ಮತಗಳ ಬಿದ್ದಿವೆ.

ಈ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದು, 13.51 ಲಕ್ಷ ಮತದಾನವಾಗಿತ್ತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎಣಿಕೆ ಕಾರ್ಯ ಆರಂಭವಾಗಿದ್ದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ 3,930 ಮತಗಳ‌ ಅಂತರದಲ್ಲಿ ಮುಂದಿದ್ದಾರೆ.

ಸುಧಾಕರ್ 8,199 ಮತಗಳನ್ನು ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 4,269 ಮತ ಪಡೆದಿದ್ದಾರೆ.

ಹಾಸನ: ಶ್ರೇಯಸ್‌ಗೆ ಮುನ್ನಡೆ

ಹಾಸನ: ಅಂಚೆ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ 3,496 ಹಾಗೂ ಪ್ರಜ್ವಲ್‌ಗೆ 2,683 ಮತಗಳು ಲಭ್ಯವಾಗಿವೆ. 813 ಮತಗಳ ಅಂತರದಿಂದ ಶ್ರೇಯಸ್‌ ಮುನ್ನಡೆ ಸಾಧಿಸಿದ್ದಾರೆ.

ಚಾಮುಂಡೇಶ್ವರಿ ‌ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್‌ಗೆ ಮುನ್ನಡೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಾಮುಂಡೇಶ್ವರಿ ‌ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಯದುವೀರ್ 693 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಅವರು 5123 ಮತ ಗಳಿಸಿದ್ದರೆ, ಕಾಂಗ್ರೆಸ್‌ನ ಎಂ. ಲಕ್ಷ್ಮಣ 4430 ಮತಗಳನ್ನು ಗಳಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: 2ನೇ ಸುತ್ತಿನಲ್ಲೂ ಕಾಗೇರಿಗೆ ಮುನ್ನಡೆ

ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ); 22,590

ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್); 9,252

ಬಿಜೆಪಿ ಅಭ್ಯರ್ಥಿಗೆ 13,338 ಮತಗಳ ಮುನ್ನಡೆ

ಕೊಪ್ಪಳ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ಗೆ 661 ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ

ಕಲಬುರಗಿಯಲ್ಲಿ ಇವಿ‌ಎಂ ಮತ್ತು ಅಂಚೆ ಮತ ಎಣಿಕೆ ಆರಂಭವಾಗಿದೆ.‌ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 1,110 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ: ಎಂ.ಲಕ್ಷ್ಮಣಗೆ ಮುನ್ನಡೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಲಕ್ಷ್ಮಣ 2390 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 11316 ಮತಗಳನ್ನು ಅವರು ಗಳಿಸಿದ್ದಾರೆ. ಬಿಜೆಪಿಯ ಯದುವೀರ್ ಹಿನ್ನಡೆ ಅನುಭವಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ಗೆ ಮುನ್ನಡೆ

ಎಂ.ಮಲ್ಲೇಶ್‌ ಬಾಬು (ಜೆಡಿಎಸ್‌): 36,166

ಕೆ.ವಿ.ಗೌತಮ್‌ (ಕಾಂಗ್ರೆಸ್‌): 23,871

ಮುನ್ನಡೆ: 12,295 (ಜೆಡಿಎಸ್‌)

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾವು ಏಣಿಯಾಟ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾವು ಏಣಿಯಾಟ ನಡೆಯುತ್ತಿದ್ದು, ಈಗ ಬಿಜೆಪಿಯ ಯದುವೀರ್ ಮುನ್ನಡೆ ಗಳಿಸಿದ್ದಾರೆ. 26,350 ಮತಗಳನ್ನು ಗಳಿಸಿರುವ ಅವರು ಕಾಂಗ್ರೆಸ್‌ನ ಎಂ.ಲಕ್ಷ್ಮಣ ‌ಅವರಿಗಿಂತ 5,344 ಮತಗಳ ಮುನ್ನಡೆ ಸಾಧಿಸಿದ್ದಾರೆ. ಲಕ್ಷ್ಮಣ ಈವರೆಗೆ 21,006 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ: ಬಿಜೆಪಿಯ ಬಿ.ವೈ.ರಾಘವೇಂದ್ರಗೆ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 8,050 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿ.ವೈ.ರಾಘವೇಂದ್ರ 26,691, ಗೀತಾ ಶಿವರಾಜಕುಮಾರ್ 18,641 ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 1,277 ಮತಗಳ ಪಡೆದಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: 3ನೇ ಸುತ್ತಿನಲ್ಲೂ ಕಾಗೇರಿಗೆ ಮುನ್ನಡೆ

ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ); 32,241

ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್); 13,114

ಬಿಜೆಪಿ ಅಭ್ಯರ್ಥಿಗೆ 19,127 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 3ನೇ ಸುತ್ತಿನ ಮತ ಎಣಿಕೆಯಲ್ಲಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 17,117 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 11,942 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 5,175 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ: 5,315 ಮತಗಳಿಂದ ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. 3 ಸಾವಿರದಿಂದ ಐದು ಸಾವಿರ ಮತಗಳ ಅಂತರ ಹೆಚ್ಚಳ.

ಡಾ.ಸುಧಾಕರ್ 13,237

ರಕ್ಷಾ ರಾಮಯ್ಯ 7,822 ಮತ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: 4ನೇ ಸುತ್ತಿನಲ್ಲೂ ಮಂಜುನಾಥ್‌ಗೆ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 4ನೇ ಸುತ್ತಿನ ಮತ ಎಣಿಕೆಯಲ್ಲಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 25,086 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 18,166 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 6,920 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರ: ಸಾಗರ್‌ ಖಂಡ್ರೆ ಮುನ್ನಡೆ

ಭಗವಂತ ಖೂಬಾ (ಬಿಜೆಪಿ); 3,872

ಸಾಗರ್‌ ಖಂಡ್ರೆ (ಕಾಂಗ್ರೆಸ್‌); 3,984

ಮುನ್ನಡೆ; 112

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ಗೆ ಮುನ್ನಡೆ

ಎಂ.ಮಲ್ಲೇಶ್‌ ಬಾಬು (ಜೆಡಿಎಸ್‌); 66,633

ಕೆ.ವಿ.ಗೌತಮ್‌ (ಕಾಂಗ್ರೆಸ್‌); 45,666

ಮುನ್ನಡೆ: 20,967 (ಜೆಡಿಎಸ್‌)

ಚಾಮರಾಜನಗರ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಸುನಿಲ್ ಬೋಸ್ ಮುನ್ನಡೆ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸುನಿಲ್ ಬೋಸ್ ಅವರು ಎನ್ ಡಿಎ ಅಭ್ಯರ್ಥಿ ಎಸ್. ಬಾಲರಾಜ್ ಅವರಿಗಿಂತ 5,263 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಸುನಿಲ್ ಬೋಸ್ 40,480 ಮತಗಳು ಹಾಗೂ ಬಾಲರಾಜ್ 35217 ಮತಗಳನ್ನು ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ 78, 694 ಮತಗಳ ಎಣಿಕೆ ನಡೆದಿದೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 36,740 ಮತಗಳನ್ನು ಗಳಿಸಿ 8,166 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 28,574 ಮತಗಳನ್ನು ಪಡೆದಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ 3,940 ಮತಗಳ ಮುನ್ನಡೆ

ಇ. ತುಕಾರಾಂ (ಕಾಂಗ್ರೆಸ್) - 38,303

ಬಿ.ಶ್ರೀರಾಮುಲು (ಬಿಜೆಪಿ)- 34,363

ಚಿತ್ರದುರ್ಗ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 75 ಮತಗಳ ಮುನ್ನಡೆ

ಚಿತ್ರದುರ್ಗ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು 75 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ 32,239 ಹಾಗೂ ಬಿಜೆಪಿಯ ಗೋವಿಂದ ಕಾರಜೋಳ ಅವರು 32,164 ಮತ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ 67,073 ಮತ ಎಣಿಕೆ ಆಗಿದ್ದು, ನೋಟಾಗೆ 126 ಮತಗಳು ಸಿಕ್ಕಿವೆ. ಎರಡನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ.

ಕಲಬುರಗಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಆರಂಭಿಕ ಮುನ್ನಡೆ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 3,999 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಸೇರಿದಂತೆ 14 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರ: ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು 4,477 ಮತಗಳ ಮುನ್ನಡೆ ಗಳಿಸಿದ್ದಾರೆ.

ಸಾಗರ್‌ ಖಂಡ್ರೆ ಅವರು 19,061 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ 14,584 ಮತಗಳನ್ನು ಗಳಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿಗೆ ಮುನ್ನಡೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 32,295 ಮತಗಳ ಮುನ್ನಡೆ ಸಾಧಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ 55,384 ಮತ ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ 23,089 ಮತ ಗಳಿಸಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಬಿಜೆಪಿಯ ಯದುವೀರ್‌ಗೆ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 58,596 ಮತಗಳನ್ನು ಗಳಿಸಿ 7,008 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 51,588 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರ: ಡಾ.ಉಮೇಶ ಜಾಧವಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 30,493 ಮತಗಳು ಪಡೆದು 399 ಮತಗಳಿಂದ ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 30,094 ಮತಗಳು ಪಡೆದಿದ್ದಾರೆ.

ಶಿವಮೊಗ್ಗ: ಬಿಜೆಪಿಯ ಬಿ.ವೈ.ರಾಘವೇಂದ್ರ ಗೆ ಮುನ್ನಡೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಚಾಲನೆಯಲ್ಲಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 12,485 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿ.ವೈ.ರಾಘವೇಂದ್ರ 41,977, ಗೀತಾ ಶಿವರಾಜಕುಮಾರ್ 29,492 ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 2,391 ಮತಗಳ ಪಡೆದಿದ್ದಾರೆ.

ದಾವಣಗೆರೆ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಮೊದಲ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ 3,641 ಮತಗಳ ಮುನ್ನಡೆ ಕಾಯ್ದುಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 20,871 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ 17,232 ಹಾಗೂ ಜಿ.ಬಿ.ವಿನಯ್ ಕುಮಾರ್ 2,383 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 36,394 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 28,211 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 8,183 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕಲಬುರಗಿ ಕ್ಷೇತ್ರ: ಬಿಜೆಪಿಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 43,391 ಮತಗಳು ಪಡೆದು 2,216 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 41,125 ಮತಗಳು ಪಡೆದಿದ್ದಾರೆ.

ತುಮಕೂರು: ಸೋಮಣ್ಣ 1 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1,150 ಮತಗಳ ಮುನ್ನಡೆ ಪಡೆದಿದ್ದಾರೆ.

ಸೋಮಣ್ಣ 8,624 ಮತ ಪಡೆದಿದ್ದು, ಮುದ್ದಹನುಮೇಗೌಡ 7,474 ಪಡೆದಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಚೌಟ 7582 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೆಶ್ ಚೌಟ 7582 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಚೌಟ 18,181 ಮತ, ಕಾಂಗ್ರೆಸ್‌ನ ಪದ್ಮರಾಜ್ ಆರ್.ಪೂಜಾರಿ 10,599 ಮತ ಪಡೆದಿದ್ದಾರೆ.

ಧಾರವಾಡ  ಲೋಕಸಭಾ ಕ್ಷೇತ್ರ: ಜೋಶಿ ಮುನ್ನಡೆ

ಪ್ರಲ್ಹಾದ ಜೋಶಿ (ಬಿಜೆಪಿ) - 33,579

ವಿನೋದ ಅಸೂಟಿ- 26,962

ಹಾಸನ: ಪ್ರಜ್ವಲ್‌ಗೆ 3,500 ಮತಗಳ ಮುನ್ನಡೆ

ಹಾಸನ: ಮೊದಲ ಸುತ್ತಿನ ಮತಗಳ ಎಣಿಕೆ ನಂತರ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ 3,500 ಮತಗಳಿಂದ ಮುನ್ನಡೆ ಸಾಧಸಿದ್ದಾರೆ.

ಪ್ರಜ್ವಲ್‌ ರೇವಣ್ಣ 76,767 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ 73,295 ಮತ ಪಡೆದಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿಗೆ ಮುನ್ನಡೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 42,156 ಮತಗಳ ಮುನ್ನಡೆ ಸಾಧಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ 76,198 ಮತ ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ 34,042 ಮತ ಗಳಿಸಿದ್ದಾರೆ.

ಚಿಕ್ಕೋಡಿ ಲೋಕಸಭೆ ಕ್ಷೇತ್ರ: ಪ್ರಿಯಾಂಕಾ ಜಾರಕಿಹೊಳಿಗೆ ಮುನ್ನಡೆ

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ 31,303 ಮತ ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 39,836 ಮತಗಳನ್ನು ಪಡೆದು, 8,533 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 70,855 ಮತಗಳನ್ನು ಗಳಿಸಿ 12,072 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 58,783 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಯದುವೀರ್ ಮುನ್ನಡೆಯ ಅಂತರ ಹೆಚ್ಚಾಗುತ್ತಿದೆ.

ಚಿತ್ರದುರ್ಗ: 3,341 ಮತಗಳಿಂದ ಬಿಜೆಪಿ ಮುನ್ನಡೆ

ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಗೋವಿಂದ ಕಾರಜೋಳ ಅವರು 3,341 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಗೋವಿಂದ ಕಾರಜೋಳ ಅವರು 67,985 ಮತ ಗಳಿಸಿದ್ದು, ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ 64,644 ಮತ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ 1,37,534 ಮತ ಎಣಿಕೆ ಆಗಿದೆ.

ಸುರಪುರ ವಿಧಾನಸಭೆ ಉಪಚುನಾವಣೆ: ಬಿಜೆಪಿಗೆ 14 ಮತಗಳ ಮುನ್ನಡೆ

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದು, ಮೊದಲ ಹಂತದ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಗೆ 14 ಮತಗಳ ಮುನ್ನಡೆ ಲಭಿಸಿದೆ.

ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) 4,651 ಮತ, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 4, 637 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ 14 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 49,951 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 39,146 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 10,805 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಬಿಜೆಪಿಗೆ ಮುನ್ನಡೆ

ಪಿ.ಸಿ.ಮೋಹನ್ (ಬಿಜೆಪಿ): 27993

ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್): 25010

ಮುನ್ನಡೆ- ಬಿಜೆಪಿ- 2983

ಮಂಡ್ಯ ಲೋಕಸಭಾ ಕ್ಷೇತ್ರ: ಎಚ್‌ಡಿಕೆಗೆ ಮುನ್ನಡೆ

ಬಿಜೆಪಿ- ಜೆಡಿಎಸ್: ಎಚ್.ಡಿ.ಕುಮಾರಸ್ವಾಮಿ: 87,042

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು: 53,874

ಎಚ್.ಡಿ.ಕುಮಾರಸ್ವಾಮಿ 33,160 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ

ಚಾಮರಾಜನಗರ: ಕಾಂಗ್ರೆಸ್‌ನ ಸುನಿಲ್ ಬೋಸ್‌ಗೆ ಭಾರಿ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸುನಿಲ್ ಬೋಸ್ ಅವರು ಎರಡನೇ ಸುತ್ತಿನ ಮುಕ್ತಾಯಕ್ಕೆ 15,602 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಎರಡನೇ ಸುತ್ತಿನಲ್ಲಿ ಅವರು 40,829 ಮತಗಳನ್ನು ಪಡೆದಿದ್ದು, ಎನ್‌ಡಿಎಯ ಬಾಲರಾಜ್ ಅವರು 30,490 ಮತ ಗಳಿಸಿದ್ದಾರೆ.

