ಸುಶೀಲಾ ಪಾತ್ರದಲ್ಲಿ ನಟಿ ಚೈತ್ರಾ ಆಚಾರ್
‘ಸಪ್ತ ಸಾಗರದಾಚೆ ಎಲ್ಲೋ‘ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಚೈತ್ರಾ ಆಚಾರ್ ಈಗ ತಮಿಳಿನ ‘ಮೈ ಲಾರ್ಡ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಬಗ್ಗೆ ತಮ್ಮ ಅನುಭವವನ್ನು ಚೈತ್ರಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ
‘ತಮಿಳು ಸಿನಿಮಾದಲ್ಲಿ ಮೊದಲ ನಟನೆಯ ಅನುಭವ. ಈ ಚಿತ್ರದ ಚಿತ್ರೀಕರಣ ವೇಳೆ ಉತ್ತಮ ಪ್ರತಿಭೆಗಳೊಂದಿಗೆ ನಾನು ಸಮಯ ಕಳೆದಿದ್ದೇನೆ. ಈ ಸೆಟ್‌ನಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
‘ಮೈ ಲಾರ್ಡ್’ನಲ್ಲಿ ಚೈತ್ರಾ
‘ಈ ಚಿತ್ರದಲ್ಲಿನ ನನ್ನ ಪಾತ್ರವು ಶಾಶ್ವತವಾಗಿ ನನ್ನೊಂದಿಗೆ ಉಳಿಯಲಿದೆ. ಈ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡು ‘ಸುಶೀಲಾ‘ ಎಂಬ ಪಾತ್ರ ನೀಡಿರುವುದಕ್ಕೆ ಹೆಮ್ಮೆ ಇದೆ‘ ಎಂದು ಬರೆದುಕೊಂಡು ಈ ಚಿತ್ರದ ನಿರ್ದೇಶಕ ರಾಜು ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಚಿತ್ರದ ಸಹ ನಟ ಎಂ. ಶಶಿಕುಮಾರ್ ಕುರಿತು ಬರೆದುಕೊಂಡಿರುವ ಚೈತ್ರಾ, ‘ನೆಚ್ಚಿನ ಸಹ ನಟರಲ್ಲಿ ಇವರು ಕೂಡ ಒಬ್ಬರು. ನೀವು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸಹ ಚಿತ್ರೀಕರಣ ಸೆಟ್‌ನಲ್ಲಿ ನಿಮ್ಮ ಸರಳತೆ ನನಗೆ ಅಚ್ಚುಮೆಚ್ಚು‘ ಎಂದು ಹೇಳಿದ್ದಾರೆ.
‘ಮೈ ಲಾರ್ಡ್’ ಚಿತ್ರತಂಡದ ಜೊತೆ ಚೈತ್ರಾ ಆಚಾರ್
‘ಮೈ ಲಾರ್ಡ್’ ಚಿತ್ರದ ನಿರ್ಮಾಪಕ, ಛಾಯಾಚಿತ್ರಗ್ರಾಹಕ, ಪೋಷಕ ಪಾತ್ರಧಾರಿಗಳನ್ನು ಸೇರಿ ಇಡೀ ಚಿತ್ರತಂಡಕ್ಕೆ ಚೈತ್ರಾ ಅವರು ಕೃತಜ್ಞತೆ ತಿಳಿಸಿದ್ದಾರೆ.
ಈ ಚಿತ್ರವನ್ನು ರಾಜು ಮುರುಗನ್ ಅವರು ನಿರ್ದೇಶನ ಮಾಡಿದ್ದಾರೆ. ಜಯಂತಿ ಅಂಬೇತ್‌ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಶಿಕುಮಾರ್, ಆಶಾ ಶರತ್, ಗುರು ಸೋಮಸುಂದರಂ, ಜಯಪ್ರಕಾಶ್, ಗೋಪಿ ನೈನಾರ್ ಸೇರಿ ಹಲವರು ತಾರಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.