ADVERTISEMENT

ಪುಷ್ಪ–2 ಟಿಕೆಟ್ ದರ ಏರಿಕೆಗೆ ಅನುಮತಿ: ಸಿಎಂ ನಾಯ್ಡುಗೆ ಅಲ್ಲು ಅರ್ಜುನ್ ಧನ್ಯವಾದ

ಪಿಟಿಐ
Published 3 ಡಿಸೆಂಬರ್ 2024, 9:13 IST
Last Updated 3 ಡಿಸೆಂಬರ್ 2024, 9:13 IST
<div class="paragraphs"><p>'ಪುಷ್ಪ–2 ದಿ ರೂಲ್‌' ಚಿತ್ರದ ಪೋಸ್ಟರ್‌</p></div>

'ಪುಷ್ಪ–2 ದಿ ರೂಲ್‌' ಚಿತ್ರದ ಪೋಸ್ಟರ್‌

   

(ಚಿತ್ರ ಕೃಪೆ–@alluarjun)

ನವದೆಹಲಿ: 'ಪುಷ್ಪ–2 ದಿ ರೂಲ್‌' ಚಿತ್ರದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ ಆಂಧ್ರ ಪ್ರದೇಶ ಸರ್ಕಾರಕ್ಕೆ ನಟ ಅಲ್ಲು ಅರ್ಜುನ್ ಧನ್ಯವಾದ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಟಿಕೆಟ್‌ ದರ ಹೆಚ್ಚಿಸಲು ಅನುಮತಿ ನೀಡಿದ ಆಂಧ್ರಪ್ರದೇಶ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಗತಿಪರ ನಿರ್ಧಾರವು ತೆಲುಗು ಚಿತ್ರರಂಗದ ಬೆಳವಣಿಗೆಗೆ ನಿಮ್ಮ ಅಚಲವಾದ ಬದ್ಧತೆಯನ್ನು ತೋರಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

'ಚಲನಚಿತ್ರೋದ್ಯಮವನ್ನು ಸಶಕ್ತಗೊಳಿಸಲು ಪ್ರೋತ್ಸಾಹ ನೀಡಿದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ವಿಶೇಷ ಧನ್ಯವಾದಗಳು' ಎಂದೂ ಅಲ್ಲು ಅರ್ಜುನ್ ಹೇಳಿದ್ದಾರೆ.

ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‌‘'ಪುಷ್ಪ–2 ದಿ ರೂಲ್‌' ಚಿತ್ರ ಡಿಸೆಂಬರ್ 5ರಂದು ತೆರೆಕಾಣಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.