ಸುರಪುರ ವಿಧಾನಸಭೆ ಉಪ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಅಭ್ಯರ್ಥಿ 928 ಮತಗಳ ಮುನ್ನಡೆ

ಮತಗಳು ಎರಡನೇ ಸುತ್ತು

ರಾಜೂಗೌಡ( ಬಿಜೆಪಿ)- 9,466

ರಾಜ ವೇಣುಗೋಪಾಲ ನಾಯಕ ( ಕಾಂಗ್ರೆಸ್) - 10,394

ಅಶೋಕ ಲಕ್ಷ್ಮಣ- 134

ವೇಣುಗೋಪಾಲ ನಾಯಕ-43

ವೆಂಕಟಪ್ಪ ನಾಯಕ- 30

ಶಶಿಕುಮಾರ್-23

ನೋಟಾ- 76

ಒಟ್ಟು ಮತದಾನ -20,166

ದಾವಣಗೆರೆ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ 6318 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ 26,226 ಮತ, ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನಗೆ 32,544 ಮತ ಪಡೆದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ 3,312 ಮತಗಳನ್ನು ಪಡೆದುಕೊಂಡಿದ್ದಾರೆ

ತುಮಕೂರು: ಮುನ್ನಡೆ ಕಾಯ್ದುಕೊಂಡ ಸೋಮಣ್ಣ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 5,518 ಮತಗಳ ಮುನ್ನಡೆ ಪಡೆದಿದ್ದಾರೆ. ಸೋಮಣ್ಣ 43,798 ಮತ ಪಡೆದಿದ್ದು, ಮುದ್ದಹನುಮೇಗೌಡ 38,280 ಮತ ಪಡೆದಿದ್ದಾರೆ.

ಕಲಬುರಗಿ: ಕಾಂಗ್ರೆಸ್-ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ

ಕಲಬುರಗಿ: ಗುಲಬರ್ಗಾ ಲೋಕಸಭಾ ಮತಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ‌ದೊಡ್ಡಮನಿ, ಬಿಜೆಪಿ ಅಭ್ಯರ್ಥಿ ‌ಡಾ. ಉಮೇಶ್ ಜಾಧವ್ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರೂ ಅಭ್ಯರ್ಥಿಗಳು ಒಂದೊಂದು ಸುತ್ತಿನಲ್ಲಿ ಅಲ್ಪ ಮುನ್ನಡೆ, ಹಿನ್ನಡೆ ಸಾಧಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರು 76,899 ಮತ ಪಡೆದು 7,213 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 69,686 ಮತಗಳು ಪಡೆದಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಬಿಜೆಪಿಗೆ ಅಲ್ಪಮತದ ಮುನ್ನಡೆ

ಪಿ.ಸಿ.ಮೋಹನ್ (ಬಿಜೆಪಿ): 59,388

ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್): 58,960

ಮುನ್ನಡೆ- ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ಗೆ 428 ಅಲ್ಪ ಮತಗಳ ಮುನ್ನಡೆ

ಹಾವೇರಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿಗೆ 4,570 ಮತಗಳ ಮುನ್ನಡೆ

ಹಾವೇರಿ ಲೋಕಸಭಾ ಕ್ಷೇತ್ರ

ಬಸವರಾಜ ಬೊಮ್ಮಾಯಿ (ಬಿಜೆಪಿ): 64,053

ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್): 59,483

ಬಿಜೆಪಿ ಅಭ್ಯರ್ಥಿಗೆ 4,570 ಮತಗಳ ಮುನ್ನಡೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಿ.ಸಿ.ಮೋಹನ್‌ಗೆ ಮುನ್ನಡೆ

ಪಿ.ಸಿ.ಮೋಹನ್ (ಬಿಜೆಪಿ): 53,385

ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್): 47,289

ಮುನ್ನಡೆ- ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ಗೆ 6,098 ಮತಗಳ ಮುನ್ನಡೆ - ಆರಂಭಿಕ ಸುತ್ತು ಹೊರತು ಪಡಿಸಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತುಮಕೂರು : ಸೋಮಣ್ಣಗೆ 16 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 16,280 ಮತಗಳ ಮುನ್ನಡೆ ಪಡೆದಿದ್ದಾರೆ.ಸೋಮಣ್ಣ 89,179 ಮತ ಪಡೆದಿದ್ದು, ಮುದ್ದಹನುಮೇಗೌಡ 72,899 ಮತ ಪಡೆದಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ: ಪ್ರಜ್ವಲ್‌ ರೇವಣ್ಣಗೆ ಮುನ್ನಡೆ

ಹಾಸನ: 9 ನೇ ಸುತ್ತು ಮುಕ್ತಾಯಕ್ಕೆ

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ - 1,90,984

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ -1,87,809

3,175 ಮತಗಳಿಂದ ಪ್ರಜ್ವಲ್‌ರೇವಣ್ಣ ಮುನ್ನಡೆ

2450 ನೋಟಾ ಮತಗಳು

ಚಾಮರಾಜನಗರ: ಸುನಿಲ್ ಬೋಸ್‌ಗೆ 19,156 ಮತಗಳ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ನ ಸುನಿಲ್ ಬೋಸ್ ಅವರು 19,156 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೂರನೇ ಸುತ್ತಿನಲ್ಲಿ ಬೋಸ್ 39,923 ಮತಗಳನ್ನು ಪಡೆದಿದ್ದು, ಎನ್ ಡಿಎಯ ಬಾಲರಾಜ್ ಅವರು 36,369 ಮತ ಗಳಿಸಿದ್ದಾರೆ. ಮೂರನೇ ಸುತ್ತಿನಲ್ಲೂ ಬೋಸ್ 3,554 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮೂರನೇ ಸುತ್ತಿನ ಅಂತ್ಯಕ್ಕೆ 2,32,379 ಮತಗಳ ಎಣಿಕೆ ಮುಗಿದಿದೆ. ಇನ್ನೂ 18 ಸುತ್ತು ಮತ ಎಣಿಕೆ ಬಾಕಿ ಇದೆ.

ಉತ್ತರ ಕನ್ನಡ ಕ್ಷೇತ್ರ: ಬಿಜೆಪಿ ಅಭ್ಯರ್ಥಿಗೆ 87,168 ಮತಗಳ ಮುನ್ನಡೆ

ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ); 1,70,985

ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್); 83,817

ಬಿಜೆಪಿ ಅಭ್ಯರ್ಥಿಗೆ 87,168 ಮತಗಳ ಮುನ್ನಡೆ

ಉಡುಪಿ –ಚಿಕ್ಕಮಗಳೂರು ಕ್ಷೇತ್ರ: ಕೋಟಗೆ 48,788 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 48788 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ 1,10,900 ಲಕ್ಷ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ 62,112 ಮತಗಳನ್ನು ಪಡೆದಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ:: ಯದುವೀರ್‌ಗೆ ಭಾರಿ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 1,69,461 ಮತಗಳನ್ನು ಪಡೆದು 37,716 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 1,31,745 ಮತಗಳನ್ನು ಪಡೆದಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ: ಕುಮಾರಸ್ವಾಮಿಗೆ 74,319 ಮತಗಳ ಮುನ್ನಡೆ

ಮಂಡ್ಯ: ಲೋಕಸಭಾ ಚುನಾವಣೆ 4ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 74,319 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 1,81,799 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 1,07,480 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರ: ಜಾಧವಗೆ 1,962 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 92,576ಮತಗಳು ಪಡೆದು 1,962 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 90,614 ಮತಗಳು ಪಡೆದಿದ್ದಾರೆ.

ದಕ್ಷಿಣ ಕನ್ನಡ: ಚೌಟ 13,240 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 13,240 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚೌಟ 98,336 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 85,096 ಮತ ಪಡೆದಿದ್ದಾರೆ. ನೋಟಾಕ್ಕೆ 3514 ಮತ ಚಲಾವಣೆ ಆಗಿದೆ.

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯ ನಾಗಾಲೋಟ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಿರಂತರವಾಗಿ ಮುನ್ನಡೆ ಪಡೆದುಕೊಂಡು ಸಾಗಿದ್ದಾರೆ.

ರಾಜಶೇಖರ 1,56,912 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 147,491 ಮತಗಳನ್ನು ಪಡೆದಿದ್ದಾರೆ. ಮುನ್ನಡೆಯ ಅಂತರ 9,421 ಇದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಭಾರೀ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 1,80,959 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 1,22,399 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 58,560 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಗೆ ಮುನ್ನಡೆ

ಬಿಜೆಪಿಯ ಪಿ.ಸಿ. ಗದ್ದಿಗೌಡರ 42,058

ಕಾಂಗ್ರೆಸ್‌ನ ಸಂಯುಕ್ತಾ ಪಾಟೀಲ 38, 217 ಮತ ಪಡೆದಿದ್ದಾರೆ.

ಬಿಜೆಪಿ ಮುನ್ನಡೆ 3,841

ಶಿವಮೊಗ್ಗ: ಬಿಜೆಪಿಯ ರಾಘವೇಂದ್ರಗೆ 26,182 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 26,182 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಿ.ವೈ.ರಾಘವೇಂದ್ರ 1,24,791 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 98,609 ಮತಗಳ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 4,717 ಮತಗಳ ಪಡೆದಿದ್ದಾರೆ.

ತುಮಕೂರು: ಸೋಮಣ್ಣಗೆ 28 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 28,317 ಮತಗಳ ಮುನ್ನಡೆ ಪಡೆದಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ‌ಗೆ 4,088 ಮತಗಳ ಮುನ್ನಡೆ

ಹಾವೇರಿ ಲೋಕಸಭಾ ಕ್ಷೇತ್ರ: ಸುತ್ತು- 3

ಬಸವರಾಜ ಬೊಮ್ಮಾಯಿ (ಬಿಜೆಪಿ): 92,596

ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್): 88,508

ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ 4,088 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಮುನ್ನಡೆ

ಇ ತುಕಾರಾಂ(ಕಾಂಗ್ರೆಸ್) - 2,02,447

ಬಿ. ಶ್ರೀರಾಮುಲು (ಬಿಜೆಪಿ) - 1,57,393

ಕಾಂಗ್ರೆಸ್‌ ಮುನ್ನಡೆ- 45,054

ಹಾಸನ ಲೋಕಸಭಾ ಕ್ಷೇತ್ರ: 10 ನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಶ್ರೇಯಸ್‌ಗೆ ಮುನ್ನಡೆ

ಹಾಸನ ಲೋಕಸಭಾ ಕ್ಷೇತ್ರದ 10ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್‌ 821 ಮತಗಳ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಶ್ರೇಯಸ್ ಪಟೇಲ್‌ 2,06,819 ಮತಗಳನ್ನು ಪಡೆದಿದ್ದು, ಪ್ರಜ್ವಲ್‌ ರೇವಣ್ಣ 2,05,998 ಮತ ಪಡೆದಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಿ.ಸಿ.ಮೋಹನ್‌ಗೆ 1,862 ಮತಗಳ ಮುನ್ನಡೆ

ಪಿ.ಸಿ.ಮೋಹನ್ (ಬಿಜೆಪಿ): 67,573

ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್): 65,711

ಮುನ್ನಡೆ- ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ಗೆ 1,862 ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಮುನ್ನಡೆ ಕಾಯ್ದುಕೊಂಡಿರುವ ಯದುವೀರ್‌

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅವರು 1,78,433 ಮತಗಳನ್ನು ಪಡೆದು 36,540 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 1,41,893 ಮತಗಳನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ: 20,708 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 20708 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚೌಟ 1,23,305 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,02,597 ಮತ ಪಡೆದಿದ್ದಾರೆ. ನೋಟಾಕ್ಕೆ 4134 ಮತ ಚಲಾವಣೆ ಆಗಿದೆ.

ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 30 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 30,579 ಮತಗಳ ಮುನ್ನಡೆ ಪಡೆದಿದ್ದಾರೆ. ಸೋಮಣ್ಣ 1,40,564 ಮತ ಪಡೆದಿದ್ದು, ಮುದ್ದಹನುಮೇಗೌಡ 1,09,985 ಮತ ಪಡೆದಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿಗೆ ಮುನ್ನಡೆ

ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ); 1,95,917

ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್); 95,816

ಬಿಜೆಪಿ ಅಭ್ಯರ್ಥಿಗೆ 1,00,101 ಮತಗಳ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರದ ಮೂರನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು 19,794 ಮತಗಳ ಮುನ್ನಡೆ ಗಳಿಸಿದ್ದಾರೆ.

ಸಾಗರ್‌ ಖಂಡ್ರೆ ಅವರು 99,877 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ 80,083 ಮತಗಳನ್ನು ಗಳಿಸಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರ: ರಾಧಾಕೃಷ್ಣಗೆ 1,301 ಮತಗಳ ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 1,00,682 ಮತಗಳನ್ನು ಪಡೆದು 1,301 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 99,381 ಮತಗಳು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಭಾರಿ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 2,03,411 ಮತಗಳನ್ನು ಪಡೆದಿದ್ದಾರೆ.‌

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 1,40,711 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 62,700 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸುಧಾಕರ್‌ಗೆ ಮುನ್ನಡೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ‌ಅಭ್ಯರ್ಥಿ ಡಾ.ಕೆ.ಸುಧಾಕರ್ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಐದನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು ಡಾ.ಕೆ.ಸುಧಾಕರ್ 25,396 ಮತಗಳ ಅಂತರದಿಂದ ಮುಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 1,07,444 ಮತ ಪಡೆದಿದ್ದರೆ ಡಾ.ಕೆ.ಸುಧಾಕರ್ 1,32,840 ಮತಪಡೆದಿದ್ದಾರೆ.

ಮೈಸೂರು- ಕೊಡಗು ಲೋಕಸಭಾ ‌ಕ್ಷೇತ್ರ: 2 ಲಕ್ಷ ಮತಗಳ ಸಮೀಪಕ್ಕೆ ಯದುವೀರ್

ಮೈಸೂರು: ಮೈಸೂರು- ಕೊಡಗು ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿ 48,318 ಮತಗಳಿಂದ ಮುನ್ನಡೆ ಗಳಿಸಿದೆ.

