ಸೋನಾಕ್ಷಿ ಸಿನ್ಹಾ
ಚಿತ್ರಕೃಪೆ: ಇನ್‌ಸ್ಟಾಗ್ರಾಮ್
ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿರುವ ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಅನ್ನು ₹22.50 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಮುಂಬೈನಲ್ಲಿರುವ ಎಂಜೆ ಷಾ ಗ್ರೂಪ್‌ನ ವಸತಿ ಸಮುಚ್ಚಯದಲ್ಲಿ ಈ ಅಪಾರ್ಟ್‌ಮೆಂಟ್ ಇದೆ. ಇದೇ ವಸತಿ ಸಮುಚ್ಚಯದಲ್ಲಿ ಸೋನಾಕ್ಷಿ ಅವರು ಮತ್ತೊಂದು ಅಪಾರ್ಟ್‌ಮೆಂಟ್ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
2020ರ ಮಾರ್ಚ್‌ನಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ಸೋನಾಕ್ಷಿ ಸಿನ್ಹಾ ಅವರು ₹14 ಕೋಟಿಗೆ ಖರೀದಿಸಿದ್ದರು. ಇದೀಗ ₹22.50 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಂತೆ ಸೋನಾಕ್ಷಿ ಅವರು ಶೇ 61ರಷ್ಟು ಲಾಭ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
2024ರ ಜೂನ್ 23ರಂದು ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.