ADVERTISEMENT

ನಟ ಅಜಯ್ ದೇವಗನ್ ಅಭಿನಯದ 'ದೇ ದೇ ಪ್ಯಾರ್ ದೇ 2' ನವೆಂಬರ್‌ 14ಕ್ಕೆ ತೆರೆಗೆ

ಪಿಟಿಐ
Published 11 ಅಕ್ಟೋಬರ್ 2025, 7:29 IST
Last Updated 11 ಅಕ್ಟೋಬರ್ 2025, 7:29 IST
<div class="paragraphs"><p>ಚಿತ್ರದ ಪೋಸ್ಟರ್</p></div>

ಚಿತ್ರದ ಪೋಸ್ಟರ್

   

ಮುಂಬೈ: ಅನ್ಶುಲ್ ಶರ್ಮಾ ನಿರ್ದೇಶನದ ಬಾಲಿವುಡ್‌ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದೇ ದೇ ಪ್ಯಾರ್ ದೇ–2' ನವೆಂಬರ್‌ 14ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಟ ಅಜಯ್‌ ದೇವಗನ್‌ ಪೋಸ್ಟರ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ADVERTISEMENT

ಮೇ 2019ರಲ್ಲಿ ಬಿಡುಗಡೆಯಾದ 'ದೇ ದೇ ಪ್ಯಾರ್ ದೇ' ಮುಂದುವರಿದ ಭಾಗ ಇದಾಗಿದೆ.

ಈ ಚಿತ್ರದಲ್ಲಿ ಸುಮಾರು 50 ವರ್ಷದ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಅಜಯ್‌ ದೇವಗನ್‌ ಕಾಣಿಸಿಕೊಳ್ಳಲಿದ್ದಾರೆ. ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ. ಇದಕ್ಕೆ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಎದುರಾಗುವ ಸವಾಲುಗಳೇನು ಎಂಬುವುದು ಈ ಚಿತ್ರದಲ್ಲಿದೆ.

ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ದೇವಗನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್ ಮಾಧವನ್, ಜಾವೇದ್ ಜಾಫೇರಿ ಮತ್ತು ಮೀಜಾನ್ ಜಾಫ್ರಿ, ಗೌತಮಿ ಕಪೂರ್ ಮತ್ತು ಇಶಿತಾ ದತ್ತಾ ಸಹ ನಟಿಸಿದ್ದಾರೆ.

ಈ ಚಿತ್ರವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಮತ್ತು ಲವ್ ಫಿಲ್ಮ್ಸ್‌ನ ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.