
ಕುಟುಂಬದ ಜೊತೆ ನಟಿ ಶ್ರೀಲೀಲಾ
ನಟನೆ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ ಅವರು ಕೆಲ ದಿನಗಳ ಹಿಂದೆ ಎಂಬಿಬಿಎಸ್ ಮುಗಿಸಿ, ಮುಂಬೈನ ಡಿ.ವೈ ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.
ತಮ್ಮ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಜೊತೆ ನಿಂತು ಸಹಕರಿಸಿದವರಿಗೆ ಶ್ರೀಲೀಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ತಿಳಿಸಿದ್ದಾರೆ.
‘ಈ ಸುದೀರ್ಘ ಪಯಣದಲ್ಲಿ ಹೊರಗಿನ ಪ್ರಪಂಚದಿಂದ ದೂರವುಳಿದಿದ್ದಕ್ಕೆ ನಾನು ನಾನಾಗಿರಲು ಸಾಧ್ಯವಾಯಿತು. ಈ ಶಿಕ್ಷಣ ಸಂಸ್ಥೆ ನನಗೆ ನೆಮ್ಮದಿಯ ಜಾಗವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.
ವೈದ್ಯೆ ಪದವಿ ಪಡೆದ ಶ್ರೀಲೀಲಾ
ನಿಮ್ಮ ಹುಡುಗಿ ಮಾತನ್ನು ಉಳಿಸಿಕೊಂಡಿದ್ದಾಳೆ ಎಂದು ಬರೆದುಕೊಂಡಿರುವ ಶ್ರೀಲೀಲಾ, ‘ಇದು ಕೇವಲ ಒಂದು ಪದವಿಯಲ್ಲ. ಇದು ನನ್ನ ಬೆಳವಣಿಗೆ, ನಂಬಿಕೆ, ಕಣ್ಣೀರಿನ ದಿನಗಳು, ಸೋಲನ್ನು ಒಪ್ಪಿಕೊಳ್ಳದೇ ಹಠದಿಂದ ಮುಂದುವರಿದಿದ್ದು ಸಂಭ್ರಮಕ್ಕೆ ಕಾರಣವಾಗಿದೆ. ನನ್ನ ಪರೀಕ್ಷೆಗಳ ಸಮಯದಲ್ಲಿ ಕೆಲಸದ ಒತ್ತಡವನ್ನು ಸರಿದೂಗಿಸಿ, ಗೊಂದಲದ ನಡುವೆಯೂ ನನ್ನ ಪರವಾಗಿ ನಿಂತ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಚಿತ್ರರಂಗದ ಸಹೋದ್ಯೋಗಿಗಳಿಗೆ ಹೃದಯಾಂತರಾಳದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
‘ನಾನು ನನ್ನನ್ನೇ ನಂಬಲು ಕಲಿಯುತ್ತಿದ್ದ ದಿನಗಳಲ್ಲಿ, ನನ್ನ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಪ್ರೀತಿಯ ಓದುಗರೇ.. ನನ್ನ ಯಶಸ್ಸಿಗಾಗಿ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ, ಹಾರೈಕೆಗಳಿಗೆ ಕೃತಜ್ಞತೆ ತಿಳಿಸುತ್ತೇನೆ‘ ಎಂದು ಕಿಸ್ ಬೆಡಗಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.