'ಸಿತಾರೆ ಜಮೀನ್ ಪರ್' ಚಿತ್ರದ ಪೋಸ್ಟರ್
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಸಿನಿಮಾವು ಬಾಕ್ಸ್ ಆಫೀಸಿನಲ್ಲಿ ₹107.78 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.
ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರ ಜೂನ್ 20ರಂದು ಬಿಡುಗಡೆಯಾಗಿತ್ತು. 2007ರಲ್ಲಿ ಹೊಸ ಅಲೆ ಮೂಡಿಸಿದ್ದ ಅಮೀರ್ ಖಾನ್ ನಟನೆಯ ‘ತಾರೇ ಜಮೀನ್ ಪರ್‘ ಚಿತ್ರದ ಸೀಕ್ವೆಲ್ ‘ಸಿತಾರೆ ಜಮೀನ್ ಪರ್’ ಚಿತ್ರವಾಗಿದೆ.
ಚಿತ್ರದಲ್ಲಿ ಅಮೀರ್ ಅಂಗವಿಕಲರಿಗೆ ಬ್ಯಾಸ್ಕೆಟ್‌ಬಾಲ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ.
ಅಮೀರ್ ಖಾನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ಅಮೀರ್ ಖಾನ್ ಮತ್ತು ಜೆನಿಲಿಯಾ ದೇಶ್‌ಮುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹೊಸಬರನ್ನು ಪರಿಚಯಿಸಲಾಗಿದೆ.
ಚಿತ್ರದಲ್ಲಿ ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ಶರ್ಮಾ, ಆಯುಷ್ ಬನ್ಸಾಲಿ, ಆಶಿಶ್ ಪೆಂಡ್ಸೆ, ರಿಷಿ ಶಹಾನಿ, ರಿಷಬ್ ಜೈನ್, ನಮನ್ ಮಿಶ್ರಾ ಮತ್ತು ಸಿಮ್ರಾನ್ ಮಂಗೇಶ್ಕರ್ ಕೂಡ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.