ಯದುವೀರ್ (ಬಿಜೆಪಿ)- 1,97,069

ಎಂ.ಲಕ್ಷ್ಮಣ (ಕಾಂಗ್ರೆಸ್)- 1,48,751

ಉಡುಪಿ– ಚಿಕ್ಕಮಗಳೂರು ಕ್ಷೇತ್ರ: ಕೋಟಗೆ 63,094 ಮತಗಳ ಮುನ್ನಡೆ

ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 63,094 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ 1,58,618 ಮತಗಳನ್ನು ಪಡೆದರೆ, ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ 95,524ಮತಗಳನ್ನು ಪಡೆದಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರ: ಮೂರನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

ರಾಯಚೂರು ಎಸ್‌.ಟಿ.ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಿಧಾನವಾಗಿ ಸಾಗಿದೆ. ಮೊದಲನೇ ಸುತ್ತಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 3,844 ಹಾಗೂ ಬಿಜೆಪಿಯ ರಾಜಾ ಅಮರೇಶ್ವರ ನಾಯಕ 3429 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ 415 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ಎರಡನೇ ಸುತ್ತಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 17,854 ಹಾಗೂ ಬಿಜೆಪಿಯ ರಾಜಾ ಅಮರೇಶ್ವರ ನಾಯಕ 19,008 ಮತಗಳನ್ನು ಪಡೆದಿದ್ದಾರೆ. ಬಿಜೆಪಿ 1154 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ಮೂರನೇ ಸುತ್ತಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 22,669 ಹಾಗೂ ಬಿಜೆಪಿಯ ರಾಜಾ ಅಮರೇಶ್ವರ ನಾಯಕ 22,794 ಮತಗಳನ್ನು ಪಡೆದಿದ್ದಾರೆ. ಬಿಜೆಪಿ 1,125 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ 3,628 ಮತಗಳ ಮುನ್ನಡೆ

ರಾಜೂಗೌಡ( ಬಿಜೆಪಿ)- 17,897

ರಾಜ ವೇಣುಗೋಪಾಲ ನಾಯಕ ( ಕಾಂಗ್ರೆಸ್) - 21,525

ಅಶೋಕ ಲಕ್ಷ್ಮಣ- 273

ವೇಣುಗೋಪಾಲ ನಾಯಕ-166

ವೆಂಕಟಪ್ಪ ನಾಯಕ- 78

ಶಶಿಕುಮಾರ್-67

ನೋಟಾ- 169

ಒಟ್ಟು ಮತದಾನ -40,084

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ ಮುನ್ನಡೆ

ವಿಜಯಪುರ ಎಸ್.ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮುನ್ನಡೆ ಸಾಧಿಸಿದ್ದಾರೆ.

ರಮೇಶ ಜಿಗಜಿಣಗಿ ಅವರಿಗೆ 55,771 ಮತಗಳು ಲಭಿಸಿವೆ. ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರಗೆ 44,451 ಮತಗಳು ಲಭಿಸಿವೆ. ಜಿಗಜಿಣಗಿ ಅವರು 11,320 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚಾಮರಾಜನಗರ: ಸುನಿಲ್ ಬೋಸ್‌ಗೆ 30,094 ಮತಗಳ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ಸುನಿಲ್ ಬೋಸ್ ಅವರು 30,094 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ಬೋಸ್ 42507 ಮತಗಳನ್ನು ಪಡೆದಿದ್ದು, ಎನ್‌ಡಿಎಯ ಬಾಲರಾಜ್ ಅವರು 31,569 ಮತ ಗಳಿಸಿದ್ದಾರೆ. ನಾಲ್ಕನೇ ಸುತ್ತಿನಲ್ಲಿ ಬೋಸ್ 10,938 ಮತಗಳ ಮುನ್ನಡೆ ಸಾಧಿಸಿದ್ದಾರೆ. ಒಟ್ಟಾರೆ 30,938 ಮತಗಳಿಂದ ಅವರು ಮುನ್ನಡೆಯಲ್ಲಿದ್ದಾರೆ.

ಶಿವಮೊಗ್ಗ: ಬಿಜೆಪಿಯ ಬಿ.ವೈ.ರಾಘವೇಂದ್ರಗೆ 49,495 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 49,495 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಿ.ವೈ.ರಾಘವೇಂದ್ರ 1,73,745 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 1,24,250 ಮತಗಳ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 6,172 ಮತಗಳ ಪಡೆದಿದ್ದಾರೆ.

 ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: 2 ಲಕ್ಷ ಮತಗಳ ಗಡಿ ದಾಟಿದ ಯದುವೀರ್

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಒಟ್ಟು 2 ಲಕ್ಷ ಮತಗಳ ಗಡಿ ದಾಟಿದ್ದಾರೆ. ಅವರು 2,14,242

ಮತಗಳನ್ನು ಪಡೆದು 48,534 ಮತಗಳ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 1,65,708 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು 36,772 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಡೆದ ಮತಗಳ ವಿವರ :

ಶೋಭಾ ಕರಂದ್ಲಾಜೆ (ಬಿಜೆಪಿ): 83,690

ಪ್ರೋ.ರಾಜೀವ್ ಗೌಡ (ಕಾಂಗ್ರೆಸ್): 46,968

ತುಮಕೂರು ಲೋಕಸಭಾ ಕ್ಷೇತ್ರ: 7ನೇ ಸುತ್ತಿನಲ್ಲೂ ಸೋಮಣ್ಣ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸತತವಾಗಿ 7ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

7ನೇ ಸುತ್ತಿನ ಎಣಿಕೆಯ ನಂತರ 32,328 ಮತಗಳ ಮುನ್ನಡೆ ಪಡೆದಿದ್ದಾರೆ. ಸೋಮಣ್ಣ 1,51,927 ಮತ ಪಡೆದಿದ್ದು, ಮುದ್ದಹನುಮೇಗೌಡ 1,19,599 ಮತ ಪಡೆದಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ‌ ಮುನ್ನಡೆ

ಪಿ.ಸಿ.ಮೋಹನ್ (ಬಿಜೆಪಿ): 90,699

ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್): 92,807

ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‌‌ಗೆ 2,108 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 70,221 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 2,30,929 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 1,60,708 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 70,221 ಮತಗಳ ಮುನ್ನಡೆ ಸಾಧಿಸಿದ್ದಾರೆ.

2,304 ನೋಟಾ ಮತಗಳು ಚಲಾವಣೆಯಾಗಿವೆ. ಕಣದಲ್ಲಿರುವ 15 ಅಭ್ಯರ್ಥಿಗಳ‌ ಪೈಕಿ, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದರೆ ನೋಟಾ ಮತಗಳು ಮೂರನೇ ಸ್ಥಾನ ಪಡೆದಿವೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಕೋಟಗೆ 82,657 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 82657 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ 2,10,116 ಮತ ಪಡೆದರೆ, ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 1,27,459ಮತ ಪಡೆದಿದ್ದಾರೆ.

ಕೋಟ 2 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಪ್ರತಿಸುತ್ತಿನಲ್ಲೂ ಮುನ್ನಡೆಯನ್ನು ಹಿಗ್ಗಿಸಿಕೊಂಡು ಸಾಗುತ್ತಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ: ಕುಮಾರಸ್ವಾಮಿಗೆ ಭಾರಿ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 5ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 91,887 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 2,29,396 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 1,37,509 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಬಳ್ಳಾರಿ: ಮತ ಎಣಿಕೆ ಕೇಂದ್ರದ ಬಳಿ ಸುಳಿಯದ ಕಾರ್ಯಕರ್ತರು

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ 45,054 ಮತಗಳ ಅಂತರ ಗಳಿಸಿದ್ದು, ಗೆಲುವಿನತ್ತ ದಾಪುಗಾಲು ಇಡುತ್ತಿದ್ದಂತೆಯೇ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹ ಗರಿಗೆದರಿದೆ. ಆದರೆ ಮತ ಎಣಿಕೆ ಕೇಂದ್ರದತ್ತ ಇನ್ನೂ ಅಷ್ಟಾಗಿ ಜನ ಬಂದಿಲ್ಲ.

ಹತ್ತಾರು ಕಾರ್ಯಕರ್ತರು ಇಲ್ಲಿದ್ದು, ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆಯೇ ಅಧಿಕ ಇದೆ. ಬಿಜೆಪಿ ಕಾರ್ಯಕರ್ತರ ಸುಳಿವು ಇಲ್ಲವಾಗಿದೆ.

ಭಾರಿ ಸಿದ್ಧತೆ ಮಾಡಿಕೊಂಡಿದ್ದ ಶ್ರೀರಾಮುಲು: ಮೋದಿ ಅಲೆಯಲ್ಲಿ ತಮ್ಮ ಗೆಲುವು ನಿಶ್ಚಿತ ಎಂದು ಭಾವಿಸಿದ್ದ ಬಿ.ಶ್ರೀರಾಮುಲು ಅವರು ತಮ್ಮ ಮನೆಯ ಬಳಿ ಡಿ.ಜೆ., ಭರ್ಜರಿ, ತಿಂಡಿಗೆ ಸಿದ್ಧತೆ ಮಾಡಿಕೊಂಡಿದ್ದರು. ಇದೀಗ ಅಲ್ಲಿನ ಉತ್ಸಾಸ ನಿಧಾನಕ್ಕೆ ಮರೆಯಾಗುತ್ತ ಸಾಗುತ್ತಿದೆ.

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿಗೆ ಮುಂದುವರಿದ ಮುನ್ನಡೆ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಿರಂತರವಾಗಿ ಮುನ್ನಡೆ ಪಡೆದುಕೊಂಡು ಸಾಗಿದ್ದಾರೆ.

ರಾಜಶೇಖರ 2,03,543 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 1.91,674 ಮತಗಳನ್ನು ಪಡೆದಿದ್ದಾರೆ. ಮುನ್ನಡೆಯ ಅಂತರ 8,777 ಇದೆ.

ಒಟ್ಟು 18,66392 ಮತದಾರರು ಇದ್ದು, 13,24,858 ಮತಗಳು ಚಲಾವಣೆಯಾಗಿವೆ. ಇದುವರೆಗೆ 3,98,309 ಮತಗಳ ಎಣಿಕೆಯಾಗಿವೆ.

ಚಿಕ್ಕೋಡಿ ಲೋಕಸಭೆ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಗೆ 43,842 ಮತಗಳ ಮುನ್ನಡೆ

ಬಿಜೆಪಿ: ಅಣ್ಣಾಸಾಹೇಬ ಜೊಲ್ಲೆ (1,96,913)

ಕಾಂಗ್ರೆಸ್: ಪ್ರಿಯಾಂಕಾ ಜಾರಕಿಹೊಳಿ (2,40,755)

ಕಾಂಗ್ರೆಸ್ ಅಭ್ಯರ್ಥಿಗೆ 43,842 ಮತಗಳ ಮುನ್ನಡೆ

ಕಲಬುರಗಿ : ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ‌ಮುನ್ನಡೆ

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 1,05,010 ಮತಗಳನ್ನು ಪಡೆದು 1703 ಮತಗಳ ಮುನ್ನಡೆ ಸಾಧಿಸಿದ್ದಾರೆ.ಬಿಜೆಪಿಯ ಡಾ.ಉಮೇಶ್ ಜಾಧವ್ 1,03,307 ಮತಗಳನ್ನು ಪಡೆದಿದ್ದಾರೆ.

ಹಾಸನ: ಮತ್ತೆ ಮುನ್ನಡೆ ಕಾಯ್ದುಕೊಂಡ ಪ್ರಜ್ವಲ್ ರೇವಣ್ಣ

ಹಾಸನ ಲೋಕಸಭಾ ಕ್ಷೇತ್ರದಲ್ಲಿ 1,710 ಮತಗಳಿಂದ ಪ್ರಜ್ವಲ್ ಮುನ್ನಡೆ

ಜೆಡಿಎಸ್ 2,55,311

ಕಾಂಗ್ರೆಸ್ 2,53,601

 ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: 1 ಲಕ್ಷ ಮತ ಮುನ್ನಡೆ ಸಾಧಿಸಿದ ಕಾಗೇರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 1 ಲಕ್ಷ ಮತಗಳ ಮುನ್ನಡೆ ಸಾಧಿಸಿದರು‌. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ಅವರಿಗಿಂತ 1,10,068 ಮತಗಳ ಮುನ್ನಡೆ ಸಾಧಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ 2,05,933 ಮತ ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ 1,04,865 ಮತ ಗಳಿಸಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿಗೆ ಮುನ್ನಡೆ

ಬಿಜೆಪಿ(ರಮೇಶ ಜಿಗಜಿಣಗಿ): 69,865

ಕಾಂಗ್ರೆಸ್(ರಾಜು ಆಲಗೂರ): 55,998

ಬಿಜೆಪಿ ಮುನ್ನಡೆ:13,867

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ 5,743 ಮತಗಳ ಮುನ್ನಡೆ

ರಾಜೂಗೌಡ( ಬಿಜೆಪಿ)- 22,291

ರಾಜ ವೇಣುಗೋಪಾಲ ನಾಯಕ ( ಕಾಂಗ್ರೆಸ್) - 28,034

ಅಶೋಕ ಲಕ್ಷ್ಮಣ- 363

ವೇಣುಗೋಪಾಲ ನಾಯಕ-96

ವೆಂಕಟಪ್ಪ ನಾಯಕ- 106

ಶಶಿಕುಮಾರ್-89

ನೋಟಾ- 221

ಒಟ್ಟು ಮತದಾನ -51,200

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಭಾರಿ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 2,18,031 ಮತಗಳನ್ನು ಪಡೆದು 47,676 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 1,70,355 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯಗೆ ಮುನ್ನಡೆ

ತೇಜಸ್ವಿ ಸೂರ್ಯ (ಬಿಜೆಪಿ)- 1,27,083

ಸೌಮ್ಯಾ ರೆಡ್ಡಿ (ಕಾಂಗ್ರೆಸ್)- 55,367

ಬಿಜೆಪಿ ಮುನ್ನಡೆ-71,716

ದಾವಣಗೆರೆ: 3ನೇ ಸುತ್ತು ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಲೋಕಸಭಾ ಕ್ಷೇತ್ರದಲ್ಲಿ 3 ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 4307 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಡಾ.ಪ್ರಭಾ ಮಲ್ಲಿಕಾರ್ಜುನ್ 1,11,947 ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ 1,07,569 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ: ಬಿಜೆಪಿಯ ಬಿ.ವೈ.ರಾಘವೇಂದ್ರಗೆ 52,516 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 52,516 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಿ.ವೈ.ರಾಘವೇಂದ್ರ 1,92,450 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 1,39,843 ಮತಗಳ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 6796 ಮತಗಳ ಪಡೆದಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ: 5ನೇ ಸುತ್ತಿನಲ್ಲೂ ಶೆಟ್ಟರ್‌ ಭಾರಿ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 4,65,518 ಮತಗಳ ಎಣಿಕೆ ಆಗಿದ್ದು, ಬಿಜೆಪಿಯ ಜಗದೀಶ ಶೆಟ್ಟರ್‌ 71,896 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 2,62,275 ಮತಗಳನ್ನು ಶೆಟ್ಟರ್‌ ಬಾಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ 1,90,379 ಮತ ಗಳಿಸಿದ್ದಾರೆ.

ಮೊದಲ ಸುತ್ತಿನಿಂದಲೂ ಜಗದೀಶ ಶೆಟ್ಟರ್‌ ಮುನ್ನಡೆ ಸಾಧಿಸುತ್ತಲೇ ಬಂದಿದ್ದಾರೆ. ಮೊದಲ ಸುತ್ತಿನಲ್ಲಿ 42248, ಎರಡನೇ ಸುತ್ತಿನಲ್ಲಿ 8955, ಮೂರನೇ ಸುತ್ತಿನಲ್ಲಿ 37,568 ಮತಗಳ ಮುನ್ನಡೆ, ನಾಲ್ಕನೇ ಸುತ್ತಿನಲ್ಲಿ 56410 ಮತ ಹಾಗೂ 5ನೇ ಸುತ್ತಿನಲ್ಲಿ 71896 ಮತಗಳ ಮುನ್ನಡೆ ಶೆಟ್ಟರ್‌ ಅವರಿಗೆ ಸಿಕ್ಕಿದೆ.

