ADVERTISEMENT

777 Charlie | ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೇಲರ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2022, 7:49 IST
Last Updated 16 ಮೇ 2022, 7:49 IST
   

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ‘ಧರ್ಮ‘ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘777 ಚಾರ್ಲಿ‘ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಪರಂವಾ ಸ್ಟುಡಿಯೋಸ್ ನಿರ್ಮಾಣದ 777 ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆಗೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಮತ್ತು ಡ್ಯಾನಿಶ್ ಸೇಠ್ ನಟಿಸಿದ್ದಾರೆ.

ಕಿರಣ್‌ರಾಜ್ ಕೆ ಕಥೆ ಮತ್ತು ನಿರ್ದೇಶನದ ಈ ಚಿತ್ರವನ್ನು ಜಿ.ಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ADVERTISEMENT

ನೊಬಿನ್ ಪಾಲ್ ಸಂಗೀತ ಮತ್ತು ಪ್ರತೀಕ್ ಶೆಟ್ಟಿ ಸಂಕಲನದಲ್ಲಿ 777 ಚಾರ್ಲಿ ಚಿತ್ರ ಮೂಡಿಬಂದಿದ್ದು, ಜೂನ್ 10, 2022ರಂದು ಸಿನಿಮಾ ತೆರೆಕಾಣುತ್ತಿದೆ.

ಚಾರ್ಲಿ ಎಂಬ ನಾಯಿಯೊಂದಿಗಿನ ಆತ್ಮೀಯ ಕ್ಷಣಗಳ ಜತೆ, ತುಂಟಾಟ ಮತ್ತು ಎದುರಾಗುವ ತೊಂದರೆಗಳ ಬಗ್ಗೆ ಸಿನಿಮಾದ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.