ADVERTISEMENT

'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 7:08 IST
Last Updated 2 ಡಿಸೆಂಬರ್ 2025, 7:08 IST
   

‘ನಿನಗೆಂದೆ’ ಎಂಬ ಆಲ್ಬಮ್‌ ಸಾಂಗ್‌ ಒಂದಕ್ಕೆ ಗಾಯಕಿ ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಆಲ್ಬಮ್ ಹಾಡಿನಲ್ಲಿ ಐಶ್ವರ್ಯ ಜೊತೆ ಅವರ ಪತಿ ಸಾಯಿ ಸ್ವರೂಪ್ ಕೂಡ ನಟಿಸಿದ್ದಾರೆ.

ಗಾಯಕಿ ಐಶ್ವರ್ಯ ರಂಗರಾಜನ್ ಅವರು ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ತೆಲುಗು ವೇದಿಕೆಯಲ್ಲಿ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್‘ ಚಿತ್ರದ ಹಾಡನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ADVERTISEMENT

ಕನ್ನಡದ ಅನೇಕ ನಟರ ಚಿತ್ರಗಳ ಹಾಡಿಗೆ ಧ್ವನಿ ನೀಡಿದ್ದಾರೆ.

ಐಶ್ವರ್ಯ ಅವರು UI ಚಿತ್ರದ 'ಟ್ರೋಲ್ ಆಗುತ್ತೆ', 'ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ’, ‘ನವಾಮಿ ನವಾಮಿ’, ‘ಮಳೆಯೇ ಮಳೆಯೇ’ 'ಪುಷ್ಪವತಿ' ಸೇರಿದಂತೆ ಅನೇಕ ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.