ಅಂದರೆ ಪ್ರತಿಯೊಂದು ಸುತ್ತಿನಲ್ಲೂ ಶೆಟ್ಟರ್ ಅವರು ಮುನ್ನಡೆ ಪಡೆದ ಮತಗಳ ಮೊತ್ತ ಕೂಡ ಏರುತ್ತಲೇ ಸಾಗಿದ್ದು ವಿಶೇಷ.

 ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 42 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 42,500ಮತಗಳ ಮುನ್ನಡೆ ಪಡೆದಿದ್ದಾರೆ. ಸೋಮಣ್ಣ 1,85,532 ಮತ ಪಡೆದಿದ್ದು, ಮುದ್ದಹನುಮೇಗೌಡ 1,43,032 ಮತ ಪಡೆದಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ ಮುನ್ನಡೆ

ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು 144370 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ 118531 ಮತಗಳನ್ನು ಪಡೆದಿದ್ದಾರೆ. ಜೋಶಿ ಅವರು 25831 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಭಾರಿ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 2,36,037 ಮತಗಳನ್ನು ಪಡೆದು 56,374 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 1,79,663 ಮತಗಳನ್ನು ಪಡೆದಿದ್ದಾರೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ನಿರಂತರ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 6ನೇ ಸುತ್ತಿನ ಹೊತ್ತಿಗೆ ಕಾಂಗ್ರೆಸ್‌ ಭಾರಿ ಮುನ್ನಡೆ ಸಾಧಿಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್‌ನ ಇ. ತುಕಾರಾಂ 2,42,962 ಮತ ಪಡೆದಿದ್ದರೆ, ಬಿಜೆಪಿಯ ಅಭ್ಯರ್ಥಿ ಬಿ. ಶ್ರೀರಾಮುಲು 1,89,015 ಮತ ಪಡೆದು ಹಿಂದಿದ್ದಾರೆ. ಇಬ್ಬರ ನಡುವೆ 53,947 ಮತಗಳ ಅಂತರ ಏರ್ಪಟ್ಟಿದೆ. 

ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿಕೊಂಡಿರುವ ಕಾಂಗ್ರೆಸ್‌ ಪ್ರತಿ ಸುತ್ತಿನಲ್ಲೂ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಬಿಜೆಪಿ ಕಾರ್ಯಕರ್ತರ ಮನದಲ್ಲಿ ಆತಂಕ ಮೂಡಿಸಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳಗೆ ಮುನ್ನಡೆ

7ನೇ ಸುತ್ತಿನ ಮತ ಎಣಿಕೆ ಮುಕ್ತಾಯ: ಬಿಜೆಪಿಗೆ 26,551 ಮತಗಳ ಮುನ್ನಡೆ

ಬಿಜೆಪಿಯ ಗೋವಿಂದ ಕಾರಜೋಳ – 2,47,194

ಕಾಂಗ್ರೆಸ್‌ನ ಬಿ.ಎನ್‌.ಚಂದ್ರಪ್ಪ – 2,20,643

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಮುನ್ನಡೆ

ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಅವರು 3,818 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಕಾಂಗ್ರೆಸ್ - ಮನ್ಸೂರ್ ಅಲಿ ಖಾನ್-1,05,617

ಬಿಜೆಪಿ- ಪಿ.ಸಿ. ಮೋಹನ್-1,01,799

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ ಮುನ್ನಡೆ

ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 49618 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಡೆದ ಮತಗಳ ವಿವರ:

ಶೋಭಾ ಕರಂದ್ಲಾಜೆ - 1,24,434

ಪ್ರೋ.ರಾಜೀವ್ ಗೌಡ - 74,816

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಬಿಜೆಪಿ ಮುನ್ನಡೆ

ತೇಜಸ್ವಿ ಸೂರ್ಯ (ಬಿಜೆಪಿ)- 1,72,409

ಸೌಮ್ಯಾ ರೆಡ್ಡಿ (ಕಾಂಗ್ರೆಸ್)- 83,939

ಬಿಜೆಪಿ ಮುನ್ನಡೆ- 88,470

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ ಮುನ್ನಡೆ

ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಅವರು 20,859 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್-1,35,744 ಬಿಜೆಪಿಯ ಪಿ.ಸಿ. ಮೋಹನ್-1,14,885

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್‌ಗೆ ಭಾರಿ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 3,28,252 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 2,36,666 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು 91,586 ಮತಗಳ ಮುನ್ನಡೆ ಸಾಧಿಸಿದ್ದಾರೆ.

3,311 ನೋಟಾ ಮತಗಳು ಚಲಾವಣೆಯಾಗಿವೆ. ಕಣದಲ್ಲಿರುವ 15 ಅಭ್ಯರ್ಥಿಗಳ‌ ಪೈಕಿ, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದರೆ ನೋಟಾ ಮತಗಳು ಮೂರನೇ ಸ್ಥಾನ ಪಡೆದಿವೆ.

 ಹಾಸನ: 4,028 ಮತಗಳಿಂದ ಪ್ರಜ್ವಲ್ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಭಾರಿ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 2,89,514 ಮತಗಳನ್ನು ಪಡೆದು 61,985 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,27,529 ಮತಗಳನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ: ಚೌಟಗೆ  34,883 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 34,883 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚೌಟ 1,93,707 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,58,824 ಮತ ಪಡೆದಿದ್ದಾರೆ. ನೋಟಾಕ್ಕೆ 6,387 ಮತ ಚಲಾವಣೆ ಆಗಿದೆ.

ಚಾಮರಾಜನಗರ: ಸುನಿಲ್ ಬೋಸ್‌ಗೆ 36,710 ಮತಗಳ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ 5ನೇ ಸುತ್ತಿನ ಕೊನೆಗೆ ಕಾಂಗ್ರೆಸ್ ನ ಸುನಿಲ್ ಬೋಸ್ ಅವರು 36,710 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

5ನೇ ಸುತ್ತಿನಲ್ಲಿ ಬೋಸ್ 38,729 ಮತಗಳನ್ನು ಪಡೆದಿದ್ದು, ಎನ್ ಡಿಎಯ ಬಾಲರಾಜ್ ಅವರು 32,113 ಮತ ಗಳಿಸಿದ್ದಾರೆ. ಬೋಸ್ 6,616 ಮತಗಳ ಮುನ್ನಡೆ ಸಾಧಿಸಿದ್ದಾರೆ. 5ನೇ ಸುತ್ತಿನ ಅಂತ್ಯಕ್ಕೆ ಬೋಸ್ 2,02,468 ಮತ್ತು ಬಾಲರಾಜ್ 1,65,758 ಮತಗಳನ್ನು ಪಡೆದಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ: 3 ಲಕ್ಷ ಮತ ದಾಟಿದ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ 3,06,607 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ ಅಸೂಟಿ 2,46,121 ಮತಗಳನ್ನು ಪಡೆದಿದ್ದಾರೆ. 60,566 ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ.

ಸುರಪುರ ವಿಧಾನಸಭೆ ಉಪ ಚುನಾವಣೆ: ಕಾಂಗ್ರೆಸ್‌ಗೆ 6,833 ಮತಗಳ ಮುನ್ನಡೆ

ರಾಜುಗೌಡ( ಬಿಜೆಪಿ)- 26,717

ರಾಜಾ ವೇಣುಗೋಪಾಲ ನಾಯಕ ( ಕಾಂಗ್ರೆಸ್) - 33,550

ಅಶೋಕ ಲಕ್ಷ್ಮಣ- 444

ವೇಣುಗೋಪಾಲ ನಾಯಕ-119

ವೆಂಕಟಪ್ಪ ನಾಯಕ- 130

ಶಶಿಕುಮಾರ್-111

ನೋಟಾ- 267

ಒಟ್ಟು ಮತದಾನ -61,338

ಕಲಬುರಗಿ ಲೋಕಸಭಾ ಕ್ಷೇತ್ರ: ಜಾಧವಗೆ 7,150 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು 1,68,592 ಮತಗಳು ಪಡೆದು 7,150 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 1,61,442 ಮತಗಳು ಪಡೆದಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಪ್ರಿಯಾಂಕಾಗೆ 56,235 ಮತಗಳ ಮುನ್ನಡೆ

ಬಿಜೆಪಿ: ಅಣ್ಣಾಸಾಹೇಬ ಜೊಲ್ಲೆ(2,71,472)

ಕಾಂಗ್ರೆಸ್: ಪ್ರಿಯಾಂಕಾ ಜಾರಕಿಹೊಳಿ(3,27,707)

ಕಾಂಗ್ರೆಸ್ ಅಭ್ಯರ್ಥಿಗೆ 56,235 ಮತಗಳ ಮುನ್ನಡೆ

ಮಂಡ್ಯ: ಎಚ್.ಡಿ.ಕುಮಾರಸ್ವಾಮಿಗೆ 1,27,632 ಮತಗಳ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 7ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 1,27,632 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 3,24,033 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 1,96,401 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ದಕ್ಷಿಣ ಕನ್ನಡ: ಚೌಟಗೆ 48,459 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 48459 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚೌಟ 2,20,294 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,71,835 ಮತ ಪಡೆದಿದ್ದಾರೆ. ನೋಟಾಕ್ಕೆ 6,945 ಮತ ಚಲಾವಣೆ ಆಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಮುನ್ನಡೆ

ದಾವಣಗೆರೆ: ಲೋಕಸಭಾ ಕ್ಷೇತ್ರದಲ್ಲಿ 4ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 3,980 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಡಾ.ಪ್ರಭಾ ಮಲ್ಲಿಕಾರ್ಜುನ್ 1,48,446 ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ 1,44,466 ಮತಗಳನ್ನು ಪಡೆದಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: 3 ಲಕ್ಷ ಮತ ದಾಟಿದ ಯದುವೀರ್

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಒಟ್ಟು 3 ಲಕ್ಷ ಮತಗಳನ್ನು ಗಳಿಸಿದ್ದಾರೆ. ಅವರು 3,04,365ಮತಗಳನ್ನು ಪಡೆದು 62,966 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,41,399 ಮತಗಳನ್ನು ಪಡೆದಿದ್ದಾರೆ. ಯದುವೀರ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಮುನ್ನಡೆ

ಬಿಜೆಪಿ (ರಮೇಶ ಜಿಗಜಿಣಗಿ): 1,23,466

ಕಾಂಗ್ರೆಸ್ (ರಾಜು ಆಲಗೂರ): 1,09,383

ಬಿಜೆಪಿ ಮುನ್ನಡೆ: 14,083

ಬೆಳಗಾವಿ ಲೋಕಸಭಾ ಕ್ಷೇತ್ರ: 84,168 ಮತಗಳಿಂದ ಶೆಟ್ಟರ್‌ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 6,00,838 ಮತಗಳ ಎಣಿಕೆ ಆಗಿದ್ದು, ಬಿಜೆಪಿಯ ಜಗದೀಶ ಶೆಟ್ಟರ್‌ 84,168 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 3,34,178 ಮತಗಳನ್ನು ಶೆಟ್ಟರ್‌ ಬಾಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ 2,50,010 ಮತ ಗಳಿಸಿದ್ದಾರೆ.

ಶಿವಮೊಗ್ಗ: ರಾಘವೇಂದ್ರಗೆ 83,232 ಮತಗಳ ಭಾರಿ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 83,232 ಮತಗಳ ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಿ.ವೈ.ರಾಘವೇಂದ್ರ 2,79,588 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 1,96,336 ಮತಗಳ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 11,112 ಮತಗಳ ಪಡೆದಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ಗೆ ಮುನ್ನಡೆ

ಎಂ.ಮಲ್ಲೇಶ್‌ ಬಾಬು (ಜೆಡಿಎಸ್‌); 4,10,458

ಕೆ.ವಿ.ಗೌತಮ್‌ (ಕಾಂಗ್ರೆಸ್‌); 3,82,234

ಮುನ್ನಡೆ: 28,224 (ಜೆಡಿಎಸ್‌)

ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 66 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 66,123 ಮತಗಳ ಮುನ್ನಡೆ ಪಡೆದಿದ್ದಾರೆ. ಮತ ಎಣಿಕೆ ಪ್ರಾರಂಭದಿಂದಲೂ ಸೋಮಣ್ಣ ಮುನ್ನಡೆ ಸಾಧಿಸಿದ್ದಾರೆ. ಸೋಮಣ್ಣ 2,55,656 ಮತ ಪಡೆದಿದ್ದು, ಮುದ್ದಹನುಮೇಗೌಡ 1,89,533 ಮತ ಪಡೆದಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ‌ಗೆ 12,863 ಮತಗಳ ಮುನ್ನಡೆ

ಬಸವರಾಜ ಬೊಮ್ಮಾಯಿ (ಬಿಜೆಪಿ): 1,97,281

ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್): 1,84,418

ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ 12,863 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಮುನ್ನಡೆ

ಕೊಪ್ಪಳ ಕ್ಷೇತ್ರ: ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿಗೆ 76 ಮತಗಳ ಮುನ್ನಡೆ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮುನ್ನಡೆ ಹಂತಹಂತವಾಗಿ ಕುಸಿತದ ಹಾದಿಯಲ್ಲಿ ಸಾಗಿದ್ದು, ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 76 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.

ರಾಜಶೇಖರ 2,76,842 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ 2,76918 ಮತಗಳನ್ನು ಪಡೆದಿದ್ದಾರೆ.

ಒಟ್ಟು 18,66,392 ಮತದಾರರು ಇದ್ದು, 13,24,858 ಮತಗಳು ಚಲಾವಣೆಯಾಗಿವೆ. ಇದರಲ್ಲಿ 5,53,760 ಮತಗಳ ಎಣಿಕೆಯಾಗಿದೆ.

ಹಾಸನ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಮುನ್ನಡೆ

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ - 3,46,543

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ - 3,52,292

5,749 ಮತಗಳಿಂದ ಕಾಂಗ್ರೆಸ್ ಮುನ್ನಡೆ

4,735 ನೋಟಾ ಮತಗಳು

ಸುರಪುರ ಉಪಚುನಾವಣೆ: ಐದು ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ

ಯಾದಗಿರಿ ಜಿಲ್ಲೆಯ ಸುರಪುರ ಉಪಚುನಾವಣೆ ಫಲಿತಾಂಶದಲ್ಲಿ ಮೊದಲ ಸುತ್ತಿನಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಮುನ್ನಡೆ ಸಾಧಿಸಿದ್ದು, ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆರು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನ್ನುಗ್ಗುತ್ತಿದ್ದಾರೆ.

ದಕ್ಷಿಣ ಕನ್ನಡ: ಚೌಟಗೆ 50,453 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 50,453 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚೌಟ 2,42,383 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,91,930 ಮತ ಪಡೆದಿದ್ದಾರೆ. ನೋಟಾಕ್ಕೆ 7780 ಮತ ಚಲಾವಣೆ ಆಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಕುಸಿದ ಮಂಜುನಾಥ್ ಲೀಡ್

ತೀವ್ರ ಕುತೂಹಲ‌ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಅವರು 3,34,439 ಮತಗಳನ್ನು ಪಡೆದಿದ್ದಾರೆ. ಒಂದು ಲಕ್ಷ ಮತಗಳ ಸನಿಹವಿದ್ದ ಅವರ ಲೀಡ್ ಮತಗಳ ಅಂತರ 84,515 ಮತಗಳಿಗೆ ಇಳಿಕೆಯಾಗಿದೆ.

