ನಟ ಅನಿರುದ್ಧ ಜತ್ಕರ್
ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಥಾ ಕಲ್ಪನೆಗಳಿಗೆ ಕರೆ ನೀಡಿದ್ದು ಹಾರರ್, ಥ್ರಿಲ್ಲರ್ ಅಥವಾ ಮಿಸ್ಟರಿ ಶೈಲಿಯ ಮೂಲ ಕಥಾ ಕಲ್ಪನೆಗಳನ್ನು ಹುಡುಕುತ್ತಿದ್ದೇನೆ. ನಿಮಗೆ ಕಥಾ ಕಲ್ಪನೆ ಇದ್ದರೆ, ದಯವಿಟ್ಟು 300 ಪದಗಳ ವರೆಗೆ ಸಂಕ್ಷಿಪ್ತ ವಿವರವನ್ನು magicalfilmscripts@gmail.com A ಕಳುಹಿಸಿ. ಚಿತ್ರಕಥೆ ಕಳುಹಿಸಲು 2026ರ ಫೆ.23ರಂದು ಕೊನೆ ದಿನಾಂಕವಾಗಿದೆ’ ಎಂದು ಬರೆದು ಚಿತ್ರಕಥೆಗೆ ಆಹ್ವಾನ ನೀಡಿದ್ದಾರೆ.
ಸ್ವಚ್ಛತೆಗಾಗಿ ಒತ್ತು ನೀಡುವ ನಟ ಅನಿರುದ್ಧ ಜತ್ಕರ್ ಅವರು ಬೆಂಗಳೂರಿನ ಅನೇಕ ನಗರಗಳಲ್ಲಿ ಕಸದ ರಾಶಿಯ ತೆರವಿಗಾಗಿ ಮನವಿ ಮಾಡುವುದರ ಜತೆಗೆ, ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದರು.
ನಟ ಅನಿರುದ್ಧ ಜತ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸ್ವಚ್ಛತೆ ಅಭಿಯಾನದಡಿ ವಿಶ್ವದಾಖಲೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಕೆಲ ತಿಂಗಳ ಹಿಂದೆ ‘ಲಂಡನ್ ಯುನೈಟೆಡ್ ಕಿಂಗ್‌ಡಮ್’ ಹಾಗೂ ‘ಚಿನ್ನಸ್ವಾಮಿ ಹಿಂದೂಸ್ತಾನ್ ಗಗನ್ ಗೌರವ – ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
ಅನಿರುದ್ಧ ಅವರು ‘ಜೇಷ್ಠ, ‘ನೀನೆಲ್ಲೋ ನಾನಲ್ಲೆ ’,‘ತುಂಟಾ’, ‘ರಾಜ ಸಿಂಹ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಗೂ ‘ಜೊತೆ ಜೊತೆಯಲಿ’. ‘ಸೂರ್ಯವಂಶ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.