ADVERTISEMENT

ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ3‘ ಸಿನಿಮಾಕ್ಕೆ ಅಭಿಮಾನಿಗಳ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 9:12 IST
Last Updated 19 ಸೆಪ್ಟೆಂಬರ್ 2025, 9:12 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/akshaykumar">@akshaykumar</a></p></div>

ಚಿತ್ರ ಕೃಪೆ: @akshaykumar

   

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ನಟನೆಯ ‘ಜಾಲಿ ಎಲ್‌ಎಲ್‌ಬಿ 3‘ ಸಿನಿಮಾವು ಚಿತ್ರ ಮಂದಿರಗಳಲ್ಲಿ ಇಂದು ತೆರೆಕಂಡಿದೆ.

ಆಲೋಕ್ ಜೈನ್ ನಿರ್ಮಾಣದ ‘ಜಾಲಿ ಎಲ್‌ಎಲ್‌ಬಿ 3‘ ಚಿತ್ರವನ್ನು ಸುಭಾಷ್ ಕಪೂರ್ ಅವರು ನಿರ್ದೆಶಿಸಿದ್ದಾರೆ.

ADVERTISEMENT

‘ಜಾಲಿ ಎಲ್‌ಎಲ್‌ಬಿ 3‘ ಚಿತ್ರವು ಉತ್ತರ ಪ್ರದೇಶದಲ್ಲಿ ನಡೆದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರತಿಭಟನೆಗಳನ್ನು ಆಧಾರಿಸಿದ ಕಥೆ ಎನ್ನಲಾಗಿದೆ.

ಸಿನಿಮಾ ವಿಕ್ಷೀಸಿದ ಸಿನಿ ಪ್ರಿಯರು ಚಿತ್ರಕಥೆ ಹಾಗೂ ಅಕ್ಷಯ್ ಕುಮಾರ್ ಅವರ ನಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ಅಮೃತ ರಾವ್, ಸೌರಭ್ ಶುಕ್ಲಾ, ಅರ್ಷದ್ ವಾರ್ಸಿ, ಹುಮಾ ಖುರೇಷಿ, ಅರ್ಜುನ್ ಪಾಂಚಾಲ್ ಅವರು ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.