ಚಲಾವಣೆಯಾಗಿರುವ 19.14 ಲಕ್ಷ ಮತಗಳ ಪೈಕಿ ಇದುವರೆಗೆ ಸುಮಾರು 6 ಲಕ್ಷ ಮತಗಳ ಎಣಿಕೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರು ಹಿನ್ನಡೆ ಅನುಭವಿಸಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಮುನ್ನಡೆ

ರಾಯಚೂರು ಎಸ್‌.ಟಿ.ಮೀಸಲು ಲೋಕಸಭಾ ಕ್ಷೇತ್ರದ ಎಣಿಕೆಯಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 99,437 ಹಾಗೂ ಬಿಜೆಪಿಯ ರಾಜಾ ಅಮರೇಶ್ವರ ನಾಯಕ 91,730 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 7,707 ಮತಗಳ ಅಂತರದಿಂದ ಮುಂದೆ ಇದ್ದಾರೆ. 1,672 ಮಂದಿ ನೋಟಾ ಚಲಾಯಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 72 ಸಾವಿರ ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 72,573 ಮತಗಳ ಮುನ್ನಡೆ ಪಡೆದಿದ್ದಾರೆ. ಮತ ಎಣಿಕೆ ಪ್ರಾರಂಭದಿಂದಲೂ ಸೋಮಣ್ಣ ಮುನ್ನಡೆ ಸಾಧಿಸಿದ್ದಾರೆ. ಸೋಮಣ್ಣ 2,79,392 ಮತ ಪಡೆದಿದ್ದು, ಮುದ್ದಹನುಮೇಗೌಡ 2,06,819 ಮತ ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಬಿಜೆಪಿ ಮುನ್ನಡೆ

ಒಟ್ಟು ಮತದಾನ - 12,45,168

ತೇಜಸ್ವಿ ಸೂರ್ಯ (ಬಿಜೆಪಿ)- 2,22,384

ಸೌಮ್ಯಾ ರೆಡ್ಡಿ (ಕಾಂಗ್ರೆಸ್)- 1,11,106

ಅರುಣ್ ಪ್ರಸಾದ್ (ಬಿಎಸ್ಪಿ)- 677

ವಾಟಾಳ್ ನಾಗರಾಜ್ (ಕನ್ನಡ ಚಳವಳಿ ಪಕ್ಷ)- 602

ಬಿಜೆಪಿ ಮುನ್ನಡೆ- 111278

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ 68 ಸಾವಿರ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 3,39,355 ಮತಗಳನ್ನು ಪಡೆದು 68,880 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,70,475 ಮತಗಳನ್ನು ಪಡೆದಿದ್ದಾರೆ. ಯದುವೀರ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ 51,970 ಮತಗಳಿಂದ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು 51,970 ಮತಗಳ ಮುನ್ನಡೆ ಗಳಿಸಿದ್ದಾರೆ.

ಸಾಗರ್‌ ಖಂಡ್ರೆ ಅವರು 2,30,633 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ 1,78,663 ಮತಗಳನ್ನು ಗಳಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮುನ್ನಡೆ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು 342354 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ 277232 ಮತಗಳನ್ನು ಪಡೆದಿದ್ದಾರೆ.

ಜೋಶಿ ಅವರು 65122 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಕೊಪ್ಪಳ ಕ್ಷೇತ್ರ: ಮತ್ತೆ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ‌ ಹಿನ್ನಡೆಯ ಬಳಿಕ‌ ಮತ್ತೆ ಮುನ್ನಡೆ ಪಡೆದುಕೊಂಡಿದ್ದಾರೆ.

ರಾಜಶೇಖರ 3,02,787 ಮತಗಳನ್ನು ಪಡೆದು 4,446 ಮತಗಳಲ್ಲಿ ಮುನ್ನಡೆ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 2,98,341 ಮತಗಳನ್ನು ಪಡೆದಿದ್ದಾರೆ.

ಚಾಮರಾಜನಗರ: 40,811 ಮತಗಳಿಗೆ ಹಿಗ್ಗಿದ ಬೋಸ್‌ಗೆ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ 6ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ಸುನಿಲ್ ಬೋಸ್ ಅವರ ಮುನ್ನಡೆಯ ಅಂತರ 40,811 ಹಿಗ್ಗಿದೆ.

6ನೇ ಸುತ್ತಿನಲ್ಲಿ ಬೋಸ್ 38,734 ಮತಗಳನ್ನು ಪಡೆದಿದ್ದು, ಎನ್‌ಡಿಎಯ ಬಾಲರಾಜ್ ಅವರು 34,633 ಮತ ಗಳಿಸಿದ್ದಾರೆ. ಬೋಸ್ 4,101 ಮತಗಳ ಮುನ್ನಡೆ ಸಾಧಿಸಿದ್ದಾರೆ. 6ನೇ ಸುತ್ತಿನ ಅಂತ್ಯಕ್ಕೆ ಬೋಸ್ 2,41,202 ಮತ್ತು ಬಾಲರಾಜ್ 2,00,391 ಮತಗಳನ್ನು ಪಡೆದಿದ್ದಾರೆ.

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ 9,142 ಮತಗಳ ಮುನ್ನಡೆ

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ 1,45,039 ಮತಗಳ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 8ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 1,45,039 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 3,72,848 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 2,27,809 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರ: ಯದುವೀರ್‌ಗೆ ಭಾರಿ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 3,50,974 ಮತಗಳನ್ನು ಪಡೆದು 74,150 ಮತಗಳಿಂದ ‌ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,76,824 ಮತಗಳನ್ನು ಪಡೆದಿದ್ದಾರೆ. ಯದುವೀರ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಶಿವಮೊಗ್ಗ: ಬಿ.ವೈ.ರಾಘವೇಂದ್ರಗೆ 97,294 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ ಕುಮಾರ್ ಅವರಿಗಿಂತ 97,294 ಮತಗಳ ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಿ.ವೈ.ರಾಘವೇಂದ್ರ 3,27,755 ಮತಗಳು ಹಾಗೂ ಗೀತಾ ಶಿವರಾಜಕುಮಾರ್ 2,30,451 ಮತಗಳ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 12,863 ಮತಗಳ ಪಡೆದಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟಗೆ 1,23,650 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 1,23,650 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ 3,26,330 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮತ 2,02,680 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ 5,108 ನೋಟ ಮತ ಚಲಾವಣೆಯಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ: 36,118 ಮತಗಳಿಂದ ಬಿಜೆಪಿ ಮುನ್ನಡೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾಗೆ 60,158 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಡಾ. ಮಂಜುನಾಥ್‌ಗೆ 98,666 ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 66,301 ಮತಗಳ ಮುನ್ನಡೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ 58,781 ಮತಗಳ ಮುನ್ನಡೆ

ದಾವಣಗೆರೆ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನಗೆ 15,693 ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ಮತ್ತೆ‌‌ ಮುನ್ನಡೆ

ಹಾವೇರಿ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ಗೆ 19,458 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಡಾ. ಮಂಜುನಾಥ್‌ಗೆ 1,15,945 ಮತಗಳ ಮುನ್ನಡೆ

ಉತ್ತರ ಕನ್ನಡ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕಾಗೇರಿಗೆ 1,57,138 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 74,711 ಮುನ್ನಡೆ

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲಗೆ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟಗೆ 74,226 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರ: ಜಗದೀಶ್ ಶೆಟ್ಟರ್‌ಗೆ 95,241 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿಯ ರಾಘವೇಂದ್ರಗೆ 1,23,976 ಮತಗಳ ಮುನ್ನಡೆ

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ 1,76,067 ಮತಗಳ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 9ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 1,76,067 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 4,65,777 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 2,89,710ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಚಿಕ್ಕೋಡಿ: ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 14ನೇ ಸುತ್ತಿನ ಎಣಿಕೆಯಲ್ಲಿ 70 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಆರ್.ಡಿ ಕಾಲೇಜಿನ ಎದುರು ಅಪಾರ ಸಂಖ್ಯೆಯಲ್ಲಿ ಸೇರಿದ ಜನರು, ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಕಾರ್ಯಕರ್ತನೊಬ್ಬ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾನೆ‌.

ಚಾಮರಾಜನಗರ: ಬೋಸ್‌ಗೆ 69,385 ಮತಗಳ ಮುನ್ನಡೆ

ಚಾಮರಾಜಗರ ಲೋಕಸಭಾ ಕ್ಷೇತ್ರದಲ್ಲಿ 8ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ಸುನಿಲ್ ಬೋಸ್ ಅವರು 69385 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬೋಸ್ 3,33,037 ಮತ್ತು ಬಾಲರಾಜ್ 2,63,652 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,30,486 ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 1 ಲಕ್ಷ ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 87,039 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ 70,194 ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ಕ್ಷೇತ್ರ: ಯದುವೀರ್‌ಗೆ 89,137 ಮತಗಳ ಮುನ್ನಡೆ

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜಾಗೆ 15,946 ಮತಗಳ ಮುನ್ನಡೆ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕೋಟಗೆ 1,43,763 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 84,685 ಮತಗಳ ಮುನ್ನಡೆ

ಹಾಸನ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ 27,110 ಮತಗಳ ಮುನ್ನಡೆ

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ 33,348 ಮತಗಳ ಮುನ್ನಡೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್‌ಗೆ   59,066 ಮತಗಳ ಮುನ್ನಡೆ

ಹಾವೇರಿ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ಗೆ 22,318 ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 98,977 ಮತಗಳ ಮುನ್ನಡೆ

ರಾಯಚೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿಗೆ 22,139 ಮತಗಳ ಮುನ್ನಡೆ

ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿ ಬೋಸ್‌ಗೆ 1.26 ಲಕ್ಷ ಮತಗಳ ಮುನ್ನಡೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳಗೆ 24,569 ಮತಗಳ ಮುನ್ನಡೆ

ದಾವಣಗೆರೆ ಲೋಕಸಭಾ ಕ್ಷೇತ್ರ: ಪ್ರಭಾ ಮಲ್ಲಿಕಾರ್ಜುನಗೆ 28,467 ಮತಗಳ ಮುನ್ನಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯಗೆ 2,10,262 ಮತಗಳ ಮುನ್ನಡೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಯ ಪಿ.ಸಿ. ಗದ್ದಿಗೌಡರಗೆ 16,694 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,26,801 ಮತಗಳ ಮುನ್ನಡೆ

ಚಿಕ್ಕೋಡಿ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ 83 ಸಾವಿರ ಮತಗಳ ಮುನ್ನಡೆ

ಹಾಸನ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ 35,895 ಸಾವಿರ ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಗೆ 73,122 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,41,808 ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: 1 ಲಕ್ಷ ಮತಗಳಿಂದ ಜೋಶಿ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿನೋದ ಅಸೂಟಿ ಅವರಿಂದ 1 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಒಟ್ಟು ಚಲಾವಣೆಯಾದ 13.62 ಲಕ್ಷ ಮತಗಳ ಪೈಕಿ ಇದುವರೆಗೆ 9 ಲಕ್ಷಕ್ಕಿಂತ ಹೆಚ್ಚು ಮತಗಳ ಎಣಿಕೆ ಕಾರ್ಯ ಮುಗಿದಿದೆ. ಜೋಶಿ ಅವರಿಗೆ 5,42,222, ವಿನೋದ ಅಸೂಟಿ ಅವರಿಗೆ 4,39,822 ಮತಗಳು ಚಲಾವಣೆಯಾಗಿವೆ.‌ 1,02,400 ಮತಗಳಿಂದ ಜೋಶಿ ಮುನ್ನಡೆ ಸಾಧಿಸಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತೆಯರು ಆಚರಿಸಿದ ವಿಜಯೋತ್ಸವದಲ್ಲಿ ಗುಲಾಲ್‌ ಹಚ್ಚಿಕೊಂಡ ಸಂಭ್ರಮಿಸಿದ ಶಾಸಕ ಅಭಯ ಪಾಟೀಲ

ತುಮಕೂರು ಲೋಕಸಭಾ ಕ್ಷೇತ್ರ: ವಿ. ಸೋಮಣ್ಣಗೆ 1.16 ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ 1.5 ಲಕ್ಷ ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ 10,649 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಮತಗಟ್ಟೆಯತ್ತ ಇ.ತುಕಾರಾಂ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ.ತುಕಾರಾಂ ಅವರು ಗೆಲುವಿನತ್ತ ಮುನ್ನಡೆಯುತ್ತಿದ್ದು, ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧರಾಗಿದ್ದಾರೆ. ಗೆಲುವಿನ ಸುಳಿವು ಲಭಿಸುತ್ತಲೇ ತುಕಾರಾಂ ಅವರು ಮತಗಟ್ಟೆಯತ್ತ ಹೊರಟಿದ್ದಾರೆ.

12ನೇ ಸುತ್ತಿನ ಮತ ಎಣಿಕೆಯ ಕೊನೆಯಲ್ಲಿ ಕಾಂಗ್ರೆಸ್‌ 73,122 ಮತಗಳ ಅಂತರವನ್ನು ಕಾಂಗ್ರೆಸ್ ಕಾಯ್ದುಕೊಂಡಿದೆ. ಕಾಂಗ್ರೆಸ್‌ನ ತುಕಾರಾಂ 5,94,006 ಮತ ಗಳಿಸಿದ್ದರೆ, ಬಿ.ಶ್ರೀರಾಮುಲು ಅವರು 5,20,884 ಮತ ಗಳಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ: 2 ಲಕ್ಷ ದಾಟಿದ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 12 ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2,05,723 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 5,57,202 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 3,51,479 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 99,242 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 87,683 ಮತಗಳ ಮುನ್ನಡೆ

ಕೊಪ್ಪಳ: ಗೆಲುವಿನ ಹಾದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ 30 ಸಾವಿರಕ್ಕಿಂತಲೂ ಹೆಚ್ವು ಮತಗಳ ಮುನ್ನಡೆ ಹೊಂದಿದ್ದು, ಗೆಲುವಿನ ಹಾದಿಯಲ್ಲಿ ಸಾಗಿದ್ದಾರೆ.

ಮುನ್ನಡೆ ಹೆಚ್ಚಾಗುತ್ತಿದ್ದಂತೆ ರಾಜಶೇಖರ ಹಿಟ್ನಾಳ ಮತ ಎಣಿಕೆ ಕೇಂದ್ರಕ್ಕೆ ಬಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮತ ಎಣಿಕೆ ಕೇಂದ್ರಕ್ಕೆ ಬಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರ: ಗೆಲುವಿನತ್ತ ಸುನಿಲ್ ಬೋಸ್

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸುನಿಲ್ ಬೋಸ್ ಗೆಲುವಿನತ್ತ ಮುನ್ನಡೆಯುತ್ತಿದ್ದಾರೆ.ಇಲ್ಲಿಯವರೆಗೆ 10.04 ಲಕ್ಷ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಇನ್ನು 3.65 ಲಕ್ಷ ಮತಗಳ ಎಣಿಕೆ ಬಾಕಿ ಇದೆ.

