
ನಟ ಸಿರೀಶ್ ಹಾಗೂ ನಯನಿಕಾ
ಚಿತ್ರ: ಇನ್‌ಸ್ಟಾಗ್ರಾಮ್
ತೆಲುಗು ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪ್ರೀತಿಸಿದ ಹುಡುಗಿ ನಯನಿಕಾ ಜೊತೆಗೆ ಸಿರೀಶ್ ಅವರು ಅಕ್ಟೋಬರ್ 31ರಂದು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ನಟ ಅಲ್ಲು ಸಿರೀಶ್ ಅವರ ನಿಶ್ಚಿತಾರ್ಥದಲ್ಲಿ ಅಲ್ಲು ಮತ್ತು ಕೊನಿಡೆಲಾ ಕುಟುಂಬಸ್ಥರು, ಟಾಲಿವುಡ್ ತಾರೆಯರು ಹಾಗೂ ಆಪ್ತರು ಭಾಗಿಯಾಗಿದ್ದರು.
ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಮತ್ತು ಉಪಾಸನಾ ಹಾಗೂ ವರುಣ್ ತೇಜ್ ಮತ್ತು ಲಾವಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲ್ಲು ಸಿರೀಶ್ ಹಾಗೂ ನಯನಿಕಾ ನಿಶ್ಚಿತಾರ್ಥ ಫೋಟೊಗಳನ್ನು ನಟ ಅಲ್ಲು ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಡೀ ಕುಟುಂಬಸ್ಥರು ಒಟ್ಟಾಗಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ನಿಶ್ಚಿತಾರ್ಥದ ಫೋಟೋಗಳಲ್ಲಿ ನಯನಿಕಾ ಸುಂದರವಾಗಿ ಕಾಣುತ್ತಿದ್ದರು. ತಮ್ಮ ಬೆರಳಿನಲ್ಲಿ ದೊಡ್ಡ ವಜ್ರದ ಉಂಗುರವನ್ನು ಧರಿಸಿದ್ದರು.
ಕೆಂಪು ಮತ್ತು ಚಿನ್ನದ ಸಬ್ಯಸಾಚಿ ಲೆಹೆಂಗಾ ಧರಿಸಿದ್ದ ನಯನಿಕಾ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.