ಸದ್ಯ ಬೋಸ್ ಅವರು 1.34 ಲಕ್ಷ ಮತಗಳ ಅಂತರದಿಂದ ಮುಂದಿದ್ದಾರೆ. ಬೋಸ್ 5,49,973 ಮತ ಪಡೆದಿದ್ದರೆ, ಬಾಲರಾಜ್ 4,14,731 ಮತಗಳನ್ನು ಗಳಿಸಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳಗೆ 28,929 ಮತಗಳ ಮುನ್ನಡೆ

ಬೀದರ್ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ 1,00,029 ಮತಗಳ ಮುನ್ನಡೆ

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ 42,000 ಮತಗಳ ಮುನ್ನಡೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿಯ ಪಿ.ಸಿ. ಗದ್ದಿಗೌಡರಗೆ 14,167 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 97,014 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ 80 ಸಾವಿರ ಮತಗಳ ಮುನ್ನಡೆ

ಕೋಲಾರ ಕ್ಷೇತ್ರ: ಮತಗಟ್ಟೆಯಿಂದ ಬೇಸರದಿಂದ ಹೊರಟ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್

ಬೀದರ್‌ | 26 ವರ್ಷದ ಸಾಗರ್‌ಗೆ ಲಕ್ಷ ಮತಗಳ ಮುನ್ನಡೆ, ವಿಜಯೋತ್ಸವ

ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್‌ ಖಂಡ್ರೆಯವರು ಒಂದು ಲಕ್ಷ ಮತಗಳ ಮುನ್ನಡೆ ಗಳಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ.

ಇದುವರೆಗೆ ಹತ್ತು ಸುತ್ತಿನ ಮತಗಳ ಎಣಿಕೆ ಪೂರ್ಣಗೊಂಡಿದೆ. ಮೊದಲ ಸುತ್ತಿನಿಂದಲೂ ಸಾಗರ್‌ ಖಂಡ್ರೆಯವರು ಮುನ್ನಡೆ ಕಾಯ್ದುಕೊಳ್ಳುತ್ತ ಬಂದಿದ್ದಾರೆ. ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಸಾಗರ್‌ ಖಂಡ್ರೆಯವರು ಭಾರಿ ಮುನ್ನಡೆ ಕಾಯ್ದುಕೊಂಡಿರುವ ವಿಷಯ ತಿಳಿದು ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. 26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆಯವರು ಗೆದ್ದರೆ, ಅತಿ ಕಡಿಮೆ ವಯಸ್ಸಿನ ಸಂಸದ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ: ಎಚ್.ಡಿ.ಕುಮಾರಸ್ವಾಮಿಗೆ 2,21,528 ಮತಗಳ ಮುನ್ನಡೆ

ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿ ಬೋಸ್‌ಗೆ 1.61 ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,52,107 ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 90,886 ಮತಗಳ ಮುನ್ನಡೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳಗೆ 35,659 ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ಕ್ಷೇತ್ರ: ಯದುವೀರ್‌ಗೆ 83,760 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಗೆ 89,257 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 1.03 ಲಕ್ಷ ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ 22,264 ಮತಗಳ ಮುನ್ನಡೆ

ಸುರಪುರ ಉಪ ಚುನಾವಣೆ: ಮತ ಎಣಿಕೆ ಕೇಂದ್ರದಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ ರಾಜೂಗೌಡ

ಯಾದಗಿರಿ ಜಿಲ್ಲೆಯ ಸುರಪುರ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿದ್ದರಿಂದ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

ಕಾಂಗ್ರೆಸ್ ಮತಗಳ ಅಂತರ ಹೆಚ್ಚಾಗುತ್ತಲೇ ಇರುವುದರಿಂದ ಬಿಜೆಪಿ ಅಭ್ಯರ್ಥಿ ಹೊರ ನಡೆದರು.

'ಕಾರ್ಯಕರ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನಮ್ಮ ಕಾರ್ಯಕರ್ತರು ಅದ್ಭುತ ಕೆಲಸ ಮಾಡಿದ್ದಾರೆ. ಉಪ ಚುನಾವಣೆ ಬರುತ್ತದೆ ಅಂದುಕೊಂಡಿರಲಿಲ್ಲ' ಎಂದು ರಾಜೂಗೌಡ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,57,459 ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ಕ್ಷೇತ್ರ: ಯದುವೀರ್‌ಗೆ 88 ಸಾವಿರ ಮತಗಳ ಮುನ್ನಡೆ

ಉಡುಪಿ –ಚಿಕ್ಕಮಗಳೂರು ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ 1,82,151 ಮತಗಳ ಮುನ್ನಡೆ

ಹಾವೇರಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ಗೆ 28,734 ಮತಗಳ ಮುನ್ನಡೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಭರ್ಜರಿ ಗೆಲುವಿನತ್ತ ತುಕಾರಾಂ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ.ತುಕಾರಾಂ ಗೆಲುವು ಸಾಧಿಸಿದ್ದಾರೆ. 17ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಕಾಂಗ್ರೆಸ್ ಅಭ್ಯರ್ಥಿ 6,92,667 ಮತ ಗಳಿಸಿದ್ದು, 89,257 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ‌ ಅಭ್ಯರ್ಥಿ ಬಿ.ಶ್ರೀರಾಮುಲು 6,03,410 ಮತ ಗಳಿಸಿದ್ದಾರೆ.

ಕ್ಷೇತ್ರದಲ್ಲಿ 13,86,553 ಮತಗಳು ಚಲಾವಣೆಗೊಂಡಿವೆ. ಇದರಲ್ಲಿ ಅರ್ಧದಷ್ಟು, ಅಂದರೆ 6,93,277ಕ್ಕಿಂತಲೂ ಹೆಚ್ಚು ಮತ ಪಡೆದವರು ಗೆಲ್ಲಲಿದ್ದಾರೆ. ಈವರೆಗೆ ತುಕಾರಾಂ 6,92,667 ಮತ ಪಡೆದಿದ್ದು, ಉಳಿದ ಎರಡು ಸುತ್ತುಗಳಲ್ಲಿ ಕೇವಲ 1 ಸಾವಿರ ಮತ ಪಡೆದರೂ ಗೆಲುವು ಖಚಿತವಾಗಲಿದೆ.

ಬೀದರ್‌ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 1,09,729 ಮತಗಳ ಮುನ್ನಡೆ

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲಗೆ 19,144 ಮತಗಳ ಮುನ್ನಡೆ

ಬೆಂಗಳೂರು ಉತ್ತರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ 1,23,172 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಚನ್ನಪಟ್ಟಣ, ಮಾಗಡಿಯಲ್ಲಿ ಬಿಜೆಪಿ ಲೀಡ್

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ . ಕ್ಷೇತ್ರದ ವ್ಯಾಪ್ತಿಯ ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯು ಚನ್ನಪಟ್ಟಣದಲ್ಲಿ 21 ಸಾವಿರ ಹಾಗೂ ಮಾಗಡಿಯಲ್ಲಿ 17 ಸಾವಿರ ಲೀಡ್ ಪಡೆದಿದೆ.

ಕುಣಿಗಲ್, ಆನೇಕಲ್ ಹಾಗೂ ರಾಮನಗರ ಕ್ಷೇತ್ರಗಳ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದೆ. ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರದ ಮತ ಎಣಿಕೆ ಮುಂದುವರೆದಿದೆ. ಚಲಾವಣೆಯಾಗಿರುವ 19.14 ಲಕ್ಷ ಮತಗಳ ಪೈಕಿ, ಇದುವರೆಗೆ ಸುಮಾರು 12 ಲಕ್ಷ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಸುಮಾರು 7 ಲಕ್ಷ ಮತಗಳ ಎಣಿಕೆ ಬಾಕಿ ಇದೆ.

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ 31,131 ಮತಗಳ ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಸತತ ಮುನ್ನಡೆ ಕಾಯ್ದುಕೊಂಡಿದ್ದು, ಒಟ್ಟು 4,42,874 ಮತಗಳನ್ನು ಪಡೆದು, 31,131 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಜಾಧವ್ 4,11,561 ಮತ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,65 ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿಗೆ ಭರ್ಜರಿ ಮುನ್ನಡೆ

ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಅವರು 68,515 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್- 3,78,422 ಬಿಜೆಪಿಯ ಪಿ.ಸಿ. ಮೋಹನ್-3,09,907 ಮತ ಪಡೆದಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ: ಎಚ್.ಡಿ.ಕುಮಾರಸ್ವಾಮಿಗೆ 2.40 ಲಕ್ಷ ಮತಗಳ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 14ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2,40,101 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 6,49,542 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 4,40,101 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ 44,377 ಮತಗಳ ಮುನ್ನಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯಗೆ 2,07,123 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರ: 1.33 ಲಕ್ಷ ಮತಗಳ ಮುನ್ನಡೆ ಸಾಧಿಸಿದ ಶೆಟ್ಟರ್‌

ರಾಯಚೂರು ಲೋಕಸಭಾ ಕ್ಷೇತ್ರ: ಕಾoಗ್ರೆಸ್‌ ಅಭ್ಯರ್ಥಿಗೆ 31,915 ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ಕ್ಷೇತ್ರ: ಯದುವೀರ್‌ಗೆ 95 ಸಾವಿರ ಮತಗಳ ಮುನ್ನಡೆ

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲಗೆ 21,255 ಮತಗಳ ಮುನ್ನಡೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರ | ಪ್ರಿಯಾಂಕಾ ಗೆಲುವು ನಿಶ್ಚಿತ: ಸಂಭ್ರಮಾಚರಣೆ

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 21ನೇ ಸುತ್ತಿನ ಎಣಿಕೆ ವೇಳೆಗೆ 6,37,920 ಮತ ಗಳಿಸಿದ್ದು, 91 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಇನ್ನೂ ಒಂದು ಸುತ್ತಿನ ಎಣಿಕೆಯಷ್ಟೇ ಬಾಕಿ ಇದ್ದು, ಗೆಲುವು ಬಹುತೇಕ ನಿಶ್ಚಿತವಾಗಿದೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಚಿಕ್ಕೋಡಿಗೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆ

ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ

ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿಯ ಬಿ.ವೈ. ರಾಘವೇಂದ್ರಗೆ 1,79 ಲಕ್ಷ ಮತಗಳ ಮುನ್ನಡೆ

ಮೈಸೂರು- ಕೊಡಗು‌ ಲೋಕಸಭಾ ಕ್ಷೇತ್ರ: ಯದುವೀರ್‌ಗೆ 1 ಲಕ್ಷ ಮತಗಳ ಭಾರಿ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 1.17 ಲಕ್ಷ ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ 29,969 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ ಕ್ಷೇತ್ರ: ಬಾಗೇಪಲ್ಲಿ, ಹೊಸಕೋಟೆ ಹೊರತುಪಡಿಸಿ ಎಲ್ಲೆಡೆ ಬಿಜೆಪಿ ಲೀಡ್

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸಕೋಟೆ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,84 ಲಕ್ಷ ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 85,971 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 1.25 ಲಕ್ಷ ಮತಗಳ ಮುನ್ನಡೆ

ಚಾಮರಾಜನಗರ: ಬೋಸ್ ಗೆಲುವು ನಿಚ್ಚಳ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುನಿಲ್ ಬೋಸ್ ಗೆಲುವು ಖಚಿತವಾಗಿದೆ.

12,77,394 ಮತಗಳ ಎಣಿಕೆ ನಡೆದಿದ್ದು, 90 ಸಾವಿರದಷ್ಟು ಮತಗಳ ಎಣಿಕೆ ಬಾಕಿ ಇದೆ. ಬೋಸ್ ಅವರು 7,01,215 ಮತ್ತು ಬಾಲರಾಜ್ 5,23,997 ಮತಗಳನ್ನು ಪಡೆದಿದ್ದಾರೆ. ಬೋಸ್ ಅವರು 1.77 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚಾಮರಾಜನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೋವಿಂದ ಕಾರಜೋಳಗೆ 42,220 ಮತಗಳ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 1.23 ಲಕ್ಷ ಮತಗಳ ಮುನ್ನಡೆ

ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ 47,273 ಮತಗಳ ಮುನ್ನಡೆ

ಹಾಸನ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ  42,261 ಸಾವಿರ ಮತಗಳ ಮುನ್ನಡೆ

ಹಾಸನ ಕ್ಷೇತ್ರ: ಶ್ರೇಯಸ್‌ ಪಟೇಲ್‌ ಗೆಲುವು ಬಹುತೇಕ ನಿಶ್ಚಿತ, ಅಧಿಕೃತ ಘೋಷಣೆಯೊಂದೇ ಬಾಕಿ

ಹಾವೇರಿ ಕ್ಷೇತ್ರ: ಬೊಮ್ಮಾಯಿ ಬಹುತೇಕ ಗೆಲುವು

ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬಹುತೇಕ ಗೆಲುವು. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಕೊಪ್ಪಳ ಕ್ಷೇತ್ರದಲ್ಲಿ ಕೈ ಹಿಡಿದ ಮತದಾರರು; ರಾಜಶೇಖರ ಹಿಟ್ನಾಳ ಭರ್ಜರಿ ಜಯಭೇರಿ

ಹಾವು ಏಣಿಯಾಟದ ಸ್ಪರ್ಧೆ ಮೂಲಕ ಗಮನ ಸೆಳೆದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಗೆಲುವು ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಸತತ ಎರಡನೇ ಬಾರಿಗೆ ಸ್ಪರ್ಧೆ ಮಾಡಿದ್ದ ಅವರು ಕಳೆದ ಬಾರಿ 36 ಸಾವಿರ ಮತಗಳ ಅಂತರದಿಂದ ಸೋತಿದ್ದರು.‌ ಈ ಬಾರಿ 47 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಮೊಳಗಿಸಿ ಸಂಸದರಾಗುವ ಕನಸು ನನಸು ಮಾಡಿಕೊಂಡರು.

ದಾವಣಗೆರೆ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 45,152 ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ: ಗೆಲುವಿನತ್ತ ಮಂಜುನಾಥ್, ಡಿ.ಕೆ. ಸುರೇಶ್‌ಗೆ ಮುಖಭಂಗ

ತೀವ್ರ ಕುತೂಹಲ‌ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಅವರು ಸತತ ಮುನ್ನಡೆಯೊಂದಿಗೆ ಗೆಲುವಿತ್ತ ದಾಪುಗಾಲು ಇಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ತೀವ್ರ ಹಿನ್ನಡೆಯೊಂದಿಗೆ ಮುಖಭಂಗವಾಗಿದೆ.

ಮಂಜುನಾಥ್ ಅವರು 8,19,720 ಮತಗಳನ್ನು ಹಾಗೂ ಸುರೇಶ್ ಅವರು 6,35,059 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು 1,84,661 ಮತಗಳ ಮುನ್ನಡೆ ಸಾಧಿಸಿದ್ದಾರೆ. ಚಲಾವಣೆಯಾಗಿರುವ 19.14 ಲಕ್ಷ ಮತಗಳ ಪೈಕಿ ಇದುವರೆಗೆ ಸುಮಾರು 14.50 ಲಕ್ಷ ಮತಗಳ ಎಣಿಕೆಯಾಗಿದೆ.

ಹಾವೇರಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ಗೆ 25,473 ಮತಗಳ ಮುನ್ನಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯಗೆ 2,22,024 ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ‌ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ 35,020 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 1.31 ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಉತ್ತರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ 1.51 ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,92 ಲಕ್ಷ ಮತಗಳ ಮುನ್ನಡೆ

ಚಿಕ್ಕೋಡಿಯಲ್ಲಿ ಪ್ರಿಯಾಂಕಾಗೆ ಗೆಲುವು

ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ

7,04,414 ಮತ ಪಡೆದಿರುವ ಅವರು, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 94 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಕೊನೆಯ ಸುತ್ತಿನಲ್ಲಿ ಇನ್ನೂ 13 ಸಾವಿರ ಮತಗಳ ಎಣಿಕೆ ಆಗಬೇಕಿದೆ.

ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ನಿಚ್ಚಳ ವಾಗುತ್ತಿದ್ದಂತೆಯೇ ಬಿಜೆಪಿ ಚುನಾವಣಾ ಕಚೇರಿ ಬಳಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಚುನಾವಣಾ ಕಚೇರಿಗೆ ಭೇಟಿ ನೀಡಿದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕಾರ್ಯಕರ್ತರ ಜೊತೆ ಸಂಭ್ರಮ ಹಂಚಿಕೊಂಡರು. ಕಚೇರಿ ಬಳಿ ಸೇರಿದ್ದ ಪಕ್ಷದ ಕಾರ್ಯಕರ್ತರು ಬ್ರಿಜೇಶ್ ಚೌಟ ಅವರನ್ನು ಅಭಿನಂದಿಸಿದರು. ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು. ಕಾರ್ಯಕರ್ತರಿಗೆ ಚೌಟ ಧನ್ಯವಾದ ಸಲ್ಲಿಸಿದರು‌.

ಸುರಪುರ ಉಪಚುನಾವಣೆ: ಲಕ್ಷ ಮತಗಳ ದಾಟಿದ ಕಾಂಗ್ರೆಸ್ ಅಭ್ಯರ್ಥಿ

ಯಾದಗಿರಿ ಜಿಲ್ಲೆಯ ಸುರಪುರ ಉಪಚುನಾವಣೆ ಫಲಿತಾಂಶಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹತ್ತಿರವಿದ್ದು, 1,02,494 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) 83,944 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 2.01 ಲಕ್ಷ ಮತಗಳ ಮುನ್ನಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಲ್ಹಾದ ಜೋಶಿಗೆ 95,003 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಕ್ಷೇತ್ರ: ಬಿಜೆಪಿಯ ಬ್ರಿಜೇಶ್ ಚೌಟಗೆ 1.37 ಲಕ್ಷ ಮತಗಳ ಮುನ್ನಡೆ

ಕಲಬುರಗಿ: ಗೆಲುವಿನತ್ತ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ

16ನೇ ಸುತ್ತಿನಲ್ಲೂ ಸತತ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಅವರ ಅಳಿಯ ರಾಧಾಕೃಷ್ಣ ‌ದೊಡ್ಡಮನಿ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.

ಇದುವರೆಗೆ 5,77,936 ಮತಗಳನ್ನು ಗಳಿಸಿರುವ ರಾಧಾಕೃಷ್ಣ ಅವರು 29,426 ಮತಗಳ ಮುನ್ನಡೆ ಸಾಧಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು 5,48,510 ಮತಗಳನ್ನು ಪಡೆದಿದ್ದಾರೆ.

 ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಗೆಲುವಿನತ್ತ ಕಾರಜೋಳ ದಾಪುಗಾಲು

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಡಾ. ಮಂಜುನಾಥ್ ಗೆಲುವು ಬಹುತೇಕ ಖಚಿತ

 ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ: ಗೆಲುವಿನತ್ತ ಯದುವೀರ್

ಬೆಂಗಳೂರು ಉತ್ತರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ 1.61 ಲಕ್ಷ ಮತಗಳ ಮುನ್ನಡೆ

ಸುರಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಘೋಷಣೆ ಬಾಕಿ

ಯಾದಗಿರಿ ಜಿಲ್ಲೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಘೋಷಣೆಯೊಂದೆ ಬಾಕಿ ಉಳಿದಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಹಳದಿ ಸಾಲು ಹಾಕಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಕೇಕೆ ಹಾಕಿ ಸಂಭ್ರಮಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 72,583 ಮತಗಳ ಮುನ್ನಡೆ

ರಾಯಚೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 72,004 ಮತಗಳ ಮುನ್ನಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯಗೆ 2,38,669 ಮತಗಳ ಮುನ್ನಡೆ

 ಬೀದರ್ | ಸಾಗರ್ ಖಂಡ್ರೆ ಭಾರಿ ಮುನ್ನಡೆ; ಕಾಂಗ್ರೆಸ್‌ನಲ್ಲಿ ಸಂಭ್ರಮ

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತತ 16ನೇ ಸುತ್ತಿನಲ್ಲೂ ಒಂದು ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿರುವುದರಿಂದ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ.

ಇಲ್ಲಿನ ಅಕ್ಕಮಹಾದೇವಿ ಕಾಲೇಜಿನಲ್ಲಿ ಕುಳಿತು ಫಲಿತಾಂಶ ವೀಕ್ಷಿಸುತ್ತಿರುವ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್, ಮುಖಂಡರಾದ ಬಸವರಾಜ ಧನ್ನೂರ, ಬಾವರಾಜ ಜಾಬಶೆಡ್ಡಿ,ಅರವಿಂದ ಅರಳಿ, ರವಿ ಮಾಳಗೆ ಮತ್ತಿತರರಿಗೆ ಕಾರ್ಯಕರ್ತರು ಸನ್ಮಾನಿಸಿ, ಸಿಹಿ ಹಂಚಿದರು.

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ 2,75 ಲಕ್ಷ ಮತಗಳ ಮುನ್ನಡೆ

ಮಂಡ್ಯ ಲೋಕಸಭಾ ಚುನಾವಣೆ 18ನೇ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2,75,152 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 8,21,172 ಮತ ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 5,46,020 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ- ಮತ್ತೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌‌ಗೆ ಮುನ್ನಡೆ‌

ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 10,38,964 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 7,82,779 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು 2,56,185 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 2,24,404 ಮತಗಳ ಭಾರೀ ಅಂತರದ ಮುನ್ನಡೆ ಸಾಧಿಸಿದ್ದು, ಭರ್ಜರಿ ಗೆಲುವಿನ ಹಾದಿಯಲ್ಲಿದ್ದಾರೆ. ಬಿ.ವೈ.ರಾಘವೇಂದ್ರ ಅವರಿಗೆ 7,25,364 ಮತಗಳು ಹಾಗೂ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ ಕುಮಾರ್ 5,07,750 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 27,867 ಮತಗಳ ಪಡೆದಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸಂಸತ್ ಭವನ ಪ್ರವೇಶಿಸಲು ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಬಿ.ವೈ.ರಾಘವೇಂದ್ರ ಈ ಹಿಂದೆ 2009ರಲ್ಲಿ, 2018ರ ಉಪಚುನಾವಣೆ ಹಾಗೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಕಲಬುರಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿ‌ ಇದೆ. ಮೊದಲ ಸುತ್ತಿನಿಂದಲೂ ಸತತ ಮತಗಳಿಕೆಯಲ್ಲಿ‌ ಮುನ್ನಡೆ ಸಾಧಿಸುತ್ತಾ ಬಂದ ದೊಡ್ಡಮನಿ ಅವರು ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡರು. ಮಧ್ಯಾಹ್ನ 2ಕ್ಕೆ ಮತ ಎಣಿಕೆ ಮುಕ್ತಾಯವಾಯಿತು.

ಕೋಟ ಶ್ರೀನಿವಾಸ ಪೂಜಾರಿ ಗೆಲುವು-  ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ವಿರುದ್ಧ 2,57,178 ಮತಗಳ ಅಂತರದಿಂದ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ‌ ಕೋಟ 7,27,391 ಮತಗಳನ್ನು ಪಡೆದರೆ, ಕೆ.ಜಯಪ್ರಕಾಶ್ ಹೆಗ್ಡೆ 4,70,215 ಮತಗಳನ್ನು ಪಡೆದಿದ್ದಾರೆ. ಕೋಟ ಗೆಲುವು ಅಧಿಕೃತವಾಗಿ ಘೋಷಣೆಯಾಗಬೇಕಷ್ಟೆ.

ಕಲಬುರಗಿ: ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 24,270 ಮತಗಳ ಮುನ್ನಡೆ ಪಡೆದು ಗೆಲುವಿನ ಸನಿಹ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಸಮೀಪದ ಪ್ರತಿ ಸ್ಪರ್ಧಿ ಬಿಜೆಪಿಯ ಡಾ.ಉಮೇಶ ಜಾಧವ ಅವರು 5,88,375 ಮತಗಳನ್ನು ಗಳಿಸಿದ್ದಾರೆ. ರಾಧಾಕೃಷ್ಣ ಅವರು 6,12,645 ಮತಗಳು ಪಡೆದು 24,270 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಲ ಮತ ಎಣಿಕೆ ನಡೆಯುತ್ತಿದೆ. ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಿಸಿದರು.

ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 1,91,727 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಡೆದ ಮತಗಳ ವಿವರ : ಶೋಭಾ ಕರಂದ್ಲಾಜೆ - 7,07,978 ಪ್ರೋ.ರಾಜೀವ್ ಗೌಡ - 5,16,251

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ ಈವರೆಗೆ 4,071 ಮತಗಳು ಬಂದಿವೆ.

ಬೀದರ್‌ ಲೋಕಸಭಾ ಕ್ಷೇತ್ರ; ಕೊನೆಯ ಸುತ್ತಿನ ಮತ ಎಣಿಕೆ ಸಾಗರ್‌ ಖಂಡ್ರೆ (ಕಾಂಗ್ರೆಸ್‌); 6,65,162 ಭಗವಂತ ಖೂಬಾ (ಬಿಜೆಪಿ); 5,35,766 ಮುನ್ನಡೆ; 1,29,396

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಬಹುತೇಕ ಕೊನೆಗೊಂಡಿದ್ದು, ಅಂಚೆ ಮತಗಳ ಎಣಿಕೆ ಇದೀಗ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಈಗಾಗಲೇ ಗೆಲುವು ದಾಖಲಿಸಿದ್ದು, ಘೋಷಣೆಯಷ್ಟೇ ಬಾಕಿ ಉಳಿದಿದೆ. ಒಟ್ಟಾರೆ ಮತಗಳ ಅಂತರ ಗಮನಿಸಿದಾಗ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಕಾಂಗ್ರೆಸ್‌ ಶಾಸಕ ಇರುವ  ಹೊಸಪೇಟೆಯಲ್ಲಿ ಮಾತ್ರ 165 ಮತಗಳ ಅಂತರ ಲಭಿಸಿದೆ.

* ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.‌ ಸಿ.ಎನ್. ಮಂಜುನಾಥ್ ಅವರು 10,75,553 ಮತಗಳನ್ನು ಪಡೆದಿದ್ದಾರೆ.‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 8,07,459 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು 2,68,094 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಪ್ರಲ್ಹಾದ ಜೋಶಿ ಮುನ್ನಡೆ ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು 711374 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ 614916 ಮತಗಳನ್ನು ಪಡೆದಿದ್ದಾರೆ. ಜೋಶಿ ಅವರು 96458 ಮತಗಳ ಅಂತರದಿಂದ ಗೆಲುವಿನ ಸನಿದಲ್ಲಿದ್ದಾರೆ.

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಗೆಲುವಿನ ನಗೆ ಬೀರಿದರು. ಒಂದು ಹಂತದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್ ಅಲಿಖಾನ್‌ ಅವರು 72 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಇನ್ನೇನು ತಮ್ಮ ಅಭ್ಯರ್ಥಿಯೇ ಜಯ ಸಾಧಿಸುತ್ತಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಇದ್ದರು. ಕೊನೆಯ ಕೆಲವು ಸುತ್ತುಗಳ ಮತ ಎಣಿಕೆಯಲ್ಲಿ ಪಿ.ಸಿ.ಮೋಹನ್‌ ಅವರು ಭರ್ಜರಿ ಮುನ್ನಡೆ ಕಾಯ್ದುಕೊಂಡು ಜಯ ಸಾಧಿಸಿದರು.

ವಿ.ಸೋಮಣ್ಣ ಗೆಲುವು ತುಮಕೂರು: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1,73,645 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಸೋಮಣ್ಣ 7,16,709 ಮತ, ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡ 5,43,084 ಮತ ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಬಹುತೇಕ‌ ನಿಶ್ಚಿತ ಅಧಿಕೃತ ಘೋಷಣೆ ಮಾತ್ರ ಬಾಕಿ ವಿಜಯಪುರ: ವಿಜಯಪುರ ಎಸ್‌.ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಬಹುತೇಕ‌ ನಿಶ್ಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. 14 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ರಮೇಶ ಜಿಗಜಿಣಗಿ ಅವರಿಗೆ 5,06,377 ಮತಗಳು ಲಭಿಸಿವೆ. ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಅವರಿಗೆ 4,44,504 ಮತಗಳು ಲಭಿಸಿವೆ. ಬಿಜೆಪಿ 61,873 ಮುನ್ನಡೆ ಸಾಧಿಸಿದೆ. ಈ ಗೆಲುವಿನ ಮೂಲಕ ರಮೇಶ ಜಿಗಜಿಣಗಿ ಅವರು ಸತತ 7ನೇ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದಾರೆ. ಈ ಹಿಂದೆ ಚಿಕ್ಕೋಡಿ ಎಸ್‌.ಸಿ ಮೀಸಲಯ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ, ವಿಜಯಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು.  ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದ ರಮೇಶ್ ಜಿಗಜಿಣಗಿ ಅವರು ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ಜಯ ಗಳಿಸಿ ಹಿರಿಯ ಸಂಸದರಾಗಿದ್ದಾರೆ. ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಈ ಹಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ್ದ ಅವರಿಗೆ ಇದುವರೆಗೆ ಒಟ್ಟು 12 ಚುನಾವಣೆಗಳಲ್ಲಿ ಗೆಲುವು ಲಭಿಸಿದಂತಾಗಿದೆ. ಮೂಲತಃ ಜನತಾ ಪರಿವಾರದವರಾದ ರಮೇಶ ಜಿಗಜಿಣಗಿ ಅವರು, ಈ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಅಲ್ಲದೇ, ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಜಯಭೇರಿ ಭಾರಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೋವಿಂದ ಕಾರಜೋಳ ಅವರು 6,84,890 ಮತಗಳನ್ನು ಪಡೆದರೆ, ಬಿ.ಎನ್‌.ಚಂದ್ರಪ್ಪ 6,36,769 ಮತಗಳಿಸಿದರು. ಇಬ್ಬರು ಮಹಿಳೆಯರು ಸೇರಿ ಕಣದಲ್ಲಿ 20 ಅಭ್ಯರ್ಥಿಗಳಿದ್ದು, 18 ಉಮೇದುವಾರರು ಠೇವಣಿ ಕಳೆದುಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ 18,56,876 ಮತದಾರರಲ್ಲಿ 13,61,031 ಮತದಾರರು ಹಕ್ಕು ಚಲಾಯಿಸಿದ್ದರು. ಕೇಂದ್ರ ಸಚಿವರೂ ಆಗಿದ್ದ ಮಾಜಿ ಸಂಸದ ಎ.ನಾರಾಯಣಸ್ವಾಮಿ ಬದಲಾಗಿ ಕಾರಜೋಳ ಅವರನ್ನು ಕಣಕ್ಕೆ ಇಳಿಸಿದ ಬಿಜೆಪಿಯ ಕಾರ್ಯತಂತ್ರ ಫಲಿಸಿದೆ. ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಇದು ಎರಡನೇ ಸೋಲು. 2019ರಲ್ಲಿ ಎ.ನಾರಾಯಣಸ್ವಾಮಿ ಎದುರು ಸೋಲು ಕಂಡಿದ್ದರು. ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರ ಹರಡಿಕೊಂಡಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಕೈ ಅಭ್ಯರ್ಥಿ ಗೆಲುವಿನ ವಿಶ್ವಾಸದಲ್ಲಿದ್ದರು. ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಾರಜೋಳ ಅವರು ಅಖಾಡಕ್ಕೆ ಇಳಿದಾಗ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿತ್ತು. ಕ್ಷೇತ್ರಕ್ಕೆ ನಡೆದ 18 ಚುನಾವಣೆಯಲ್ಲಿ ಕಾಂಗ್ರೆಸ್‌ 11, ಬಿಜೆಪಿ 3 ಬಾರಿ ಜಯಗಳಿಸಿದೆ. ಪಿಎಸ್‌ಪಿ, ಸ್ವತಂತ್ರ ಪಕ್ಷ, ಜನತಾ ದಳ ಮತ್ತು ಜೆಡಿಯು ತಲಾ ಒಂದು ಬಾರಿ ಕ್ಷೇತ್ರ ಪ್ರತಿನಿಧಿಸಿವೆ. 2009ರಿಂದ ನಡೆದ ಪ್ರತಿ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮತದಾರರು ಮಣೆ ಹಾಕಿದ್ದಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು, 10,75,553 ಮತಗಳನ್ನು ಪಡೆದಿದ್ದಾರೆ. 2,68,094 ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಆರಂಭದಿಂದಲೂ‌ ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಾ ಬಂದ ಸುರೇಶ್ ಅವರು ಕೇವಲ 8,07,459 ಮತಗಳನ್ನು ಪಡೆದಿದ್ದಾರೆ. ಭಾರೀ ಮತಗಳ ಅಂತರದಿಂದ ಸೋತಿರುವ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕ್ಷೇತ್ರದಲ್ಲಿ 10,633 ನೋಟಾ ಮತಗಳು ಚಲಾವಣೆಯಾಗಿವೆ. ಕಣದಲ್ಲಿರುವ 15 ಅಭ್ಯರ್ಥಿಗಳ‌ ಪೈಕಿ, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದರೆ ನೋಟಾ ಮತಗಳು ಮೂರನೇ ಸ್ಥಾನ ಪಡೆದಿವೆ.

2,84,620 ಮತಗಳ ಅಂತರದಿಂದ ಎಚ್.ಡಿ.ಕುಮಾರಸ್ವಾಮಿ ಗೆಲುವು ಮಂಡ್ಯ: ಲೋಕಸಭಾ ಚುನಾವಣೆ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2,84,629 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕುಮಾರಸ್ವಾಮಿ 8,51,881 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) 5,67,261 ಮತ ಪಡೆದು ಸೋಲು ಕಂಡಿದ್ದಾರೆ.

ಡಾ.ಪ್ರಭಾ ಮಲ್ಲಿಕಾರ್ಜುನ್ ಗೆ ಜಯ ದಾವಣಗೆರೆ: 19ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 26094 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ್ 633059 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು 606965 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ದಾಖಲೆತ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.  ಇವಿಎಂಗಳಲ್ಲಿ ದಾಖಲಾಗಿದ್ದ13,63,690 ಮತಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸುನಿಲ್‌ ಬೋಸ್‌ ಅವರು 7,48,885 ಮತಗಳನ್ನು ಪಡೆದಿದ್ದಾರೆ. ಎನ್‌ಡಿಎ ಅಭ್ಯರ್ಥಿ ಎಸ್‌.ಬಾಲರಾಜ್‌ ಅವರು 5,59,942 ಮತಗಳನ್ನು ಗಳಿಸಿದ್ದಾರೆ. ಸದ್ಯ ಬೋಸ್‌ ಅವರು 1,88,943 ಮತಗಳಿಂದ ಮುಂದಿದ್ದಾರೆ. 

ವಿಜಯಪುರ: ವಿಜಯಪುರ ಎಸ್‌.ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸತತ ಏಳನೇ ಬಾರಿಗೆ ಜಯ:  ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ವಿರುದ್ಧ 75,778 ಮತಗಳ ಅಂತರದಿಂದ ಜಿಗಜಿಣಗಿ ಗೆಲುವು ಸಾಧಿಸಿದ್ದಾರೆ. 

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತ ಹೆಸರು;ಪಕ್ಷ;ಮತ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್;ಬಿಜೆಪಿ;7,95,503 ಎಂ.ಲಕ್ಷ್ಮಣ;ಕಾಂಗ್ರೆಸ್‌;6,56,241 ಸುನಿಲ್ ಟಿ.ಆರ್.;ಎಸ್‌ಯುಸಿಐಸಿ;1,560 ಎಂ.ಎಸ್. ಪ್ರವೀಣ್;ಕರ್ನಾಟಕ ರಾಷ್ಟ್ರ ಸಮಿತಿ;740 ಎ.ಎಸ್. ಸತೀಶ್;ಅಖಿಲ ಭಾರತ ಹಿಂದೂ ಮಹಾಸಭಾ;3,746 ಎಚ್‌.ಎಂ.ನಂಜುಂಡಸ್ವಾಮಿ;ಸಮಾಜವಾದಿ ಜನತಾ ಪಾರ್ಟಿ-ಕರ್ನಾಟಕ;523 ಎನ್.ಅಂಬರೀಷ್;ಕರ್ನಾಟಕ ಜನತಾ ಪಕ್ಷ;4,080 ಎ.ಜಿ.ರಾಮಚಂದ್ರ ರಾವ್;ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್;490 ಎಚ್.ಕೆ.ಕೃಷ್ಣ;ಕರುನಾಡು ಪಾರ್ಟಿ;1,489 ಲೀಲಾವತಿ ಜೆ.ಎಸ್.;ಉತ್ತಮ ಪ್ರಜಾಕೀಯ ಪಕ್ಷ;1,754 ಹರೀಶ್ ಗೌಡ.;ಸೋಶಿಯಲಿಸ್ಟ್ ಪಾರ್ಟಿ (ಇಂಡಿಯಾ);976 ಕ್ರಿಸ್ಟೋಫರ್ ರಾಜಕುಮಾರ್;ಪಕ್ಷೇತರ;544 ಪಿ.ಎಸ್.ಯಡೂರಪ್ಪ;ಪಕ್ಷೇತರ;878 ರಂಗಸ್ವಾಮಿ ಎಂ.;ಪಕ್ಷೇತರ;4,306 ರಾಮಮೂರ್ತಿ ಎಂ.;ಪಕ್ಷೇತರ;3,605 ಪಿ.ಕೆ.ದರ್ಶನ್‌ ಶೌರಿ;ಪಕ್ಷೇತರ;764 ರಾಜು;ಪಕ್ಷೇತರ;1,949 ಅಂಬೇಡ್ಕರ್ ಸಿ.ಜೆ.;ಪಕ್ಷೇತರ;835 ನೋಟಾ;4,490

ಸೋಲನ್ನು ಸ್ವೀಕರಿಸಿದ್ದೇನೆ– ಡಿ.ಕೆ. ಸುರೇಶ್

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವು ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇವುಗಳ ಪೈಕಿ ಐವರು ಕಾಂಗ್ರೆಸ್‌ (ನರಸಿಂಹರಾಜ–ತನ್ವೀರ್‌ ಸೇಠ್, ಚಾಮರಾಜ–ಕೆ.ಹರೀಶ್‌ ಗೌಡ, ಪಿರಿಯಾಪಟ್ಟಣ–ಕೆ.ವೆಂಕಟೇಶ್, ಮಡಿಕೇರಿ–ಮಂತರ್‌ಗೌಡ, ವಿರಾಜಪೇಟೆ–ಎ.ಎಸ್. ಪೊನ್ನಣ್ಣ), ಇಬ್ಬರು ಜೆಡಿಎಸ್ (ಹುಣಸೂರು–ಜಿ.ಡಿ. ಹರೀಶ್‌ಗೌಡ, ಚಾಮುಂಡೇಶ್ವರಿ–ಜಿ.ಟಿ.ದೇವೇಗೌಡ) ಹಾಗೂ ಒಬ್ಬರು ಬಿಜೆಪಿ (ಕೃಷ್ಣರಾಜ–ಟಿ.ಎಸ್. ಶ್ರೀವತ್ಸ) ಶಾಸಕರಿದ್ದಾರೆ. ಆದರೆ, ಕಾಂಗ್ರೆಸ್‌ನ ಲಕ್ಷ್ಮಣ ಅವರಿಗೆ ಮುನ್ನಡೆ ದೊರೆತಿರುವುದು ಎರಡು ಕಡೆಗಳಲ್ಲಿ ಮಾತ್ರ. ಉಳಿದೆಲ್ಲ ಕಡೆಗಳಲ್ಲೂ ಎನ್‌ಡಿಎ ಮೈತ್ರಿಕೂಟದ ಯದುವೀರ್‌ ಮೇಲುಗೈ ಸಾಧಿಸಿದ್ದಾರೆ.

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ ಅವರು 5ನೇ ಚುನಾವಣೆಯಲ್ಲೂ ಗೆಲುವು ಸಾಧಿಸಲಾಗಲಿಲ್ಲ. ಹಲವು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದುದು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣಕ್ಕೆ ‘ಜನಾದೇಶ’ ದೊರೆಯಬಹುದು ಎಂಬುದು ಅವರ ನಿರೀಕ್ಷೆಯಾಗಿ‌ತ್ತು. ಆದರೆ, ಅದು ಹುಸಿಯಾಗಿದ್ದು ಸೋಲಿನಿಂದ ಕಂಗೆಟ್ಟಿದ್ದಾರೆ.

ಹಾವೇರಿ: ಹಾವೇರಿ ಲೋಕಸಭಾ ಚುನಾವಣೆಯ ಕಣದಲ್ಲಿದ್ದ 14 ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ವಿಶೇಷವೆಂದರೆ ‘ನೋಟಾ’ ಮತಗಳಷ್ಟೂ ಈ ಅಭ್ಯರ್ಥಿಗಳು ಮತಗಳನ್ನು ಪಡೆದಿಲ್ಲ.

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರು ಬಿಜೆಪಿಯ ಬಿ.ಶ್ರೀರಾಮುಲು ವಿರುದ್ಧ 98,992 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 10 ಅಭ್ಯರ್ಥಿಗಳ ಪೈಕಿ 3ನೇ ಸ್ಥಾನವನ್ನು ‘ನೋಟಾ’ ಪಡೆದಿರುವುದು ವಿಶೇಷವಾಗಿದೆ. ‘ನೋಟಾ‘ಕ್ಕೆ 7,889 ಮತಗಳು ಚಲಾವಣೆಯಾಗಿವೆ. ಕಣದಲ್ಲಿ ಬಿಎಸ್‌ಪಿ, ಕೆಆರ್‌ಎಸ್‌,ಎಸ್‌ಯುಸಿಐ, ಪ್ರಹಾರ್‌ ಜನಶಕ್ತಿ ಪಾರ್ಟಿ, ನವಭಾರತ ಸೇನಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮೂವರು ಪಕ್ಷೇತರರು ಇದ್ದರು. ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. 

ಬೀದರ್‌ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆಳಂದ ಹೊರತುಪಡಿಸಿ ಮಿಕ್ಕುಳಿದ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ ಅಧಿಕ ಮತಗಳನ್ನು ಗಳಿಸಿದೆ. ಅದರ ವಿವರ ಕೆಳಗಿನಂತಿದೆ. ಚಿಂಚೋಳಿ ಕ್ಷೇತ್ರ ಕಾಂಗ್ರೆಸ್; 67,360 ಬಿಜೆಪಿ; 61,445 ಅಂತರ; 5,915 ಬಸವಕಲ್ಯಾಣ ಕ್ಷೇತ್ರ ಕಾಂಗ್ರೆಸ್; 82,618 ಬಿಜೆಪಿ; 73,161 ಅಂತರ; 9,457 ಹುಮನಾಬಾದ್‌ ಕ್ಷೇತ್ರ ಕಾಂಗ್ರೆಸ್; 96,009 ಬಿಜೆಪಿ; 69,087 ಅಂತರ; 26,922 ಬೀದರ ದಕ್ಷಿಣ ಕಾಂಗ್ರೆಸ್; 90,776 ಬಿಜೆಪಿ; 53,956 ಅಂತರ; 36,820 ಬೀದರ ಕ್ಷೇತ್ರ ಕಾಂಗ್ರೆಸ್; 94,247 ಬಿಜೆಪಿ; 61,770 ಅಂತರ; 32,477 ಭಾಲ್ಕಿ ಕ್ಷೇತ್ರ ಕಾಂಗ್ರೆಸ್ : 89180 ಬಿಜೆಪಿ : 72437 ಅಂತರ. : 16743 ಔರಾದ ಕ್ಷೇತ್ರ ಕಾಂಗ್ರೆಸ್; 79,699 ಬಿಜೆಪಿ; 65,701 ಅಂತರ; 13,998 ಆಳಂದ ಕ್ಷೇತ್ರ ಕಾಂಗ್ರೆಸ್; 65,273 ಬಿಜೆಪಿ; 78,209 ಅಂತರ; 12,936

ಚಿತ್ರದುರ್ಗ ಫಲಿತಾಂಶ: ದೇಶದಲ್ಲೇ ಮೊದಲು ––ಲೋಕಸಭಾ ಚುನಾವಣೆಯ ಮತ ಎಣಿಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ ದೇಶದ ಮೊದಲ ಕ್ಷೇತ್ರ ಎಂಬ ಹಿರಿಮೆಗೆ ಚಿತ್ರದುರ್ಗ ಪಾತ್ರವಾಗಿದೆ. ‘ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಫಲವಾಗಿ ದೇಶದಲ್ಲಿಯೇ ಪ್ರಥಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿಯನ್ನು ENCORE ತಂತ್ರಾಂಶದಲ್ಲಿ ಅಧೀಕೃತವಾಗಿ ಘೋಷಣೆ ಮಾಡಲಾಗಿದೆ’ ಎಂದು ಚುನಾವಣಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಅಂತ್ಯವಾಗಿದ್ದು ಯಾವುದೇ ಗೊಂದಲ ಗದ್ದಲ ಇಲ್ಲದೇ ಹಾಗೂ ಅಹಿತಕರ ಘಟನೆಗಳಿಲ್ಲದೇ ಅಂತ್ಯವಾಗಿದೆ. ಬಿಜೆಪಿ17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.